Asianet Suvarna News Asianet Suvarna News

ಉಗ್ರರ ಸ್ವರ್ಗಗಳ ಮೇಲೆ ಆರ್ಥಿಕ ದಿಗ್ಬಂಧನ ಹೇರಬೇಕು: ಜಗತ್ತಿಗೆ ಅಮಿತ್ ಶಾ ಕರೆ

ಭಯೋತ್ಪಾದನೆ ವಿರುದ್ಧ ಜಾಗತಿಕ ಸಮುದಾಯವು ಹೆಗಲಿಗೆ ಹೆಗಲು ಕೊಟ್ಟು ಹೋರಾಡಬೇಕು ಎಂದು ಎಲ್ಲ ದೇಶಗಳಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕರೆ ಕೊಟ್ಟಿದ್ದಾರೆ. ಅಲ್ಲದೆ, ‘ಉಗ್ರರ ಸ್ವರ್ಗ’ ಎನ್ನಿಸಿರುವ ದೇಶಗಳ ಮೇಲೆ ಆರ್ಥಿಕ ದಿಗ್ಭಂಧನ ಹೇರಬೇಕು ಎಂದು ಪಾಕಿಸ್ತಾನದ ಹೆಸರೆತ್ತದೇ ಪರೋಕ್ಷ ಮನವಿ ಮಾಡಿದ್ದಾರೆ.

Union Home Minister amith shah said will put Economic blockage on terrorists haven akb
Author
First Published Nov 20, 2022, 10:33 AM IST

ನವದೆಹಲಿ: ಭಯೋತ್ಪಾದನೆ ವಿರುದ್ಧ ಜಾಗತಿಕ ಸಮುದಾಯವು ಹೆಗಲಿಗೆ ಹೆಗಲು ಕೊಟ್ಟು ಹೋರಾಡಬೇಕು ಎಂದು ಎಲ್ಲ ದೇಶಗಳಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕರೆ ಕೊಟ್ಟಿದ್ದಾರೆ. ಅಲ್ಲದೆ, ‘ಉಗ್ರರ ಸ್ವರ್ಗ’ ಎನ್ನಿಸಿರುವ ದೇಶಗಳ ಮೇಲೆ ಆರ್ಥಿಕ ದಿಗ್ಭಂಧನ ಹೇರಬೇಕು ಎಂದು ಪಾಕಿಸ್ತಾನದ ಹೆಸರೆತ್ತದೇ ಪರೋಕ್ಷ ಮನವಿ ಮಾಡಿದ್ದಾರೆ. ದಿಲ್ಲಿಯಲ್ಲಿ ಶುಕ್ರವಾರ ಅರಂಭವಾಗಿದ್ದ 2 ದಿನಗಳ ‘ಭಯೋತ್ಪಾದನೆಗೆ ಹಣಕಾಸು ನೆರವು ಬೇಡ’ ಹೆಸರಿನ 3ನೇ ಅಂತರಾಷ್ಟ್ರೀಯ ಸಮ್ಮೇಳನದ (International Conference) ಸಮಾರೋಪ ಸಮಾರಂಭದಲ್ಲಿ ಶನಿವಾರ ಮಾತನಡಿದ ಶಾ (Amit Shah), ‘ಭಯೋತ್ಪಾದನೆಯನ್ನೇ ತಮ್ಮ ವಿದೇಶಾಂಗ ನೀತಿಯನ್ನಾಗಿ ಮಾಡಿಕೊಂಡಿರುವ ಕೆಲ ದೇಶಗಳು ಭಯೋತ್ಪಾದನೆಗೆ ಸ್ವರ್ಗವಾಗಿವೆ. ಇವುಗಳನ್ನು ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಏಕಾಂಗಿಯನ್ನಾಗಿ ಮಾಡುವ ಮೂಲಕ ಭಯೋತ್ಪಾದನೆಯನ್ನು ತಡೆಗಟ್ಟಬಹುದು’ ಎಂದು ಹೇಳಿದರು.ಅಲ್ಲದೇ, ‘ಭಯೋತ್ಪದನೆಗೆ ಯಾವುದೇ ಅಂತರಾಷ್ಟ್ರೀಯ ಗಡಿ ಎಂಬುದಿಲ್ಲ ಹಾಗಾಗಿ ಎಲ್ಲ ಬೇಧಗಳನ್ನು ಮರೆತು ದೇಶಗಳು ಒಂದಾಗಿ ಹೋರಾಡಬೇಕು. ಉಗ್ರರಿಗೆ ಹೊಸ ತಂತ್ರಜ್ಞಾನದ ಮೂಲಕ ಹಣದ ಹರಿವನ್ನೂ ತಡೆಗಟ್ಟಬೇಕು’ ಎಂದರು.


ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತ ವಿಶ್ವದ ನಾಯಕತ್ವ ವಹಿಸಿದೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ವಿದೇಶಾಂಗ ನೀತಿ ಹೆಸರಲ್ಲಿ ಭಯೋತ್ಪಾದನೆ ಬೆಂಬಲಿಸುವ ದೇಶಗಳಿಗೆ ತಕ್ಕ ಪಾಠ, ಪಾಕ್-ಚೀನಾಗೆ ಮೋದಿ ಎಚ್ಚರಿಕೆ!

Follow Us:
Download App:
  • android
  • ios