Asianet Suvarna News Asianet Suvarna News

Twitterನಲ್ಲಿ ಒನ್‌ ವರ್ಡ್‌ ಟ್ವೀಟ್‌ ಹವಾ: ಉಕ್ರೇನ್‌ ಅಧ್ಯಕ್ಷ, ಸಚಿನ್‌ ಟ್ವೀಟ್‌ಗೆ ವ್ಯಾಪಕ ಮೆಚ್ಚುಗೆ

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇತ್ತೀಚೆಗೆ ಒನ್‌ ವರ್ಡ್‌ ಟ್ವೀಟ್‌ ಮಾಡುವ ಮೂಲಕ ಈ ಟ್ರೆಂಡ್‌ಗೆ ಸೇರಿದ ಇತ್ತೀಚಿನ ವ್ಯಕ್ತಿಯಾಗಿದ್ದಾರೆ. ಉಕ್ರೇನ್ ಅಧ್ಯಕ್ಷರ ಸಾಮಾಜಿಕ ಮಾಧ್ಯಮ ಪೋಸ್ಟ್ ಇತ್ತೀಚಿನ ಟ್ವಿಟ್ಟರ್‌ ಟ್ರೆಂಡ್‌ನ ಒಂದು ಭಾಗವಾಗಿದೆ. ಅಲ್ಲಿ ಬ್ರ್ಯಾಂಡ್‌ಗಳು ಮತ್ತು ಸೆಲೆಬ್ರಿಟಿಗಳು ಅವರು ಹೆಚ್ಚು ಗುರುತಿಸುವ ಒಂದು ಪದವನ್ನು ಟ್ವೀಟ್ ಮಾಡುತ್ತಾರೆ. ಇದು ವ್ಯಕ್ತಿ ಅಥವಾ ಬ್ರ್ಯಾಂಡ್‌ನ ಹೆಚ್ಚು ಗುರುತಿಸಬಹುದಾದ ವೈಶಿಷ್ಟ್ಯ ಅಥವಾ ಗುಣಮಟ್ಟದ ಒಂದು ರೀತಿಯ ಶಾರ್ಟ್-ಹ್ಯಾಂಡ್ ಸೂಚಕವಾಗಿದೆ.

ukraines zelensky joins one word twitter trend wins heart in internet sachin tendulkar joe biden ash
Author
First Published Sep 4, 2022, 12:48 PM IST | Last Updated Sep 4, 2022, 12:48 PM IST

ಈಗ ಎಲ್ಲೆಲ್ಲೂ ಸಾಮಾಜಿಕ ಜಾಲತಾಣದ್ದೇ (Social Media) ಹೆಚ್ಚು ಹವಾ. ಅದರಲ್ಲೂ, ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್‌ನಲ್ಲಿ (Twitter) ನಾನಾ ವಿಷಯಗಳು ಟ್ರೆಂಡ್‌ ಆಗುತ್ತಿರುತ್ತದೆ. ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ಒನ್‌ ವರ್ಡ್‌ ಟ್ರೆಂಡ್‌ ಆರಂಭವಾಗಿದೆ. ಒಂದೇ ಪದದ ಟ್ವೀಟ್‌ಗಳು ಸಾಕಷ್ಟು ಮೆಚ್ಚುಗೆಯನ್ನು ಪಡೆಯುತ್ತಿವೆ. ಈ ಟ್ರೆಂಡ್‌ಗೆ ಭಾರತೀಯರು ಮಾತ್ರವಲ್ಲದೆ ವಿದೇಶಿ ಗಣ್ಯರು ಸೇರಿ ನೆಟ್ಟಿಗರು ಸಾಕಷ್ಟು ಹವಾ ಸೃಷ್ಟಿ ಮಾಡಿದ್ದಾರೆ. ಅದೇ ರೀತಿ, ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky), ಶುಕ್ರವಾರ, ಟ್ವಿಟ್ಟರ್‌ನಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಅವರ ಒನ್‌ ವರ್ಡ್‌ ಟ್ವೀಟ್‌ (One Word Tweet) ಇಂಟರ್‌ನೆಟ್‌ನಲ್ಲಿ ಸಾಕಷ್ಟು ಮೆಚ್ಚುಗೆ ಪಡೆದಿದೆ. 

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇತ್ತೀಚೆಗೆ ಒನ್‌ ವರ್ಡ್‌ ಟ್ವೀಟ್‌ ಮಾಡುವ ಮೂಲಕ ಈ ಟ್ರೆಂಡ್‌ಗೆ ಸೇರಿದ ಇತ್ತೀಚಿನ ವ್ಯಕ್ತಿಯಾಗಿದ್ದಾರೆ. ಉಕ್ರೇನ್ ಅಧ್ಯಕ್ಷರ ಸಾಮಾಜಿಕ ಮಾಧ್ಯಮ ಪೋಸ್ಟ್ ಇತ್ತೀಚಿನ ಟ್ವಿಟ್ಟರ್‌ ಟ್ರೆಂಡ್‌ನ ಒಂದು ಭಾಗವಾಗಿದೆ. ಅಲ್ಲಿ ಬ್ರ್ಯಾಂಡ್‌ಗಳು ಮತ್ತು ಸೆಲೆಬ್ರಿಟಿಗಳು ಅವರು ಹೆಚ್ಚು ಗುರುತಿಸುವ ಒಂದು ಪದವನ್ನು ಟ್ವೀಟ್ ಮಾಡುತ್ತಾರೆ. ಇದು ವ್ಯಕ್ತಿ ಅಥವಾ ಬ್ರ್ಯಾಂಡ್‌ನ ಹೆಚ್ಚು ಗುರುತಿಸಬಹುದಾದ ವೈಶಿಷ್ಟ್ಯ ಅಥವಾ ಗುಣಮಟ್ಟದ ಒಂದು ರೀತಿಯ ಶಾರ್ಟ್-ಹ್ಯಾಂಡ್ ಸೂಚಕವಾಗಿದೆ.

ಉಕ್ರೇನ್‌ ವಿಚಾರವಾಗಿ ಮೊಟ್ಟಮೊದಲ ಬಾರಿಗೆ ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತದ ಮತ!

ಇದೇ ರೀತಿ, ವೊಲೊಡಿಮಿರ್ ಝೆಲೆನ್ಸ್ಕಿ - "ಫ್ರೀಡಮ್" (Freedom) ಎಂಬ ಒಂದೇ ಪದದ ಟ್ವೀಟ್‌ ಮಾಡಿದ್ದು, ಈ ಮೂಲಕ ಈ ಟ್ರೆಂಡ್‌ ಅನ್ನು ಸೇರಿದ ಇತ್ತೀಚಿನ ವ್ಯಕ್ತಿಯಾದ್ದಾರೆ. ಇತ್ತೀಚಿನ ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ, "ಫ್ರೀಡಮ್" ಉಕ್ರೇನಿಯನ್ನರ ಹೋರಾಟದ ಬಗ್ಗೆ ಏನೆಂದು ಸೂಚಿಸುತ್ತದೆ. ವೊಲೊಡಿಮಿರ್ ಝೆಲೆನ್ಸ್ಕಿ ಅವರ ಒಂದು ಪದದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಾವಿರ ಪದಗಳ ಮೌಲ್ಯ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಈ ಹಿನ್ನೆಲೆ ಅವರ ಟ್ವೀಟ್‌ಗೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗುತ್ತದೆ. 
ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಇದನ್ನು 198 ಸಾವಿರಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದೆ ಮತ್ತು 19 ಸಾವಿರಕ್ಕೂ ಅಧಿಕ ಬಾರಿ ರೀಟ್ವೀಟ್ ಮಾಡಲಾಗಿದೆ. ಅವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಬಳಕೆದಾರರು ತಮ್ಮದೇ ಆದ ಮೀಮ್ಸ್‌ ಮತ್ತು ಪ್ರತ್ಯುತ್ತರಗಳನ್ನು ಹಂಚಿಕೊಂಡಿದ್ದಾರೆ. "ಒಂದು ಪದದ ಟ್ರೆಂಡ್" ಟ್ವಿಟ್ಟರ್‌ನಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಈ ಟ್ರೆಂಡ್‌ ಯುಎಸ್ ಅಧ್ಯಕ್ಷ ಜೋ ಬೈಡೆನ್‌ ಅವರ ಕಚೇರಿಯ ಗಮನವನ್ನೂ ಸೆಳೆದಿದ್ದು, ಅವರು ಸಹ ಒಂದು ಪದದ ಟ್ವೀಟ್‌ ಮಾಡಿದ್ದಾರೆ. 
ಅಮೆರಿಕನ್ ರೈಲು ಸೇವಾ ಪೂರೈಕೆದಾರ ಆಮ್ಟ್ರಾಕ್‌ನ ಸಾಮಾಜಿಕ ಮಾಧ್ಯಮ ತಂಡದಿಂದ ಈ ಪ್ರವೃತ್ತಿಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಲಾಗಿದೆ. ಆಮ್ಟ್ರಾಕ್‌ನ ಟ್ವಿಟ್ಟರ್‌ ಹ್ಯಾಂಡಲ್ ಗುರುವಾರ ‘’ರೈಲುಗಳು (Trains)’’ ಎಂಬ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದರು. ಅಂದಿನಿಂದ ಈ ಪ್ರವೃತ್ತಿ ತನ್ನದೇ ಆದ ಹವಾ ಸೃಷ್ಟಿಸಿದೆ. 

ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮೊದಲಾದವರು ಈ ಟ್ರೆಂಡ್‌ನಲ್ಲಿ ಪಾಲ್ಗೊಂಡಿದ್ದಾರೆ. ತಮ್ಮ ನೆಚ್ಚಿನ 1 ಪದ ಟ್ವೀಟ್‌ ಮಾಡುವುದು ಇದರ ಮುಖ್ಯಾಂಶವಾಗಿದ್ದು, ಈ ಒಂದು ಪದದ ಟ್ವೀಟ್‌ಗಳು ಸಿಕ್ಕಾಪಟ್ಟೆ ವೈರಲ್‌ ಆಗಿವೆ. ಭಾರತದ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ‘ಕ್ರಿಕೆಟ್‌’ (Cricket) ಎಂದು ಟ್ವೀಟ್‌ ಮಾಡಿದ್ದಾರೆ. ಅದೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ‘ಡೆಮಾಕ್ರಸಿ’ (ಪ್ರಜಾಪ್ರಭುತ್ವ) ಎಂದು ಟ್ವೀಟ್‌ ಮಾಡಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕೂಡಾ ‘ಯೂನಿವರ್ಸ್‌’ (ವಿಶ್ವ) ಎಂದು ಟ್ವೀಟ್‌ ಮಾಡಿದೆ. ಇದಲ್ಲದೇ ಬ್ಲೂಮ್‌ಬರ್ಗ್‌ ‘ಬ್ಯುಸಿನೆಸ್‌’ (ವ್ಯಾಪಾರ), ವಾಷಿಂಗ್ಟನ್‌ ಪೋಸ್ಟ್‌ ‘ನ್ಯೂಸ್‌’ (ಸುದ್ದಿ), ಸಿಎನ್‌ಎನ್‌ ‘ಬ್ರೇಕಿಂಗ್‌ ನ್ಯೂಸ್‌’ ಎಂದು ಟ್ವೀಟ್‌ ಮಾಡಿವೆ.


ರಷ್ಯಾ-ಉಕ್ರೇನ್‌ ಕದನಕ್ಕೆ 6 ತಿಂಗಳು ಪೂರ್ಣ: ಶೇ. 20 ಉಕ್ರೇನ್‌ ಭೂಭಾಗ ವಶಪಡಿಸಿಕೊಂಡ ರಷ್ಯಾ

Latest Videos
Follow Us:
Download App:
  • android
  • ios