ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಅಲ್ಲದೆ, ಅದ್ಯಕ್ಷರ ಬೆಂಗಾವಲು ವಾಹನಕ್ಕೂ ಡಿಕ್ಕಿಯಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರಯಾಣಿಸುತ್ತಿದ್ದ ಕಾರಿಗೆ ವಾಹನವೊಂದು ಡಿಕ್ಕಿ ಹೊಡೆದಿದೆ. ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಈ ಅಪಘಾತ ವರದಿಯಾಗಿದ್ದು, ಉಕ್ರೇನ್ ಅಧ್ಯಕ್ಷ ಪ್ರಯಾನಿಸುತ್ತಿದ್ದ ಕಾರು ಮಾತ್ರವಲ್ಲದೆ, ಉಕ್ರೇನ್ ಅಧ್ಯಕ್ಷರ ಬೆಂಗಾವಲು ವಾಹನಕ್ಕೂ ಡಿಕ್ಕಿ ಹೊಡೆದಿದ್ದಾರೆ. ಈ ಅಪಘಾತದ ಬಗ್ಗೆ ಮಾಹಿತಿ ನೀಡಿದ ವೊಲೊಡಿಮಿರ್ ಝೆಲೆನ್ಸ್ಕಿ ವಕ್ತಾರರು, ‘’ಕೀವ್‌ನಲ್ಲಿ ಉಕ್ರೇನ್ ಅಧ್ಯಕ್ಷರ ಕಾರಿಗೆ ಮತ್ತು ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದೆ" ಎಂದು ಸೆರ್ಗಿ ನಿಕಿಫೊರೊವ್ ಫೇಸ್‌ಬುಕ್‌ನಲ್ಲಿ ಸ್ಥಳೀಯ ಸಮಯ 1:22 ಕ್ಕೆ (22:22 GMT) ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
ಆದರೂ ಈ ಅಪಘಾತದಲ್ಲಿ ಉಕ್ರೇನ್ ಅಧ್ಯಕ್ಷರು ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಅವರ ವಕ್ತಾರರು ಗುರುವಾರ ಮುಂಜಾನೆ ಹೇಳಿದರು. ಉಕ್ರೇನ್ ಅಧ್ಯಕ್ಷರನ್ನು ವೈದ್ಯರು ಪರೀಕ್ಷಿಸಿದ್ದಾರೆ. ಅವರಿಗೆ ಯಾವುದೇ ಗಂಭೀರ ಗಾಯಗಳು ಕಂಡು ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಅದೇ ರೀತಿ, "ಅಧ್ಯಕ್ಷರ ಜೊತೆಗಿದ್ದ ವೈದ್ಯರು ಪ್ರಯಾಣಿಕ ಕಾರಿನ ಚಾಲಕನಿಗೆ ತುರ್ತು ಸಹಾಯವನ್ನು ಒದಗಿಸಿದರು ಮತ್ತು ಅವರನ್ನು ಆ್ಯಂಬುಲೆನ್ಸ್‌ಗೆ ವರ್ಗಾಯಿಸಿದರು" ಎಂದೂ ತಿಳಿಸಿದ್ದಾರೆ.
ಇದನ್ನು ಓದಿ: Russia-Ukraine War: ಯುದ್ಧಕ್ಕೆ 200 ದಿನ, ರಷ್ಯಾ ಹಿಮ್ಮೆಟ್ಟಿಸುತ್ತಿರುವ ಉಕ್ರೇನ್..!
ಹಾಗೂ, ಕಾನೂನು ಜಾರಿ ಅಧಿಕಾರಿಗಳು ಅಪಘಾತದ ಎಲ್ಲಾ ಸಂದರ್ಭಗಳನ್ನು ತನಿಖೆ ಮಾಡುತ್ತಾರೆ’’ ಎಂದು ವಕ್ತಾರ ಮಾಹಿತಿ ನೀಡಿದ್ದಾರೆ. ಟ್ರಾಫಿಕ್ ಅಪಘಾತದ ಎಲ್ಲಾ ಸಂದರ್ಭಗಳನ್ನು ಕಾನೂನು ಜಾರಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ ಎಂದೂ ನೈಕಿಫೊರೊವ್ ಹೇಳಿದರು. ಆದರೆ, ಅವರು ಹೆಚ್ಚಿನ ವಿವರಗಳನ್ನು ನೀಡಿಲ್ಲ. 44 ವರ್ಷದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈಶಾನ್ಯ ಉಕ್ರೇನ್‌ನ ಪ್ರಮುಖ ಲಾಜಿಸ್ಟಿಕ್ಸ್ ಕೇಂದ್ರವಾದ ಇಝಿಯಂ ಅನ್ನು ಮರು ವಶಪಡಿಸಿಕೊಂಡ ಬಳಿಕ ಕೀವ್ ನಗರಕ್ಕೆ ಭೇಇಟ ನೀಡಿದ ಬಳಿ ಈ ಅಪಘಾತ ಸಂಭವಿಸಿದೆ.
ಇನ್ನು, ಅಪಘಾತದ ಸ್ವಲ್ಪ ಸಮಯದ ನಂತರ ವಿಡಿಯೋವೊಂದನ್ನು ಪೋಸ್ಟ್ ಮಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು, ಖಾರ್ಕಿವ್ ಸುತ್ತಮುತ್ತಲಿನ ಪ್ರದೇಶದಿಂದ ಹಿಂದಿರುಗಿದ್ದಾಗಿ ಹೇಳಿದರು. ಹಾಗೆ, ರಷ್ಯಾದ ಸೈನ್ಯವನ್ನು ಹೊರಹಾಕಲು ಮಿಂಚಿನ ಪ್ರತಿದಾಳಿಯ ನಂತರ ಬಹುತೇಕ ಇಡೀ ಪ್ರದೇಶವನ್ನು ಉಕ್ರೇನ್ ಮರು ವಶಪಡಿಸಿಕೊಂಡಿದೆ" ಎಂದೂ ಉಕ್ರೇನ್ ಅಧ್ಯಕ್ಷರು ಹೇಳಿದರು. ಹಾಗೂ, "ಇದು ನಮ್ಮ ಸೈನಿಕರ ಅಭೂತಪೂರ್ವ ಚಳುವಳಿಯಾಗಿದೆ - ಉಕ್ರೇನಿಯನ್ನರು ಮತ್ತೊಮ್ಮೆ ಅಸಾಧ್ಯವೆಂದು ಭಾವಿಸಿದ್ದನ್ನು ಮಾಡಲು ಯಶಸ್ವಿಯಾದರು" ಎಂದೂ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಕದನಕ್ಕೆ 6 ತಿಂಗಳು ಪೂರ್ಣ: ಶೇ. 20 ಉಕ್ರೇನ್ ಭೂಭಾಗ ವಶಪಡಿಸಿಕೊಂಡ ರಷ್ಯಾ
ಉಕ್ರೇನ್‌ನಲ್ಲಿನ ಯುದ್ಧವು ನಿರ್ಣಾಯಕ ಹಂತವನ್ನು ಪ್ರವೇಶಿಸುತ್ತಿದೆ. ಕೀವ್‌ನ ಸೈನಿಕ ಪಡೆಗಳು ರಷ್ಯಾದ ಸೈನ್ಯವನ್ನು ಪೂರ್ವದ ಪ್ರದೇಶಗಳಿಂದ ಹೊರಹಾಕುತ್ತದೆ. ಹಾಗೂ, ಸಂಪೂರ್ಣ ಡೊನ್‌ಬಾಸ್ ಪ್ರದೇಶವನ್ನು ವಶಪಡಿಸಿಕೊಳ್ಳುವ ಕ್ರೆಮ್ಲಿನ್‌ನ ಮಹತ್ವಾಕಾಂಕ್ಷೆಗೆ ಉಕ್ರೇನ್ ಗಂಭೀರವಾಗಿ ಸವಾಲು ಹಾಕಿದಂತಿದೆ.
