Asianet Suvarna News Asianet Suvarna News

ಯುದ್ಧವೆಲ್ಲಾ ಮುಗೀಲಿ, ಭಾರತಕ್ಕೆ ಹೋಗಿ ಗರ್ಲ್ ಫ್ರೆಂಡ್ ನ ಮದುವೆ ಆಗ್ತೇನೆ ಎಂದ ಉಕ್ರೇನ್ ಯೋಧ!


ಈ ಉಕ್ರೇನಿಯನ್ ಸೈನಿಕನ ಎರಡು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಎರಡರಲ್ಲೂ ತನ್ನ ಗೆಳತಿಯ ಜೊತೆ ಅವರಿದ್ದಾರೆ. ಯುದ್ಧದ ನಂತರ ಅವರು ಭಾರತದಲ್ಲಿ ಮದುವೆಯಾಗಲು ಬಯಸಿರುವುದಾಗಿ ಸೈನಿಕ ಹೇಳಿದ್ದಾನೆ.

Ukraine soldier wishes to tie the knot with his girlfriend in India after the battle san
Author
Bengaluru, First Published Apr 11, 2022, 7:58 PM IST | Last Updated Apr 11, 2022, 8:00 PM IST

ನವದೆಹಲಿ (ಏ.11): ಉಕ್ರೇನ್ (Ukraine) ಮತ್ತು ರಷ್ಯಾ (Russia) ನಡುವಿನ ಯುದ್ಧ ಇನ್ನೂ ನಡೆಯುತ್ತಿದೆ. ಈ ಯುದ್ಧದ ಮೊದಲ ದಿನದಿಂದ, ಉಕ್ರೇನ್ ಒಳಗಿನಿಂದ ಅನೇಕ ಕಥೆಗಳು ಹೊರಬರುತ್ತಿವೆ. ಇಂಥ ಕಥೆಗಳಲ್ಲಿ ಉಕ್ರೇನ್ ಸೈನಿಕನೊಬ್ಬ ತನ್ನ ಗೆಳತಿಯೊಂದಿಗೆ ಕಾಣಿಸಿಕೊಂಡಿರುವ ಮತ್ತೊಂದು ವಿಚಾರ ಸಾಕಷ್ಟು ವೈರಲ್ ಆಗಿದೆ. ಯುದ್ಧದ ನಂತರ ತನ್ನ ಗೆಳತಿಯನ್ನು ಭಾರತದಲ್ಲಿ (India)  ಮದುವೆಯಾಗುತ್ತೇನೆ ಎಂದು ಈ ಸೈನಿಕ ಬಯಸಿದ್ದು, ಗೆಳತಿಯೊಂದಿಗಿನ ಚಿತ್ರ ಕೂಡ ವೈರಲ್ (Viral) ಆಗಿದೆ.

ಉಕ್ರೇನ್ ನ ಯೋಧ ತನ್ನ ಗೆಳತಿಯ ಜೊತೆಗಿರುವ ಎರಡು ಚಿತ್ರಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಉಕ್ರೇನ್ ನಲ್ಲಿ ಯುದ್ಧದ ವರದಿ ಮಾಡಲು ತೆರಳಿರುವ ಭಾರತೀಯ ಮೂಲದ ಪತ್ರಕರ್ತರೊಂದಿಗೆ ಮಾತನಾಡುವ ವೇಳೆ ಉಕ್ರೇನ್ ಯೋಧ ಇದನ್ನು ಹಂಚಿಕೊಂಡಿದ್ದು, ಇದನ್ನು ಪತ್ರಕರ್ತ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಯುದ್ಧವೆಲ್ಲ ಮುಗಿದ ಬಳಿಕ, ಭಾರತಕ್ಕೆ ತೆರಳಿ, ತನ್ನ ಗರ್ಲ್ ಫ್ರೆಂಡ್ ಅನ್ನು ವಿವಾಹವಾಗುವ ಇಚ್ಛೆ ಇದೆ ಎಂದು ಹೇಳಿದ್ದಾರೆ. ಅದಲ್ಲದೆ, ತಮಗೆ ಭಾರತೀಯ ಮೂಲ ಕೂಡ ಇದೆ ಎಂದು ಹೇಳಿದ್ದಾರೆ.

ಇಷ್ಟು ಮಾತ್ರವಲ್ಲದೆ, ವೇದ ಮಂತ್ರಗಳ (Veda Mantra) ಟ್ಯಾಟೂಗಳನ್ನು ಸೈನಿಕ ತಮ್ಮ ಎದೆ ಹಾಗೂ ಕುತ್ತಿಗೆಯ ಮೇಲೆ ಹೊಂದಿದ್ದಾರೆ ಎನ್ನುವುದು ವಿಶೇಷ. ಈ ವೇಳೆ ಯೋಧ, ತನ್ನ ಎಂದಿನ ಉಕ್ರೇನ್ ಸೇನಾ ಸಮವಸ್ತ್ರದಲ್ಲಿದ್ದರೆ, ಆತನ ಗೆಳತಿ ಹಳದಿ ಬಣ್ಣದ ಬಟ್ಟೆಯಲ್ಲಿ ಮಿಂಚುತ್ತಿದ್ದರು.  ಇಬ್ಬರ ಈ ಫೋಟೋ ನೋಡಿ ಸೋಷಿಯಲ್ ಮೀಡಿಯಾ ಬಳಕೆದಾರರು ಭಾರೀ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಇವರಿಬ್ಬರ ಮುದ್ದಾದ ಪ್ರೇಮಕಥೆಯನ್ನು ನೋಡಿ ನನ್ನ ಕಣ್ಣುಗಳು ತುಂಬಿದವು ಎಂದು ಒಬ್ಬ ಟ್ವಿಟರ್ ಯೂಸರ್ ಬರೆದುಕೊಂಡಿದ್ದಾನೆ.


ರಷ್ಯಾದ ಸೈನ್ಯವು ಉಕ್ರೇನ್ ನಗರಗಳ ಮೇಲೆ ತೀವ್ರವಾಗಿ ದಾಳಿ ಮಾಡುತ್ತಿದೆ. ತೀರಾ ಇತ್ತೀಚೆಗೆ, ರಷ್ಯಾದ ಮಿಲಿಟರಿಯು ತಮ್ಮ ಗಮನವನ್ನು ಡಾನ್ಬಾಸ್ ಅನ್ನು ನಿಶಸ್ತ್ರೀಕರಣ ಮಾಡುವತ್ತ ಕೇಂದ್ರೀಕರಿಸಿದೆ ಎಂದು ಹೇಳಲಾಗಿದೆ. ಡಾನ್ಬಾಸ್ ಅದೇ ಪ್ರದೇಶವಾಗಿದ್ದು, ಹಲವು ವರ್ಷಗಳಿಂದ ರಷ್ಯಾದ ಬೆಂಬಲಿತ ಪ್ರತ್ಯೇಕತಾವಾದಿಗಳು ಮತ್ತು ಉಕ್ರೇನಿಯನ್ ಸೇನೆಯ ನಡುವೆ ಸಂಘರ್ಷ ನಡೆಯುತ್ತಿದೆ.

ರಷ್ಯಾಧಿಪತಿಗೆ ಶಾಕ್ ನೀಡಲು ಅಮೆರಿಕ ಸಜ್ಜು, ಬೈಡೆನ್ ಸೇಡಿನ ಜ್ವಾಲೆಗೆ ಪುಟಿನ್ ಮಕ್ಕಳು ಟಾರ್ಗೆಟ್!

ಯುದ್ಧದ ನಡುವೆ ಉಕ್ರೇನ್‌ನಲ್ಲಿ ಅನೇಕ ಪ್ರೇಮಕಥೆಗಳು ತೆರೆದುಕೊಳ್ಳುತ್ತಿವೆ. ರಷ್ಯಾದ ಬಾಂಬ್‌ಗಳು ಮತ್ತು ಶೆಲ್‌ಗಳು 43 ಮಿಲಿಯನ್ ಜನರ ದೇಶದ ಮೇಲೆ ದಾಳಿ ಮಾಡುವುದನ್ನು ಮುಂದುವರೆಸುತ್ತಿದ್ದಂತೆ, ಯುದ್ಧ-ಹಾನಿಗೊಳಗಾದ ದೇಶದಿಂದ ಪ್ರೀತಿ, ಜೀವನ ಮತ್ತು ಸಂತೋಷದ ಈ ಕಥೆ ಹೊರಹೊಮ್ಮಿದೆ. ಉಕ್ರೇನ್ ದೇಶವು ರಷ್ಯಾದಿಂದ ಎಲ್ಲಾ ಆಮದುಗಳನ್ನು ನಿಷೇಧಿಸಿದೆ. ಯುದ್ಧದ ಮೊದಲು ತನ್ನ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಒಂದಾದ ರಷ್ಯಾದೊಂದಿಗೆ ವಾರ್ಷಿಕ ಸುಮಾರು $6 ಬಿಲಿಯನ್ ಮೌಲ್ಯದ ಆಮದುಗಳನ್ನು ಮಾಡಿಕೊಳ್ಳುತ್ತಿತ್ತು. ಯುದ್ಧದ ಬಳಿಕ ಮಾಸ್ಕೋದ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಅನುಸರಿಸಲು ಮತ್ತು ವಿಧಿಸಲು ಇತರ ದೇಶಗಳಿಗೆ ಕರೆ ನೀಡಿದೆ. 

'ಉಕ್ರೇನ್ ನಿರಾಶ್ರಿತರಿಗೆ ಸಹಾಯ ಮಾಡುತ್ತೀರಾ..'ವಿಶ್ವನಾಯಕರಿಗೆ ಪ್ರಿಯಾಂಕ ಚೋಪ್ರಾ ಮನವಿ

"ಇಂದು ನಾವು ಆಕ್ರಮಣಕಾರಿ ರಾಜ್ಯದೊಂದಿಗೆ ಸರಕುಗಳ ವ್ಯಾಪಾರದ ಸಂಪೂರ್ಣ ಮುಕ್ತಾಯವನ್ನು ಅಧಿಕೃತವಾಗಿ ಘೋಷಿಸಿದ್ದೇವೆ" ಎಂದು ಆರ್ಥಿಕ ಸಚಿವ ಯುಲಿಯಾ ಸ್ವೈರಿಡೆಂಕೊ ಶನಿವಾರ ತನ್ನ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ. "ಇನ್ನು ಮುಂದೆ, ರಷ್ಯಾದ ಒಕ್ಕೂಟದ ಯಾವುದೇ ಉತ್ಪನ್ನಗಳನ್ನು ನಮ್ಮ ರಾಜ್ಯದ ಪ್ರದೇಶಕ್ಕೆ ಆಮದು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ" ಎಂದು ಅವರು ಹೇಳಿದರು.

Latest Videos
Follow Us:
Download App:
  • android
  • ios