ಬ್ರಿಟನ್‌ನ 2ನೇ ದೊಡ್ಡ ನಗರ ಬರ್ಮಿಂಗ್‌ಹ್ಯಾಂ ದಿವಾಳಿ, ಕಾರಣ ಮಹಿಳೆಯರಿಗೂ ಸಮಾನ ವೇತನ!
ಬ್ರಿಟನ್‌ನ 2ನೇ ದೊಡ್ಡ ನಗರ ಬರ್ಮಿಂಗ್‌ಹ್ಯಾಂ ದಿವಾಳಿಯಾಗಿದೆ. ಈ ಬಗ್ಗೆ ಘೋಷಣೆ ಕೂಡ ಮಾಡಲಾಗಿದೆ. ಮಹಿಳೆಯರಿಗೂ ಸಮಾನ ವೇತನ ಯೋಜನೆಯಿಂದ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ. ಇದು ದಿವಾಳಿ ಎದ್ದ 8ನೇ ಬ್ರಿಟನ್ ನಗರವಾಗಿದೆ.

ಲಂಡನ್ (ಸೆ.9): ಜಗತ್ತಿನ ಹಲವು ದೇಶಗಳು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಹೊತ್ತಿನಲ್ಲೇ, ಬ್ರಿಟನ್‌ನ 2ನೇ ಅತಿದೊಡ್ಡ ನಗರ ಬರ್ಮಿಂಗ್‌ಹ್ಯಾಂ ತಾನು ದಿವಾಳಿಯಾಗಿರುವುದಾಗಿ ಘೋಷಿಸಿದೆ. ಬಜೆಟ್ ಮಂಡನೆ ವೇಳೆ ನಗರಾಡಳಿತವು ತಾನು ಎದುರಿಸುತ್ತಿರುವ ವಿತ್ತೀಯ ಸಂಕಷ್ಟವನ್ನು ವಿವರಿಸಿ ದಿವಾಳಿ ಘೋಷಣೆ ಮಾಡಿದೆ. ಇದು ಇತ್ತೀಚಿನ ವರ್ಷಗಳಲ್ಲಿ ದಿವಾಳಿ ಘೋಷಿಸಿದ ಬ್ರಿಟನ್‌ನ 8ನೇ ನಗರವಾಗಿದೆ.
ಪ್ರಮುಖವಾಗಿ ನಗರದಲ್ಲಿ ಪುರುಷ ಉದ್ಯೋಗಿಗಳಿಗೆ ಸಮಾನವಾಗಿ ಮಹಿಳೆಯರಿಗೂ ವೇತನ ನೀಡಬೇಕು ಎಂಬ ಬೇಡಿಕೆ ಇತ್ತು. ಇದನ್ನು ಈಡೇರಿಸಲು ಹೋಗಿ ಬರ್ಮಿಂಗ್‌ಹ್ಯಾಂ ದಿವಾಳಿಗೆ ಗುರಿಯಾಗಿದೆ. ಹೀಗೆ ಸಮಾನ ವೇತನ ಪಾವತಿಸುವುದು ಅಸಾಧ್ಯ ಎಂದು ತನ್ನ ಬಜೆಟ್‌ನಲ್ಲಿ ಘೋಷಿಸಿರುವ ನಗರಾಡಳಿತ, ದಿವಾಳಿಯನ್ನು ಪ್ರಕಟಿಸಿದೆ.
ಭಾರತದ ಶ್ರೀಮಂತ ನಟಿ, ಯಶಸ್ವಿ ಉದ್ಯಮಿ ಬಳಿ ಇದೆ 3 ಮನೆ, 25 ಕೋಟಿ ರೂ ಬೆಲೆ ಬಾಳುವ ಲಂಡನ್ ನಿವಾಸ!
ಸಿಟಿ ಕೌನ್ಸಿಲ್ ನೀಡಿದ ನೋಟಿಸ್ ಪ್ರಕಾರ, ಸಮಾನ ವೇತನ ಹೊಣೆಗಾರಿಕೆಗಾಗಿ 650 ದಶಲಕ್ಷ ಪೌಂಡ್‌ಗಳಿಂದ 760 ದಶಲಕ್ಷ ಪೌಂಡ್‌ಗಳು ಬೇಕಿದ್ದವು. ಇದನ್ನು ಪಾವತಿಸಲು ಸಾಧ್ಯವಾಗದ ನಂತರ ಭೀಕರ ಆರ್ಥಿಕ ಪರಿಸ್ಥಿತಿ ಉದ್ಭವಿಸಿದೆ. ಈ ಕಾರಣದಿಂದಾಗಿ, 2023-24 ರ ಆರ್ಥಿಕ ವರ್ಷದಲ್ಲಿ ತಾನು 87 ದಶಲಕ್ಷ ಪೌಂಡ್‌ಗಳ ಕೊರತೆ ಹೊಂದಿರುವುದಾಗಿ ನಗರಾಡಳಿತ ಹೇಳಿದೆ. ಇದೇ ವೇಳೆ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಹೆಚ್ಚಾದ ವೆಚ್ಚ, ಸರ್ಕಾರದ ನಿಧಿಯಲ್ಲಿ ಕಡಿತ ಕೂಡ ದಿವಾಳಿತನಕ್ಕೆ ಕಾರಣ ಎನ್ನಲಾಗಿದೆ.
ಟೆಕ್ ದೈತ್ಯ ಗೂಗಲ್ ಲಂಡನ್ ಕಚೇರಿಯಲ್ಲಿ 1.2 ಕೋಟಿ ರೂ ಪ್ಯಾಕೇಜ್ ಉದ್ಯೋಗ ಪಡೆದ ಭಾರತೀಯ!
ಅಗತ್ಯ ಸೇವೆಗಷ್ಟೇ ಇನ್ನು ಅನುದಾನ: ಇದೇ ವೇಳೆ, ದುರ್ಬಲ ಜನರ ರಕ್ಷಣೆ ಹಾಗೂ ಶಾಸನಬದ್ಧ ಅಗತ್ಯ ಸೇವೆಗಳ ಹೊರತಾಗಿ ಬಾಕಿ ಉಳಿದಿರುವ ಎಲ್ಲ ಚಟುವಟಿಕೆಗಳಿಗೆ ಖರ್ಚು ಮಾಡುವುದನ್ನು ಕೂಡಲೇ ನಿಲ್ಲಿಸಲಾಗುವುದು ಎಂದು ಅದು ಹೇಳಿದೆ.
ಮೊದಲಲ್ಲ, ಈ ಹಿಂದೆ 7 ನಗರ ದಿವಾಳಿ: ಹಾಗಂತ ದಿವಾಳಿ ಘೋಷಿಸಿರುವ ಬ್ರಿಟನ್‌ನ ಮೊದಲ ನಗರವೇನೂ ಬರ್ಮಿಂಗ್‌ಹ್ಯಾಂ ಅಲ್ಲ. ನಾತ್‌ರ್‍ಹ್ಯಾಂಪ್ಟನ್‌ಷೈರ್ 2018ರಲ್ಲಿ ದಿವಾಳಿ ಘೋಷಿಸಿಕೊಂಡು, ಈ ಘೋಷಣೆ ಮಾಡಿದ ಮೊದಲ ಬ್ರಿಟನ್ ನಗರ ಎನ್ನಿಸಿಕೊಂಡಿತ್ತು. ನಂತರ ಸ್ಲೋ, ಥುರೋಕ್, ಕ್ರಾಯ್‌ಡಾನ್, ನಾರ್ಥಂಬ್ರಿಯಾ, ವೋಕಿಂಗ್, ಹ್ಯಾಕ್ನಿ ನಗರಗಳೂ ದಿವಾಳಿ ಘೋಷಿಸಿ ಕೊಂಡಿದ್ದವು.