200 ಆಕ್ಸಿಜನ್ ಕಾನ್ಸನ್‌ಟ್ರೇಟರ್ ಭಾರತಕ್ಕೆ ಒಯ್ದ ಪೈಲಟ್‌ಗೆ ಯುಕೆ ಪ್ರಧಾನಿ ಗೌರವ ಯುಕೆ ಮೂಲದ ಪೈಲಟ್ ಮತ್ತು ಖಲ್ಸಾ ಏಡ್ ಸ್ವಯಂಸೇವಕನಿಗೆ ಯುಕೆ ಪಿಎಂ ಪತ್ರ

ದೆಹಲಿ(ಮೇ.14): ಪೈಲಟ್ ಮತ್ತು ಖಲ್ಸಾ ಏಡ್ ಸ್ವಯಂಸೇವಕ ಯುಕೆ ಮೂಲದ ಜಸ್ಪಾಲ್ ಸಿಂಗ್ ಅವರಿಗೆ ಪ್ರಧಾನ ಮಂತ್ರಿ ಪಾಯಿಂಟ್ಸ್ ಆಫ್ ಲೈಟ್ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ.

ಶ್ರೀ ಸಿಂಗ್ ಅವರಿಗೆ ಬರೆದ ವೈಯಕ್ತಿಕ ಪತ್ರದಲ್ಲಿ, ಯುಕೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್, ಶ್ರೀ ಕಿಂಗ್ ಅವರು ಕೊರೊನಾವೈರಸ್ ವಿರುದ್ಧದ ಭಾರತದ ಯುದ್ಧಕ್ಕೆ ಅಗಾಧ ಕೊಡುಗೆ ನೀಡಿದ್ದಾರೆ ಎಂದು ಕೇಳಲು ಹೆಮ್ಮೆ ಇದೆ ಎಂದು ಹೇಳಿದ್ದಾರೆ. COVID-19 ವಿರುದ್ಧದ ದೇಶದ ಯುದ್ಧದಲ್ಲಿ ಸಹಾಯ ಮಾಡಲು ಪೈಲಟ್ 200 ದೇಣಿಗೆ ಪಡೆದ ಆಮ್ಲಜನಕ ಕಾನ್ಸನ್‌ಟ್ರೇಟರ್ ಭಾರತಕ್ಕೆ ತಲುಪಿಸಿದ್ದಾರೆ.

ಅಮೆರಿಕದಲ್ಲಿ 12-15 ವರ್ಷದ ಮಕ್ಕಳಿಗೆ ಸಾಮೂಹಿಕ ಲಸಿಕೆ ಅಭಿಯಾನ

ಭಾರತವು ಕರೋನವೈರಸ್‌ನ ಎರಡನೇ ಅಲೆಯನ್ನು ಎದುರಿಸುತ್ತಿದ್ದು ದೇಶದ ಹಲವಾರು ಭಾಗಗಳಲ್ಲಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಪೂರೈಕೆಯಲ್ಲಿ ಕೊರತೆ ಕಂಡುಬಂದಿದೆ. ಇತ್ತೀಚೆಗೆ ಭಾರತೀಯ ಆಸ್ಪತ್ರೆಗಳಲ್ಲಿ ಆಮ್ಲಜನಕದ ಅವಶ್ಯಕತೆಗಳು ಏಕಾಏಕಿ 10 ಪಟ್ಟು ಹೆಚ್ಚಾಗಿದೆ ಎಂದು ಮಿಲಿಯನ್ ಸ್ಪಾರ್ಕ್ಸ್ ಫೌಂಡೇಶನ್ ಸಂಸ್ಥಾಪಕ ಅಭಿನವ್ ಮಾಥುರ್ ಹೇಳಿದ್ದಾರೆ.

Scroll to load tweet…

ಭಾರತದಲ್ಲಿ COVID-19 ಪರಿಣಾಮವನ್ನು ಕಂಡ ನಂತರ ನೆರವು ನೀಡಲು ಅವರು ಅವರು ಕೆಲಸ ಮಾಡುತ್ತಿದ್ದ ಕಂಪನಿ ಒಪ್ಪಿಗೆ ಕೇಳಿದ್ದರು. ಕೋವಿಡ್ ರಿಲೀಫ್‌ನಲ್ಲಿ ಅವರು ಮಾಡಿದ ಕೆಲಸಕ್ಕಾಗಿ, ಶ್ರೀ ಸಿಂಗ್ ಅವರಿಗೆ ಪ್ರಧಾನ ಮಂತ್ರಿ ಪಾಯಿಂಟ್ಸ್ ಆಫ್ ಲೈಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.