ಭಾರ​ತದ ರೈತ ಹೋರಾಟದ ಬಗ್ಗೆ ಬ್ರಿಟನ್‌ ಸಂಸ​ತ್‌ ಚರ್ಚೆ

ಭಾರ​ತ​ದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರತಿ​ಭ​ಟ​ನಾ​ಕಾ​ರರ ಸುರ​ಕ್ಷ​ತೆ ವಿಚಾ​ರ| ಭಾರ​ತದ ರೈತ ಹೋರಾಟದ ಬಗ್ಗೆ ಬ್ರಿಟನ್‌ ಸಂಸ​ತ್‌ ಚರ್ಚೆ

UK MPs to debate press freedom safety of protesters in India next week pod

ಲಂಡ​ನ್(ಮಾ.04)‌: ಭಾರ​ತ​ದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರತಿ​ಭ​ಟ​ನಾ​ಕಾ​ರರ ಸುರ​ಕ್ಷ​ತೆ ವಿಚಾ​ರ​ವು ಮುಂದಿನ ಸೋಮ​ವಾರ ಬ್ರಿಟನ್‌ ಸಂಸ​ತ್ತಿ​ನಲ್ಲಿ ಪ್ರತಿ​ಧ್ವ​ನಿ​ಸ​ಲಿದೆ. ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ವೇಳೆ ಈ ವಿಚಾ​ರ​ಗಳ ಕುರಿ​ತಾಗಿ ಸಂಸ​ತ್ತಿ​ನಲ್ಲಿ ಚರ್ಚೆ ನಡೆ​ಸ​ಬೇ​ಕೆಂದು ಒತ್ತಾ​ಯಿ​ಸಿ 10 ಸಾವಿ​ರಕ್ಕೂ ಹೆಚ್ಚು ಇ-ಅರ್ಜಿ​ಗಳು ಸಲ್ಲಿ​ಕೆ​ಯಾ​ಗಿತ್ತು. 10 ಸಾವಿ​ರಕ್ಕೂ ಹೆಚ್ಚು ಸಹಿ ಹೊಂದಿದ ಇ-ಅರ್ಜಿ​ಗಳ ಕುರಿ​ತಾಗಿ ಸಂಸ​ತ್ತಿ​ನಲ್ಲಿ ಚರ್ಚೆ ಕೈಗೆ​ತ್ತಿ​ಕೊ​ಳ್ಳ​ಬೇಕು. ಹೀಗಾಗಿ ಈ ಕುರಿ​ತಾಗಿ ಮುಂದಿನ ಸೋಮ​ವಾರ ಬ್ರಿಟನ್‌ ಸಂಸತ್ತು ಚರ್ಚೆ ನಡೆ​ಸ​ಲಿದೆ ಎಂದು ಬ್ರಿಟನ್‌ ಸಂಸ​ತ್ತಿನ ಅರ್ಜಿ​ಗಳ ಸಮಿತಿ ಬುಧ​ವಾರ ಖಚಿ​ತ​ಪ​ಡಿ​ಸಿದೆ.

ಲಂಡ​ನ್‌​ನ​ಲ್ಲಿ​ರುವ ಸಂಸ​ತ್ತಿನ ಆವ​ರಣದಲ್ಲಿನ ವೆಸ್ಟ್‌​ಮಿ​ನ್‌​ಸ್ಟರ್‌ ಹಾಲ್‌​ನಲ್ಲಿ 90 ನಿಮಿ​ಷ​ಗಳ ಈ ಚರ್ಚೆ​ಯಲ್ಲಿ ಸ್ಕಾಟಿಷ್‌ ನ್ಯಾಷ​ನಲ್‌ ಪಕ್ಷದ ಸದ​ಸ್ಯ​ರೊ​ಬ್ಬರು ಚರ್ಚೆಗೆ ಚಾಲನೆ ನೀಡ​ಲಿ​ದ್ದು, ಭಾರ​ತ​ದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರತಿ​ಭ​ಟ​ನಾ​ಕಾ​ರರ ಸುರ​ಕ್ಷ​ತೆಗೆ ಭಾರ​ತದ ಸರ್ಕಾ​ರದ ಮೇಲೆ ಬ್ರಿಟನ್‌ ಸರ್ಕಾರ ಒತ್ತಡ ಹೇರ​ಬೇಕು ಎಂದು ಒತ್ತಾ​ಯಿ​ಸ​ಲಿ​ದ್ದಾರೆ. ಆ ಬಳಿ​ಕ ಸಚಿ​ವ​ರೊ​ಬ್ಬರು ಸರ್ಕಾ​ರದ ಪರ​ವಾಗಿ ಉತ್ತ​ರಿ​ಸ​ಲಿ​ದ್ದಾರೆ.

ನೂತನ 3 ಕೃಷಿ ಕಾಯ್ದೆ​ಗಳ ಹಿಂಪ​ಡೆ​ತಕ್ಕೆ ಒತ್ತಾ​ಯಿಸಿ ದಿಲ್ಲಿ ಗಡಿ​ಗ​ಳಲ್ಲಿ ರೈತರು ನಡೆ​ಸು​ತ್ತಿ​ರುವ ರೈತರ ಪ್ರತಿ​ಭ​ಟ​ನೆ​ಯನ್ನು ಕೇಂದ್ರ ಸರ್ಕಾರ ಅಂತಾ​ರಾ​ಷ್ಟ್ರೀಯ ಸಂಚು ಎಂದು ಆರೋ​ಪಿ​ಸಿತ್ತು. ಇದರ ಬೆನ್ನಲ್ಲೇ, ಭಾರ​ತದ ವಿಚಾ​ರಕ್ಕೆ ಸಂಬಂಧಿಸಿ ಬ್ರಿಟ​ನ್‌​ ಸಂಸತ್ತು ಚರ್ಚೆಗೆ ಅಸ್ತು ನೀಡಿದೆ.

Latest Videos
Follow Us:
Download App:
  • android
  • ios