Asianet Suvarna News Asianet Suvarna News

17 ಗಂಟೆಗಳಲ್ಲಿ 67 ಪಬ್‌ಗಳಲ್ಲಿ ಕುಡಿದು Guinness Record..!

17 ಗಂಟೆಗಳಲ್ಲಿ 67 ಪಬ್‌ಗಳಿಗೆ ಹೋಗಿ ಕುಡಿದು ಗಿನ್ನೆಸ್‌ ದಾಖಲೆ ಮಾಡಿದ್ದಾನಂತೆ ಯುಕೆಯ ಈ ಯುವಕ. ಅಲ್ಲದೆ, ಶ್ವಾನ ಟ್ರಸ್ಟ್‌ಗೆ ಹಣ ಸಂಗ್ರಹಿಸಲು ಈ ರೀತಿ ಮಾಡಿದ್ದಾನೆ ಎಂದೂ ತಿಳಿದುಬಂದಿದೆ. 

uk man drinks at 67 pubs in 17 hours raise funds for dog trust ash
Author
First Published Sep 24, 2022, 1:31 PM IST

ಒಂದೇ ದಿನ ಅತಿ ಹೆಚ್ಚು ಪಬ್‌ಗಳಲ್ಲಿ (Pub) ಕುಡಿದಿರುವ ದಾಖಲೆಯನ್ನು (Record) ಮುರಿಯುವ ಉದ್ದೇಶದಿಂದ ಬ್ರಿಟನ್‌ನ ಒಬ್ಬ ವ್ಯಕ್ತಿ 17 ಗಂಟೆಗಳಲ್ಲಿ 67 ಪಬ್‌ಗಳಿಗೆ ಭೇಟಿ ನೀಡಿ ಕುಡಿದಿದ್ದಾನೆ. ಇದಕ್ಕೂ ಮೊದಲು ಯುನೈಟೆಡ್‌ ಕಿಂಗ್‌ಡಮ್‌ನ ಕಾರ್ಡಿಫ್‌ನ ವ್ಯಕ್ತಿಯೊಬ್ಬರು 17 ಗಂಟೆಗಳಲ್ಲಿ 56 ಪಬ್‌ಗಳಲ್ಲಿ ಮದ್ಯ ಸೇವಿಸಿದ್ದರು. ಗಿನ್ನೆಸ್‌ ದಾಖಲೆ (Guinness Record) ಮುರಿಯುವುದಾಗಿ ಸ್ನೇಹಿತರೊಂದಿಗೆ ಪಂದ್ಯ ಕಟ್ಟಿ ಕುಡಿಯಲು ಹೊರಟ ವ್ಯಕ್ತಿ ಹೊಸ ದಾಖಲೆ ನಿರ್ಮಾಣ ಮಾಡಿದ್ದಾನೆ. ನಾನು ಸುಮಾರು 30 ಲೀಟರ್‌ನಷ್ಟು ಮದ್ಯ ಸೇವಿಸಿದ್ದೆ. ಹೀಗಾಗಿ ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗುತ್ತಿತ್ತು. ಇದು ಹೆಚ್ಚು ಸಮಯವನ್ನು ತಿಂದುಹಾಕಿತು ಎಂದೂ ಆತ ಹೇಳಿಕೊಂಡಿದ್ದಾನೆ. ಇದು ಸುಳ್ಳು ಸುದ್ದಿ ಅಂದ್ಕೊಂಡ್ರಾ, ಅಲ್ಲ. ಅಲ್ಲದೆ, ಈ ಕುಡಿತದ ದಾಖಲೆಯಲ್ಲಿ ಒಂದು ಒಳ್ಳೆಯ ಉದ್ದೇಶವೂ ಇದೆ..!  

ಹೌದು, 22 ವರ್ಷ ವಯಸ್ಸಿನ, UK ಯ ಬ್ರೈಟನ್‌ ನಗರದಲ್ಲಿ ನೇಥನ್ ಕ್ರಿಂಪ್ ದಾಖಲೆಯೊಂದನ್ನು ಮುರಿಯಲು 24 ಗಂಟೆಗಳ ಅವಧಿಯಲ್ಲಿ 67 ವಿವಿಧ ಪಬ್‌ಗಳಲ್ಲಿ ಮದ್ಯಪಾನ ಸೇವಿಸಿದ್ದಾನೆ. ಆಗಸ್ಟ್‌ನಲ್ಲಿ, ಅವನು GoFundMe ಎಂಬ ಅಭಿಯಾನವನ್ನು ರಚಿಸಿದ್ದು, ಅಲ್ಲದೆ, ಶ್ವಾನಗಳ ಟ್ರಸ್ಟ್‌ಗೆ ಹಣವನ್ನು ದಾನ ಮಾಡಲು ಜನರಿಗೆ ಮನವಿ ಮಾಡಿದ್ದಾನೆ. ಅಕ್ಟೋಬರ್ 2020 ರಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟ ತನ್ನ ದಿವಂಗತ ನಾಯಿ ಕಾರಾಗಾಗಿ ನೇಥನ್ ಕ್ರಿಂಪ್ ಈ ಸವಾಲನ್ನು ತೆಗೆದುಕೊಂಡಿದ್ದ ಎಂದು ತಿಳಿದುಬಂದಿದೆ.

ಇದನ್ನು ಓದಿ: Eco Friendly Ganesha; ಏಕಕಾಲದಲ್ಲಿ 3308 ಗಣೇಶ ತಯಾರಿಸಿ ಗಿನ್ನೆಸ್‌ ರೆಕಾರ್ಡ್‌

ತನ್ನ ಪ್ರಚಾರದ ಟಿಪ್ಪಣಿಯಲ್ಲಿ ಈ ಸಂಬಂಧ ಬರೆದುಕೊಂಡಿದ್ದ ನೇಥನ್‌ ಕ್ರಿಂಪ್ "17 ನೇ ಸೆಪ್ಟೆಂಬರ್ 2022 ರಂದು ನಾನು ಗರೆಥ್ ಮರ್ಫಿ ಅವರ 54 ಪಬ್‌ಗಳ ಪ್ರಯತ್ನವನ್ನು 24 ಗಂಟೆಗಳಲ್ಲಿ ಸೋಲಿಸಲು ಪ್ರಯತ್ನಿಸುತ್ತೇನೆ ಮತ್ತು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ನನ್ನನ್ನು ನೋಂದಾಯಿಸಲು ಪ್ರಯತ್ನಿಸುತ್ತೇನೆ. ನಾಯಿಯಂತೆ ಬಟ್ಟೆ ಧರಿಸಿ ನಾನು ಬ್ರೈಟನ್ ಸುತ್ತಲೂ ಪ್ರಯಾಣಿಸುತ್ತೇನೆ, ದಾರಿಯುದ್ದಕ್ಕೂ ಹಣವನ್ನು ಸಂಗ್ರಹಿಸುವಾಗ 75 ಪಬ್‌ಗಳು ಮತ್ತು ಬಾರ್‌ಗಳಿಗೆ ಭೇಟಿ ನೀಡಲು ಪ್ರಯತ್ನಿಸುತ್ತೇನೆ’’ ಎಂದು ಮಾಹಿತಿ ನೀಡಿದ್ದ. 

ಅದೇ ರೀತಿ, ಸೆಪ್ಟೆಂಬರ್ 17 ರಂದು, ನೇಥನ್‌ ಕ್ರಿಂಪ್, ತಾನು 17 ಗಂಟೆಗಳಲ್ಲಿ 67 ಪಬ್‌ಗಳಿಗೆ ಭೇಟಿ ನೀಡುವ ಮೂಲಕ ದಾಖಲೆಯನ್ನು ಮುರಿದೆ ಎಂದು ಹೇಳಿಕೊಂಡಿದ್ದಾನೆ. ತನ್ನ ಉತ್ತಮ ಸ್ನೇಹಿತರಾದ ಒಲ್ಲಿ ಮತ್ತು ಆರ್ಚಿ ತನಗೆ ಸಹಾಯ ಮಾಡಿದರು ಎಂದೂ ಹೇಳಿದ್ದಾನೆ. ಹಾಗೆ, ತಾನು ಹಾಜರಾದ ಪ್ರತಿ ಪಬ್‌ನಿಂದ ರಸೀದಿ ಮತ್ತು ಸಹಿ ಸಂಗ್ರಹಿಸಿರುವುದಾಗಿಯೂ ನೇಥನ್‌ ಕ್ರಿಂಪ್‌ ತಿಳಿಸಿದ್ದಾನೆ.

ಈ ಸಂಬಂಧ ಲಿವರ್‌ಪೂಲ್ ಎಕೋ ಜೊತೆಗಿನ ಸಂವಾದದಲ್ಲಿ, ನೇಥನ್‌ ಕ್ರಿಂಪ್, ತಾನು ಈ ದಾಖಲೆಯನ್ನು ಹೇಗೆ ಮುರಿಯಲು ಸಾಧ್ಯವಾಯಿತು ಎಂಬುದರ ಕುರಿತು ಮಾತನಾಡಿದ್ದು, "ಮೊದಲ 25 ಪಬ್‌ಗಳಿಗೆ ಅದನ್ನು ಶಾಂತವಾಗಿಡಲು ಪ್ರಯತ್ನಿಸುವುದು ಯೋಜನೆಯಾಗಿತ್ತು, ನಾನು ಮದ್ಯಪಾನ ಮಿಶ್ರಣ ಮಾಡಬೇಕಾಗಿತ್ತು. ನಾನು, ಒಂದು ಪಬ್‌ನಲ್ಲಿ ಮದ್ಯ ಮತ್ತು ಇನ್ನೊಂದರಲ್ಲಿ ಆಲ್ಕೋಹಾಲ್‌ಯುಕ್ತವಲ್ಲದ ಪಾನೀಯವನ್ನು ಕುಡಿಯಲು ಪ್ರಯತ್ನಿಸಿದೆ’’ ಎಂದು ವಿವರಿಸಿದ್ದಾನೆ. 

ಇದನ್ನೂ ಓದಿ: ಪುಸ್ತಕ ಪ್ರಕಟಿಸಿ ಗಿನ್ನೆಸ್ ರೆಕಾರ್ಡ್ ಸೇರಿಸಿದ ಬ್ರಿಟನ್ 5ರ ಬಾಲೆ!

ಅಲ್ಲದೆ, ತನ್ನ ಜೀವನದಲ್ಲಿ ಇದುವರೆಗೆ ಪ್ರಯತ್ನಿಸಿದ ಕಠಿಣ ವಿಷಯಗಳಲ್ಲಿ ಒಂದಾಗಿದೆ ಎಂದೂ 22 ವರ್ಷ ವಯಸ್ಸಿನ ಯುವಕ ಹೇಳಿದ್ದಾನೆ. "ಇದು ನಾನು ಮಾಡಿದ ಅತ್ಯಂತ ಕಷ್ಟಕರವಾದ ವಿಷಯವಾಗಿದೆ, ಅದು ನಿಜವಾಗಿ ಇಷ್ಟು ಕಷ್ಟಕರವಾಗಿರುತ್ತದೆ ಎಂದು ನಾನು ಊಹಿಸಿರಲಿಲ್ಲ, ಅದನ್ನು ಕಡೆಗಣಿಸಿದೆ" ಎಂದೂ ಹೇಳಿಕೊಂಡಿದ್ದಾನೆ. ತಾನು ಬಿಯರ್, ಲಗರ್ ಮತ್ತು ಲಿಕ್ಕರ್‌ ಅನ್ನು ಸೇವಿಸಿದ್ದೆ ಎಂದೂ ನೇಥನ್‌ ಕ್ರಿಂಪ್ ಹೇಳಿದ್ದಾನೆ. "ಇಷ್ಟು ಕಡಿಮೆ ಸಮಯದಲ್ಲಿ ಹೆಚ್ಚು ದ್ರವವನ್ನು ಕುಡಿಯಲು - ನಾನು ಸುಲಭವಾಗಿ 20 ರಿಂದ 30 ಲೀಟರ್‌ಗಳಷ್ಟು ಸೇವಿಸಿರಬೇಕು. ನಿರಂತರವಾಗಿ ಶೌಚಾಲಯಕ್ಕೆ ಹೋಗಬೇಕಾಗಿತ್ತು, ಅದಕ್ಕೆ ಬಹುಪಾಲು ಸಮಯ ತೆಗೆದುಕೊಂಡಿತ್ತು. ಇದು ಅತ್ಯಂತ ಕಠಿಣವಾದ ಭಾಗವಾಗಿತ್ತು’’ ಎಂದೂ ಯುಕೆಯ ನೇಥನ್‌ ಕ್ರಿಂಪ್‌ ಹೇಳಿಕೊಂಡಿದ್ದಾನೆ. 

Follow Us:
Download App:
  • android
  • ios