* ತಮ್ಮ ಕಚೇರಿಯಲ್ಲಿನ ವಿವಾಹಿತ ಆಪ್ತ ಸಿಬ್ಬಂದಿಯೊಬ್ಬಳಿಗೆ ಮುತ್ತು ನೀಡಿದ ಪ್ರಕರಣ* ಬ್ರಿಟನ್‌ ಆರೋಗ್ಯ ಸಚಿವ ಮ್ಯಾಟ್‌ ಹ್ಯಾನ್‌ಕಾಕ್‌ ಶನಿವಾರ ರಾಜೀನಾಮೆ* ಕೊರೋನಾ ವೈರಸ್‌ ಲಾಕ್‌ಡೌನ್‌ ನಿರ್ಬಂಧಗಳು ಇರುವ ಸಂದರ್ಭದಲ್ಲಿ ಇಂಥ ಕೆಲಸ ಮಾಡುವಂತಿಲ್ಲ

ಲಂಡನ್‌(ಜೂ.27): ತಮ್ಮ ಕಚೇರಿಯಲ್ಲಿನ ವಿವಾಹಿತ ಆಪ್ತ ಸಿಬ್ಬಂದಿಯೊಬ್ಬಳಿಗೆ ಮುತ್ತು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್‌ ಆರೋಗ್ಯ ಸಚಿವ ಮ್ಯಾಟ್‌ ಹ್ಯಾನ್‌ಕಾಕ್‌ ಶನಿವಾರ ರಾಜೀನಾಮೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾ ವೈರಸ್‌ ಲಾಕ್‌ಡೌನ್‌ ನಿರ್ಬಂಧಗಳು ಇರುವ ಸಂದರ್ಭದಲ್ಲಿ ಇಂಥ ಕೆಲಸ ಮಾಡುವಂತಿಲ್ಲ ಎಂಬ ನಿರ್ಬಂಧಗಳಿವೆ. ಇದನ್ನು ಮೀರಿ ಈ ‘ಕೃತ್ಯ’ ಎಸಗಿದ್ದಕ್ಕೆ ವಿಪಕ್ಷಗಳು ಕಿಡಿಕಾರಿದ್ದವು.

Scroll to load tweet…

ಮ್ಯಾಟ್‌ ಹ್ಯಾನ್‌ಕಾಕ್‌, ಆಪ್ತಳೊಬ್ಬಳಿಗೆ ಮುತ್ತು ಕೊಡುತ್ತಿರುವ ಚಿತ್ರಗಳನ್ನು ‘ದ ಸನ್‌’ ಪತ್ರಿಕೆ ಪ್ರಕಟಿಸಿತ್ತು. ಕೃತ್ಯ ಒಪ್ಪಿಕೊಂಡಿರುವ ಅವರು ಈಗ ರಾಜೀನಾಮೆ ಸಲ್ಲಿಸಿದ್ದಾರೆ.