ಲಂಡನ್[ಅ.13]: ಸೋಶಿಯಲ್ ಮೀಡಿಯಾದಲ್ಲಿ ಯಾವ ವಿಚಾರ ವೈರಲ್ ಆಗುತ್ತದೆ ಎಂದು ಊಹಿಸುವುದೂ ಅಸಾಧ್ಯ. ಆದ್ರೂ ವೈರಲ್ ಆಗುವ ಪೋಸ್ಟ್ ಗಳಲ್ಲಿ ಬಹುತೇಕ ಸುದ್ದಿಗಳು ವಿಭಿನ್ನವಾಗಿ ತಿಳುವಳಿಕೆ ಕೊಡುತ್ತವೆ. ಆದರೆ ಬ್ರಿಟನ್ ಮಹಿಳೆಯೊಬ್ಬಳು ಮಾಡಿದ ಪೋಸ್ಟ್‌ ಬಹಳ ವಿಚಿತ್ರವಾಗಿದೆ..

ಹೌದು ಈ ಮಹಿಳೆ ಫೇಸ್‌ಬುಕ್ ನಲ್ಲಿ ಶೇರ್ ಮಾಡಿಕೊಂಡಿರುವ ಪೋಸ್ಟ್ ನಲ್ಲಿ ನಾಯಿಯ ಮೂಗು ಮಾತ್ರ ಕಾಣಲು ಸಿಗುತ್ತದೆ. ಇದನ್ನು ನೋಡಿದ್ರೆ ಮೂಗು ಕಳಚಿ ಬಿದ್ದಿದೆ ಎಂದು ಭಾವಿಸಬೇಕು,. ಆದರೆ ವಾಸ್ತವರೆ ಮಾತ್ರ ಕೊಂಚ ಭಿನ್ನವಾಗಿದೆ. 

ಬ್ರಿಟನ್‌ನ ಕೋವೆಂಟ್ರಿ ನಿವಾಸಿ ಜೆಡ್‌ಮರೆ ಮಂಗಳವಾರ ತನ್ನ ತಾಯಿ ಸಾಕಿದ್ದ ನಾಯಿಯನ್ನು ನೋಡಿಕೊಂಡಿದ್ದಳು. ಹೀಗಿರುವಾಗ ಆಕೆ ನೆಲದ ಮೇಲೆ ವಿಚಿತ್ರ ವಸ್ತು ಕಂಡಳು. ಈ ಕುರಿತು ಪೋಸ್ಟ್ ನಲ್ಲಿ ಬರೆದಿರುವ ಜೆಡ್ 'ಅದೇನೆಂದು ನನಗೆ ತಿಳಿದಿರಲಿಲ್ಲ. ಬಳಿಕ ನಾಯಿಯ ಮೂಗು ಆಗಿರಬಹುದು ಎಂದು ಊಹಿಸಿದೆ ' ಎಂದಿದ್ದಾರೆ.

ಮುಂದೆ ಈ ಕುರಿತು ಇನ್ನಷ್ಟು ಬರೆದುಕೊಂಡಿರುವ ಜೆಡ್ 'ಅದು ನಾಯಿ ಮೂಗು ಎಂದು ತಿಳಿದಾಗ ಭಯ ಆಯ್ತು. ನಾಯಿಗೆ ಎಷ್ಟು ನೋವಾಗುತ್ತಿರಬಹುದು ಎಂದು ಯೋಚಿಸಿದೆ. ಅಮ್ಮನ ಬಳಿ ನಿನ್ನ ನಾಯಿಯ ಮೂಗು ತುಂಡಾಗಿದೆ ಎಂದು ಹೇಗೆ ಹೇಳುವುದೆಂಬ ಚಿಂತೆ ಕಾಡಿತು. ನಾಯಿ ಇನ್ನು ಹೇಗೆ ವಾಸನೆ ಗ್ರಹಿಸುತ್ತದೆ ಎಂಬ ಆತಂಕ. ಆದ್ರೂ ಧೈರ್ಯ ಮಾಡಿ ಕೆಳ ಬಿದ್ದಿದ್ದ ಮೂಗಿನ ತುಂಡನ್ನೆತ್ತಿಕೊಂಡೆ. ಅದೃಷ್ಟವಶಾತ್ ಅದು ನಿಜವಾದ ಮೂಗು ಆಗಿರಲಿಲ್ಲ. ಅದೊಂದು ಆಟಿಕೆ ಆಗಿತ್ತು. ನಾಯಿಯ ಮೂಗು ಸರಿಯಾಗಿದೆ ಏನೂ ಆಗಿಲ್ಲ' ಎಂದಿದ್ದಾರೆ.

ಆದರೆ ಜೆಡ್ ರವರ ಈ ಸಾಮಾಣ್ಯ ಈ ಪೋಸ್ಟ್ 2 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಹಾಗೂ 1 ಲಕ್ಷಕ್ಕೂ ಅಧಿಕ ಮಂದಿ ಶೇರ್ ಮಾಡಿಕೊಂಡಿದ್ದಾರೆ.