ಕೊರೋನಾ ಮುಕ್ತವಾಗಿ ನಿರಾಳವಾಗಿದ್ದ ನ್ಯೂಜಿಲೆಂಡ್‌ನಲ್ಲಿ ಇದೀಗ ಮತ್ತೆ ಎರಡು ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಂಡಿದೆ. ಈ ಮೂಲಕ 24 ದಿಮ ಕೊರೋನಾ ಮುಕ್ತವಾಗಿದ್ದ ನ್ಯೂಜಿಲೆಂಡ್‌ನಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.

30 ಹಾಗೂ 40 ವರ್ಷದ ಮಹಿಳೆಯರಿಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ. ಇಬ್ಬರೂ ಜೂನ್ 7ರಂದು ಏರ್ ನ್ಯೂಜಿಲೆಂಡ್ ಫ್ಲೈಟ್‌ನಲ್ಲಿ ಬ್ರಸ್ಬೇನ್‌ನಿಂದ ಬಂದಿಳಿದಿದ್ದರು. ಇಬ್ಬರೂ ನವೋಟೆಲ್ ವೋಕ್ಲೆಂಡ್ಎಲ್ಲೆರ್ಸೈಲ್ ಹೋಟೆಲ್‌ನಲ್ಲಿ ಐಸೋಲೇಷನ್‌ನಲ್ಲಿದ್ದರು.

ನ್ಯೂಜಿಲೆಂಡ್‌ ಪೂರ್ಣ ಕೊರೋನಾ ಮುಕ್ತ: ಸಾಮಾಜಿಕ ಅಂತರ, ಮಾಸ್ಕ್ ಬಳಕೆಯೂ ಇಲ್ಲ!

ವಿಲ್ಲಿಂಗ್ಟನ್‌ನಲ್ಲಿ ಒಬ್ಬ ರೋಗಿಯ ಪೋಷಕರು ನಿಧನರಾದ ಕಾರಣ ಇಬ್ಬರೂ ಅತ್ತ ಪ್ರಯಾಣಿಸಿದ್ದರು. ಇಬ್ಬರೂ ಸಾರ್ವಜನಿಕ ಸಾರಿಗೆ ಬಳಸದೆ, ಖಾಸಗಿಯಾಗಿ ಓಡಾಡಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೋಟೆಲ್‌ನಲ್ಲಿ ನಿಲ್ಲುವ ಮುನ್ನ ಇಬ್ಬರಿಗೂ ಕೊರೋನಾ ದೃಢವಾಗಿರಲಿಲ್ಲ. ಆದರೂ ಎಲ್ಲ ನಿಯಮಗಳನ್ನು ಪಾಲಿಸಿ ವಿಲ್ಲಿಂಗ್ಟನ್‌ನಲ್ಲಿ ಪರೀಕ್ಷೆಯನ್ನೂ ಮಾಡಲಾಗಿತ್ತು. ಇದೀಗ ಇಬ್ಬರನ್ನೂ ಐಸೊಲೇಷನ್‌ನಲ್ಲಿಡಲಾಗಿದೆ.