ಟೋಕಿಯೋ (ಫೆ. 15): ಯೋಕೋಹಾಮಾದಲ್ಲಿ ಓರ್ವ ಕನ್ನಡಿಗ ಸೇರಿದಂತೆ 138 ಭಾರತೀಯರು ಸಿಲಿಕೊಂಡಿರುವ ಡೈಮಂಡ್‌ ಪ್ರಿನ್ಸೆಸ್‌ ಹಡಗಿನಲ್ಲಿ ಮತ್ತೆ ಭಾರತದ ಮತ್ತೋರ್ವ ಸಿಬ್ಬಂದಿಗೆ ಕೊರೋನಾ ಸೋಂಕು ವ್ಯಾಪಿಸಿದೆ.

ಬಹಿರಂಗವಾಗಿ ಕಾಣಿಸಿಕೊಂಡ ಕೊರೋನಾ ಶಂಕಿತನನ್ನು ಗುಂಡಿಟ್ಟು ಹತ್ಯೆಗೈದರು!

ಈ ಮೂಲಕ ಒಟ್ಟು 3711 ಮಂದಿ ಪ್ರವಾಸಿಗರು ಇರುವ ಪ್ರಿನ್ಸೆಸ್‌ ಹಡಗಿನಲ್ಲಿ ಭಾರತದ ಮೂವರು ಸಿಬ್ಬಂದಿಗೆ ಸೋಂಕು ತಗುಲಿದಂತಾಗಿದೆ. ಈವರೆಗೆ ಹಡಗಿನಲ್ಲಿ 218 ಜನರಿಗೆ ಸೋಂಕು ತಗುಲಿದೆ. 138 ಭಾರತೀಯರ ಪೈಕಿ 6 ಮಂದಿ ಮಾತ್ರವೇ ಪ್ರಯಾಣಿಕರಾಗಿದ್ದು, ಕರ್ನಾಟಕದ ಕಾರವಾರದ ಕನ್ನಡಿಗ ಸೇರಿದಂತೆ ಉಳಿದ 132 ಮಂದಿ ಸಿಬ್ಬಂದಿಯಾಗಿದ್ದಾರೆ. ಆದರೆ, ಭಾರತದ ಯಾವೆಲ್ಲಾ ಸಿಬ್ಬಂದಿಗೆ ಕೊರೋನಾ ಹಬ್ಬಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಆದಾಗ್ಯೂ, ಕೋವಿಡ್‌-19(ಕೊರೋನಾ)ಗೆ ತುತ್ತಾದ ಮೂವರು ಭಾರತೀಯ ಸಿಬ್ಬಂದಿ ಆರೋಗ್ಯ ಸ್ಥಿರವಾಗಿದೆ. ಹಡಗಿನಲ್ಲಿರುವ ಎಲ್ಲಾ ಭಾರತೀಯರ ಸುರಕ್ಷತೆ ನಿಟ್ಟಿನಲ್ಲಿ ಜಪಾನ್‌ ಅಧಿಕಾರಿಗಳ ಜೊತೆ ಭಾರತದ ರಾಯಭಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ.