* ಸುದ್ದಿ ನಿರೂಪಕನ ಹಿಂದೆ ಗನ್ ಮ್ಯಾನ್ ಗಳು!* ಗನ್ ಮ್ಯಾನ್ ಗಳಲ್ಲ ತಾಲೀಬಾನಿಗಳು* ಒಂದಕ್ಷರ ತಪ್ಪು ನುಡಿದರೆ ಅಷ್ಟೆ ಕತೆ* ಅಫ್ಘಾನಿಸ್ತಾನದ ಸದ್ಯದ ಸ್ಥಿತಿ ವಿವರಿಸುವ ವಿಡಿಯೋ 

ಕಾಬೂಲ್( ಆ. 31) ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡು ಕ್ರೂರತೆ ಮೆರೆಯುತ್ತಿರುವ ತಾಲೀಬಾನಿಗಳ ಬಗ್ಗೆ ಹೇಳಲು ಇನ್ನೇನು ಉಳಿದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಧಮನವಾಗಿದೆ. ಮಹಿಳೆ ಮತ್ತು ಮಕ್ಕಳ ಪರಿಸ್ಥಿತಿ, ಗೋಳು ಯಾರಿಗೂ ಹೇಳುವುದು ಬೇಡ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಲೀಬಾನಿಗಳು ಮಾಧ್ಯಮಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ದೃಶ್ಯ ನೋಡಿದರೆ ನಿಮಗೆ ಅಲ್ಲಿನ ಸ್ಥಿತಿ ಸರಿಯಾಗಿ ಅರಿವಿಗೆ ಬರುತ್ತದೆ. ನಾವು ಬದಲಾಗಿದ್ದೇವೆ ಎನ್ನುವ ತಾಲೀಬಾನಿಗಳು ನಡೆದುಕೊಳ್ಳುತ್ತಿರುವ ರೀತಿಯನ್ನು ಈ ವಿಡಿಯೋ ಸಾರಿ ಸಾರಿ ಹೇಳುತ್ತಿದೆ. ಅವರ ವರ್ತನೆಗೆ ಇದಕ್ಕಿಂತ ದೊಡ್ಡ ಸಾಕ್ಷ್ಯ ಬೇಡ ಎನಿಸುತ್ತದೆ.

ಅಫ್ಘನ್ ತೊರೆದ ದೊಡ್ಡನ್ಣನ ಮುಂದಿನ ನಡೆ ಏನು?

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಸುದ್ದಿ ನಿರೂಪಕ ಸುದ್ದಿ ಓದುತ್ತಾ ಹೋಗುತ್ತಾನೆ. ಆತನ ಹಿಂದೆ ಇಬ್ಬರು ಶಸ್ತ್ರಧಾರಿ ತಾಲೀಬಾನಿಗಳು ನಿಂತಿದ್ದಾರೆ. ಒಂದು ಅಕ್ಷರ ಅವರ ವಿರುದ್ಧ ಹೇಳಿದರೆ ಅವರು ಏನು ಮಾಡುತ್ತಾರೆ ಎನ್ನುವುದನ್ನು ಹೊಸದಾಗಿ ಹೇಳುವುದು ಬೇಡ.

ಇರಾನಿಯನ್ ಪತ್ರಕರ್ತ ಮಶಿಹ್ ಅಲಿನೇಜದ್ ಈ ವಿಡಿಯೋವನ್ನು ಜಗತ್ತಿನ ಮುಂದೆ ಇಟ್ಟಿದ್ದಾರೆ. ತಾಲೀಬಾನ್ ಎಂದರೆ ಇನ್ನೊಂದು ಹೆಸರು ಭಯ ಎಂದು ವಿಶ್ಲೇಷಣೆಯನ್ನು ಕೊಟ್ಟಿದ್ದಾರೆ. 

Scroll to load tweet…