5000 ಗಡಿ ದಾಟಿದ ಭೂಕಂಪ ಸಾವು: ಟರ್ಕಿ, ಸಿರಿಯಾದಲ್ಲಿ ಭೂಕಂಪ ಸೃಷ್ಟಿಸಿದ ಮಾರಣಹೋಮ

ಸೋಮವಾರ ಸಂಭವಿಸಿದ ಟರ್ಕಿ-ಸಿರಿಯಾ ಭೀಕರ ಭೂಕಂಪದಲ್ಲಿ ಮೃತರ ಸಂಖ್ಯೆ ಮಂಗಳವಾರ 5 ಸಾವಿರಕ್ಕೆ ಏರಿದೆ. ಟರ್ಕಿ ಒಂದರಲ್ಲೇ ಸಾವನ್ನಪ್ಪಿದವರ ಸಂಖ್ಯೆ 3,419ಕ್ಕೆ ಏರಿದ್ದರೆ, ಸುಮಾರು 1600 ಜನರು ಸಿರಿಯಾದಲ್ಲಿ ಸಾವನ್ನಪ್ಪಿದ್ದಾರೆ.

Turkey Earthquake death toll crosses 5,000 the worst Earthquake create carnage in Turkey Syria akb

ಇಸ್ತಾಂಬುಲ್‌: ಸೋಮವಾರ ಸಂಭವಿಸಿದ ಟರ್ಕಿ-ಸಿರಿಯಾ ಭೀಕರ ಭೂಕಂಪದಲ್ಲಿ ಮೃತರ ಸಂಖ್ಯೆ ಮಂಗಳವಾರ 5 ಸಾವಿರಕ್ಕೆ ಏರಿದೆ. ಟರ್ಕಿ ಒಂದರಲ್ಲೇ ಸಾವನ್ನಪ್ಪಿದವರ ಸಂಖ್ಯೆ 3,419ಕ್ಕೆ ಏರಿದ್ದರೆ, ಸುಮಾರು 1600 ಜನರು ಸಿರಿಯಾದಲ್ಲಿ ಸಾವನ್ನಪ್ಪಿದ್ದಾರೆ. ಈ ನಡುವೆ ಸೋಮವಾರದ ಭೂಕಂಪದಿಂದ ದೇಶ ಚೇತರಿಸಿಕೊಳ್ಳುವ ಮೊದಲೇ ಮಂಗಳವಾರ ಮತ್ತೆ ರಿಕ್ಟರ್‌ ಮಾಪಕದಲ್ಲಿ 7.6 ಮತ್ತು 6 ತೀವ್ರತೆ ಹೊಂದಿದ್ದ ಎರಡು ಭೂಕಂಪ ಸಂಭವಿಸಿದ್ದು, ಪತನದ ಅಂಚಿನಲ್ಲಿದ್ದ ಮತ್ತಷ್ಟು ಕಟ್ಟಡಗಳನ್ನು ನೆಲಸಮ ಮಾಡಿವೆ.

ಇದರ ನಡುವೆ, 2ನೇ ದಿನವೂ ರಕ್ಷಣಾ ಕಾರ್ಯ ಮುಂದುವರಿದಿದ್ದು, ಭಾರತ (India), ಅಮೆರಿಕ, ಚೀನಾ, ಪಾಕಿಸ್ತಾನ (Pakistan), ಯುರೋಪಿಯನ್‌ (European)ರಾಷ್ಟ್ರಗಳು ಸೇರಿದಂತೆ ಅನೇಕ ದೇಶಗಳು ನೆರವಿಗೆ ಧಾವಿಸಿವೆ. 24,400ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ವಿದೇಶಗಳಿಂದ ಆಗಮಿಸಿರುವ ರಕ್ಷಣಾ ಸಿಬ್ಬಂದಿ ತಮ್ಮ ಕಾರ್ಯಾಚರಣೆ ಚುರುಕುಗೊಳಿಸಿದ ಬಳಿಕ ಅವಶೇಷಗಳಡಿ ಇರುವ ಜನ ಸಂಖ್ಯೆ ಗೊತ್ತಾಗಲಿದೆ. ಹೀಗಾಗಿ ಸಾವು, ನೋವಿನ ಪ್ರಮಾಣ ಇನ್ನಷ್ಟು ಹೆಚ್ಚುವ ಭೀತಿ ಎದುರಾಗಿದೆ.

ಟರ್ಕಿ ಭೂಕಂಪ: ಭಾರತದಿಂದ ಸಹಾಯಹಸ್ತ; ದೋಸ್ತ್‌ ಎಂದು ಧನ್ಯವಾದ ಹೇಳಿದ ಟರ್ಕಿ ಸರ್ಕಾರ

500 ಪಶ್ಚಾತ್‌ ಕಂಪನ:

ಸೋಮವಾರ ಬೆಳಗ್ಗೆ ಸಂಭವಿಸಿದ 7.8 ತೀವ್ರತೆಯ ಕಂಪನ ನಂತರ ಪಶ್ಚಾತ್‌ ಕಂಪನಗಳು ನಿಲ್ಲುತ್ತಿಲ್ಲ. ಮಂಗಳವಾರ ರಾತ್ರಿವರೆಗೆ ಸುಮಾರು 200 ಪಶ್ಚಾತ್‌ ಕಂಪನ ಸಂಭವಿಸಿವೆ. ಪಶ್ಚಾತ್‌ ಕಂಪನದ ಭೀತಿಯಿಂದ ಕಟ್ಟಡಗಳ ಒಳಗೆ ಜನರು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕೊರೆಯುವ ಚಳಿ ಹಾಗೂ ಹಿಮಪಾತದ ನಡುವೆ ಬೀದಿಯಲ್ಲೇ ಕಂಬಳಿ ಹೊದ್ದು ಕಾಲ ಕಳೆಯುತ್ತಿದ್ದಾರೆ. ಇನ್ನು ಕಂಪನ ಕೇಂದ್ರವಾಗಿದ್ದ ಗಾಜಿಯಾಂಟೆಪ್‌ನಲ್ಲಿ (Gaziantep) ಜನರು ಮಾಲ್‌ಗಳು, ಸ್ಟೇಡಿಯಂ, ಮಸೀದಿಗಳಲ್ಲಿ (mosques) ಆಶ್ರಯ ಪಡೆದಿದ್ದು ಕಂಡು ಬಂತು.

ರಕ್ಷಣೆಗೆ ಹರಸಾಹಸ:

ಇನ್ನು ರಕ್ಷಣಾ ತಂಡಗಳು ಅನೇಕ ಕಡೆ ಅವಶೇಷಗಳ ಅಡಿ ಬಿದ್ದವರನ್ನು ರಕ್ಷಿಸಿವೆ. ರಕ್ಷಣೆ ಆದ ಕೂಡಲೇ ಜನರು ಭಾವುಕರಾಗಿ ಆನಂದಬಾಷ್ಪ ಹರಿಸಿದ ಪ್ರಸಂಗಗಳೂ ನಡೆದವು. ಆದರೆ, ಇನ್ನೂ ಅನೇಕ ಕಡೆ ರಕ್ಷಣಾ ತಂಡಗಳು ಬಂದೇ ಇಲ್ಲ ಎಂದು ಸಂತ್ರಸ್ತರು ದೂರಿದ್ದಾರೆ. ಸಿರಿಯಾದಲ್ಲಿ ಸುಮಾರು 1400 ಮಂದಿ ಹಾಗೂ ಟರ್ಕಿಯಲ್ಲಿ 21 ಸಾವಿರ ಮಂದಿ ಗಾಯಗೊಂಡಿದ್ದಾರೆ. ವೈದ್ಯಕೀಯ ತಂಡಗಳು (Medical teams) ಬದುಕುಳಿದವರ ಆರೈಕೆ/ಚಿಕಿತ್ಸೆಯಲ್ಲಿ ತೊಡಗಿವೆ.

ಸಿರಿಯಾದ 4 ಪ್ರಾಂತ್ಯಗಳಲ್ಲಿ ಭಾರಿ ಹಾನಿ:

ಈ ನಡುವೆ, 12 ವರ್ಷದಿಂದ ಅಂತರ್ಯುದ್ಧಪೀಡಿತ ಆಗಿರುವ ಸಿರಿಯಾದಲ್ಲಿ ಅಲೆಪ್ಪೋ (Aleppo), ಲಟಾಕಿಯಾ (Latakia, ಹಮಾ (Hama) ಹಾಗೂ ತಾರ್ತುಸ್‌ ಪ್ರಾಂತ್ಯಗಳು ಭಾರಿ ಹಾನಿಗೆ ಒಳಗಾಗಿವೆ. ಭೀಕರ ಭೂಕಂಪಕ್ಕೆ ತುತ್ತಾದ ಟರ್ಕಿ ಮತ್ತು ಸಿರಿಯಾ ದೇಶಗಳಿಂದ ಸಾವಿರಾರು ನೋವು, ಭೀಕರ ಸುದ್ದಿಗಳು ಕ್ಷಣಕ್ಷಣಕ್ಕೂ ಹೊರಬೀಳುತ್ತಿದೆ. ಉರುಳಿ ಬಿದ್ದ ಸಾವಿರಾರು ಕಟ್ಟಡಗಳ ಅಡಿಯಿಂದ ಇನ್ನೂ ರಕ್ಷಣೆಗಾಗಿ ಮೊರೆ ಕೇಳಿಬರುತ್ತಲೇ ಇದೆ. ಸಿಕ್ಕಿಬಿದ್ದವರ ಹೊರ ಕರೆ ತರಲಾಗದೆ ಸಂಕಟ ವ್ಯಕ್ತವಾಗುತ್ತಿದೆ. ಸಾವಿರಾರು ನೋವಿನ ಸುದ್ದಿಗಳ ನಡುವೆ ಅಲ್ಲೊಂದಿಲ್ಲೊಂದು ರಕ್ಷಣೆ ಸಿಹಿ ಸುದ್ದಿಯೂ ಕೇಳಿಬರುತ್ತಿದೆ. ಜಗತ್ತನ್ನೇ ತಲ್ಲಣಗೊಳಿಸಿದ ಈ ಭೂಕಂಪ ಮತ್ತೊಮ್ಮೆ ಮನುಕುಲವನ್ನು ಕಲಕಿದೆ.

ನನ್ನಮ್ಮ ಎಲ್ಲಿ: ಟರ್ಕಿ ಭೂಕಂಪದಲ್ಲಿ ಹೆತ್ತವರ ಕಳಕೊಂಡು ಪುಟ್ಟ ಮಗುವಿನ ಗೋಳು

Latest Videos
Follow Us:
Download App:
  • android
  • ios