ಟೇಕಾಫ್ ಆಗುವಾಗ ವಿಮಾನದಿಂದ ಕೆಳಗೆ ಬಿದ್ದ ಗಗನಸಖಿ; ಆಸ್ಪತ್ರೆಗೆ ದಾಖಲು
ಟೇಕಾಫ್‌ಗೆ ಸಿದ್ಧವಾಗಿದ್ದ ವಿಮಾನದಿಂದ ಗಗನಸಖಿಯೊಬ್ಬರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಈಸ್ಟ್ ಮಿಡ್‌ಲ್ಯಾಂಡ್ಸ್ ವಿಮಾನ ನಿಲ್ದಾಣದಲ್ಲಿ ನಡೆದ ಈ ಘಟನೆಯಲ್ಲಿ ಗಾಯಾಳುವನ್ನು ಕ್ವೀನ್ಸ್ ಮೆಡಿಕಲ್ ಸೆಂಟರ್‌ಗೆ ದಾಖಲಿಸಲಾಗಿದೆ.
ಲಂಡನ್: ವಿಮಾನ ಟೇಕಾಫ್ ಆಗುವ ಸಂದರ್ಭದಲ್ಲಿ ಗಗನಸಖಿಯೊಬ್ಬರು ಕೆಳಗೆ ಬಿದ್ದಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೂಡಲೇ ಗಗನಸಖಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಆದ್ರೆ ಗಗನಸಖಿ ಹೆಸರು ತಿಳಿದು ಬಂದಿಲ್ಲ. ಸಂಜೆ 4.30ರ ಸುಮಾರಿಗೆ ಈಸ್ಟ್ ಮಿಡ್‌ಲ್ಯಾಂಡ್ಸ್ ನಲ್ಲಿ ಈ ಘಟನೆ ನಡೆದಿದೆ. TUI ಏರ್‌ವೇಸ್ ವಿಮಾನದ ಗಗನಸಖಿ ಗಾಯಗೊಂಡಿದ್ದಾರೆ. ಬಿಬಿಸಿ ವರದಿ ಪ್ರಕಾರ, ಗಾಯಾಳು ಮಹಿಳೆಯನ್ನು ನಾಟಿಂಗ್‌ಹ್ಯಾಮ್‌ನಲ್ಲಿರುವ ಕ್ವೀನ್ಸ್ ಮೆಡಿಕಲ್ ಸೆಂಟರ್‌ಗೆ ಏರ್‌ಲಿಫ್ಟ್ ಮಾಡಲಾಯಿತು ಎಂದು ವರದಿಯಾಗಿದೆ.
ಬಿದ್ದಿದ್ದು ಹೇಗೆ?
ಟಿಯುಐ ವಿಮಾನ ಟೇಕಾಫ್ ಆಗಲು ಸಿದ್ಧವಾಗಿತ್ತು. ವಿಮಾನಕ್ಕೆ ಜೋಡಿಸಲಾದ ಮೆಟ್ಟಿಲುಗಳನ್ನು ಅಲ್ಲಿಂದ ತೆಗೆಯಲಾಗಿತ್ತು. ಆದ್ರೆ ಸಿಬ್ಬಂದಿ ಇನ್ನು ಮೆಟ್ಟಿಲುಗಳಿವೆ ಎಂದು ತಿಳಿದು ಬಂದಿದ್ದರಿಂದ ವಿಮಾನದ ಸಿಬ್ಬಂದಿಗೆ ಕೆಳಗೆ ಬಿದ್ದಿದ್ದಾರೆ. ಮೆಟ್ಟಿಲು ತೆಗೆದಿರುವ ವಿಷಯ ತಿಳಿಯದ ಸಿಬ್ಬಂದಿ ಬಾಗಿಲು ತೆಗೆದು ಹೊರಗೆ ಬಂದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಸ್ಟ್ ಮಿಡ್‌ಲ್ಯಾಂಡ್ಸ್ ವಿಮಾನ ನಿಲ್ದಾಣದಿಂದ ನಮಗೆ ಡಿಸೆಂಬರ್ 16ರಂದು ಸಂಜೆ 4.31ಕ್ಕೆ ನಮಗೆ ಕರೆ ಬಂದಿತ್ತು. ಕೂಡಲೇ ಸಿಂಗಲ್ ಚೇರ್ ಮತ್ತು ಅರೆವದ್ಯಕೀಯ ಸಿಬ್ಬಂದಿಯೊಂದಿಗೆ ಅಂಬುಲೆನ್ಸ್ ಕಳುಹಿಸಲಾಯ್ತು. ನಂತರ ಅಲ್ಲಿಂದ ಓರ್ವ ಗಾಯಾಳುವನ್ನು ಕ್ವೀನ್ಸ್ ಮೆಡಿಕಲ್ ಸೆಂಟರ್‌ಗೆ ರವಾನಿಸಲಾಯ್ತು ಎಂದು ಇಎಂಎಸ್ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: 2025ಕ್ಕೆ ಕಡಿಮೆ ಬಂಡವಾಳದ 10 ಬ್ಯುಸಿನೆಸ್ ಐಡಿಯಾಗಳು: ಪ್ರತಿದಿನ ಎಣಿಸಬಹುದು ಹಣ
ತನಿಖೆಗೆ ಆದೇಶ
ವಿಮಾನದಿಂದ ಮಹಿಳೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ತನಿಖೆಗೆ ಆದೇಶಿಸಲಾಗಿದೆ. ನಾವು ತನಿಖೆಗೆ ಸಂಪೂರ್ಣವಾಗಿ ಸ್ಪಂದಿಸುತ್ತೇವೆ. ಗಾಯಾಳು ಮಹಿಳಾ ಫ್ಲೈಟ್ ಅಟೆಂಡೆಂಟ್ ಶೀಘ್ರವಾಗಿ ಗುಣಮುಖವಾಗಲಿ ಎಂದು ಹಾರೈಸುತ್ತೇವೆ ಅಂತಾ ಇಎಂಎಸ್ ಕಾರ್ಯನಿರ್ವಾಹಕ ನಿರ್ದೇಶಕ ಸೈಮನ್ ಹಿಂಚ್ಲೆ ಹೇಳಿದ್ದಾರೆ.
ಮಹಿಳೆಯೊಬ್ಬರು ವಿಮಾನದಿಂದ ಗಾಳಿಯಿಂದ ಬಿದ್ದಿದ್ದಾರೆಯೇ? ಮಹಿಳೆ ವಿಮಾನದಿಂದ ಬೀಳಲು ಕಾರಣವೇನು? ಎಂಬುದನ್ನು ತಿಳಿಯಲು ತನಿಖೆ ಆರಂಭಿಸಲು ಅಪಘಾತ ತನಿಖಾ ಶಾಖೆ (ಎಬಿಸಿ) ಸೂಚಿಸಿದೆ. ತನಿಖಾಧಿಕಾರಿಗಳು ಎಲ್ಲಾ ಮಾಹಿತಿ ಮತ್ತು ಸಾಕ್ಷ್ಯವನ್ನು ಸಂಗ್ರಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ವಿಮಾನಕ್ಕೆ ಮೆಟ್ಟಿಲುಗಳುಳ್ಳ ಏಣಿಯನ್ನು ಅಳವಡಿಸುವುದು ಗ್ರೌಂಡ್ ಹ್ಯಾಂಡ್ಲಿಂಗ್ ಏಜೆಂಟ್‌ನ ಜವಾಬ್ದಾರಿ ಆಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ವಿಮಾನಯಾನ ಸಂಸ್ಥೆ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರಲ್ಲ.
ಇದನ್ನೂ ಓದಿ: ಮಹಿಳೆಗೆ ಕೊಟ್ಟ ಮಾತು ಉಳಿಸಿಕೊಂಡ ಮೋದಿ; ಹಿರಿ ಹಿರಿ ಹಿಗ್ಗಿದ 101ರ ಅಜ್ಜ