Asianet Suvarna News Asianet Suvarna News

ಭಾರತ- ಚೀನಾ ಗಡಿ ಕುರಿತ ಟ್ರಂಪ್‌ ಅಜ್ಞಾನಕ್ಕೆ ಮೋದಿ ಸುಸ್ತು

ಭಾರತ ಮತ್ತು ಚೀನಾ ರಾಷ್ಟ್ರಗಳ ಬಗ್ಗೆ ಟ್ರಂಪ್‌ ಜ್ಞಾನ ನೋಡಿ ಸ್ವತಃ ಪ್ರಧಾನಿ ನರೇಂದ್ರ ಅವರು ದಂಗಾಗಿದ್ದರು ಎಂಬ ವಿಚಾರವೀಗ ಬಹಿರಂಗವಾಗಿದೆ. 

Trump Has No Idea About India China border
Author
Bengaluru, First Published Jan 17, 2020, 10:13 AM IST
  • Facebook
  • Twitter
  • Whatsapp

ವಾಷಿಂಗ್ಟನ್‌ [ಜ.17]: ಏಷ್ಯಾದ ನೆರೆಯ ರಾಷ್ಟ್ರಗಳಾದ ಭಾರತ ಮತ್ತು ಚೀನಾ ರಾಷ್ಟ್ರಗಳ ಬಗ್ಗೆ ಟ್ರಂಪ್‌ ಜ್ಞಾನ ನೋಡಿ ಸ್ವತಃ ಪ್ರಧಾನಿ ನರೇಂದ್ರ ಅವರು ದಂಗಾಗಿದ್ದರು ಎಂಬ ವಿಚಾರವನ್ನು ‘ಎ ವೆರಿ ಸ್ಟೇಬಲ್‌ ಜೀನಿಯಸ್‌’ ಪುಸ್ತಕ ಬಹಿರಂಗಪಡಿಸಿದೆ. 

ಪತ್ರಿಕೋದ್ಯಮದಲ್ಲಿ ಸಾಧನೆಗೈದ ಪತ್ರಕರ್ತರಿಗೆ ನೀಡಲಾಗುವ ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತರಾದ ಅಮೆರಿಕದ ಫಿಲಿಪ್‌ ರುಕ್ಕರ್‌ ಹಾಗೂ ಕ್ಯಾರೊಲ್‌ ಡಿ ಲಿಯಾನಿಂಗ್‌ ಅವರು ಬರೆದ ‘ಎ ವೆರಿ ಸ್ಟೇಬಲ್‌ ಜೀನಿಯಸ್‌’ ಪುಸ್ತಕವು ಅಧ್ಯಕ್ಷ ಟ್ರಂಪ್‌ ಅವರ 3 ವರ್ಷಗಳ ಆಡಳಿತಾವಧಿಯ ವಿವರಣೆ ಒಳಗೊಂಡಿದ್ದು, ಅದರಲ್ಲಿ ಮೋದಿ ಕುರಿತ ಮಾಹಿತಿ ಇದೆ.

ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದಾರೆ ಟ್ರಂಪ್?: ಸಿದ್ಧತೆ ಜೋರು!..

ಮುಖಾಮುಖಿ ಭೇಟಿಯೊಂದರ ವೇಳೆ ಮೋದಿ ಅವರನ್ನು ಉದ್ದೇಶಿಸಿ ಮಾತನಾಡಿದ್ದ ಟ್ರಂಪ್‌, ‘ಇದು ನೀವು ಚೀನಾದೊಂದಿಗೆ ಗಡಿ ಹಂಚಿಕೊಂಡಿಲ್ಲದೇ ಇರುವ ರೀತಿಯದ್ದಲ್ಲ’ ಎಂದಿದ್ದರು. 

ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದಾರೆ ಟ್ರಂಪ್?: ಸಿದ್ಧತೆ ಜೋರು!...

ಈ ಮಾತು ಕೇಳಿದಾಕ್ಷಣ ಮೋದಿ ಕಣ್ಣು ಅರಳಿದ್ದವು. ಆ ನಂತರ, ಟ್ರಂಪ್‌ ಅವರು ನಿಜಕ್ಕೂ ಗಂಭೀರ ವ್ಯಕ್ತಿಯಲ್ಲ ಎಂದು ಮೋದಿ ಭಾವಿಸಿದ್ದರು ಎಂದು ಸ್ವತಃ ಟ್ರಂಪ್‌ರ ಆಪ್ತರೇ ತಿಳಿಸಿದ್ದಾರೆ ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ. ಅಲ್ಲದೆ, ಟ್ರಂಪ್‌ ಅವರಿಗೆ 2ನೇ ವಿಶ್ವ ಯುದ್ಧಕ್ಕೆ ಅಮೆರಿಕ ಭಾಗಿಯಾಗಲು ಕಾರಣೀಭೂತವಾದ ಪಲ್‌ರ್‍ ಹಾರ್ಬರ್‌ ಮೇಲಿನ ಜಪಾನ್‌ ದಾಳಿ ಬಗ್ಗೆ ಸೇರಿದಂತೆ ಮೂಲಭೂತ ಇತಿಹಾಸದ ಜ್ಞಾನವೇ ಇಲ್ಲ.

Follow Us:
Download App:
  • android
  • ios