ಅಮೆರಿಕದ ಎಚ್1ಬಿ ವೀಸಾ ನಿಷೇಧ ಮಾ.31ರವರೆಗೆ ವಿಸ್ತರಣೆ| ಬೈಡೆನ್ ಅಧ್ಯಕ್ಷರಾಗಲು 20 ದಿನ ಬಾಕಿ: ಟ್ರಂಪ್ ಆದೇಶ ರದ್ದು?
ವಾಷಿಂಗ್ಟನ್(ಜ.02): ಭಾರತದ ಸಾಫ್ಟ್‌ವೇರ್ ಎಂಜಿನಿಯರ್‌ಗಳ ‘ಅಮೆರಿಕದ ಕನಸು’ ಭಗ್ನಗೊಳಿಸುವ ಎಚ್1ಬಿ ವೀಸಾ ನಿಷೇಧವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಚ್‌ರ್ 31ರವರೆಗೂ ವಿಸ್ತರಿಸಿದ್ದಾರೆ. ವಿದೇಶಿ ನೌಕರರಿಗೆ ಅಮೆರಿಕಕ್ಕೆ ಬಂದು ಕೆಲಸ ಮಾಡಲು ಅನುಮತಿ ನೀಡುವ ಎಚ್1ಬಿ ಹಾಗೂ ಇನ್ನಿತರ ವರ್ಕ್ ವೀಸಾಗಳನ್ನು 2020ರ ಡಿ.31ರ ವರೆಗೆ ನೀಡದಂತೆ ಕಳೆದ ಏ.22 ಹಾಗೂ ಜೂ.22ರಂದು ಟ್ರಂಪ್ ನಿಷೇಧ ಹೇರಿದ್ದರು. ಅದರ ಅವಧಿ ಗುರುವಾರ ಮುಗಿಯುವುದಕ್ಕೂ ಮುನ್ನ ಮಾ.31ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.
ದಲೈ ಉತ್ತರಾಧಿಕಾರಿ ಆಯ್ಕೆಯಲ್ಲಿ ಚೀನಾ ಆಟಕ್ಕೆ ಅಮೆರಿಕ ಲಗಾಮು!
ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ತಾವು ಅಧಿಕಾರಕ್ಕೆ ಬಂದ ಮೇಲೆ ಟ್ರಂಪ್ ಅವರ ಈ ಆದೇಶವನ್ನು ರದ್ದುಗೊಳಿಸುವುದಾಗಿ ಹೇಳಿದ್ದರು. ಅವರು ಅಮೆರಿಕದ ಅಧ್ಯಕ್ಷರಾಗಿ ಪದಗ್ರಹಣ ಮಾಡಲು ಇನ್ನು 20 ದಿನಗಳಷ್ಟೇ ಬಾಕಿಯಿವೆ.
ಪದತ್ಯಾಗ ಮಾಡಲೊಲ್ಲದ ಟ್ರಂಪ್: ಅಮೆರಿಕ ಅಧ್ಯಕ್ಷನ ನಡೆಗೆ ಎಲ್ಲೆಡೆ ವಿರೋಧ!
ಭಾರತ ಹಾಗೂ ಚೀನಾದ ಸಾವಿರಾರು ನೌಕರರು ಪ್ರತಿ ವರ್ಷ ಎಚ್1ಬಿ ವೀಸಾ ಪಡೆದು ಅಮೆರಿಕಕ್ಕೆ ತೆರಳುತ್ತಾರೆ. ಅಮೆರಿಕದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳು ಭಾರತೀಯ ನೌಕರರಿಗೆ ದೊಡ್ಡ ಪ್ರಮಾಣದಲ್ಲಿ ಈ ವೀಸಾ ಕೊಡಿಸಿ ಕರೆಸಿಕೊಳ್ಳುತ್ತವೆ. ಟ್ರಂಪ್ ಆದೇಶದಿಂದ ಇವರೆಲ್ಲರಿಗೂ ನಿರಾಸೆಯಾಗಲಿದೆ. ಕೊರೋನಾ ಬಂದ ನಂತರ ಅಮೆರಿಕದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಿದ್ದು, ವಿದೇಶಿ ನೌಕರರು ಅಮೆರಿಕನ್ನರ ಉದ್ಯೋಗ ಕಿತ್ತುಕೊಳ್ಳುವಂತಾಗಬಾರದು ಎಂಬ ಕಾರಣ ನೀಡಿ ಟ್ರಂಪ್ ಈ ವೀಸಾಗಳನ್ನು ನಿಷೇಧಿಸಿದ್ದರು. ಆ ಪರಿಸ್ಥಿತಿ ಈಗಲೂ ಬದಲಾಗಿಲ್ಲ ಎಂಬ ಕಾರಣ ನೀಡಿ ಅದನ್ನು ವಿಸ್ತರಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 2, 2021, 10:05 AM IST