ನವದೆಹಲಿ(ಆ.27): ಚೀನಾದ ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತ ಉಯಿಘರ್‌ ಮುಸ್ಲಿಮರ ಮೇಲೆ ಸರ್ಕಾರ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಅಮೆರಿಕ, ಬ್ರಿಟನ್‌ ಹಾಗೂ ಜರ್ಮನಿ ಧ್ವನಿ ಎತ್ತಿದೆ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ, ಉಗ್ರ ನಿಗ್ರಹದ ಹೆಸರಿನಲ್ಲಿ ಹತ್ತು ಲಕ್ಷಕ್ಕೂ ಅಧಿಕ ಮುಸಲ್ಮಾನರನ್ನು ದಿಗ್ಬಂಧನ ಕೇಂದ್ರದಲ್ಲಿ ಕೂಡಿ ಹಾಕಿರುವ ಚೀನಾ ನಡೆಗೆ ಈ ದೇಶಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಅಲ್ಲದೇ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ರಾಜಕೀಯ ಪ್ರತಿಭಟನೆಯನ್ನು ಉಗ್ರ ನಿಗ್ರಹ ಕಾಯ್ದೆ ಅಥವಾ ಹಿಂಸಾಚಾರದ ಮೂಲಕ ಕಟ್ಟಿಹಾಕಬಾರದು ಎಂದು ಹೇಳಿವೆ.

ಜತೆಗೆ ಉಯಿಘರ್‌ಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಮಾನವ ಹಕ್ಕುಗಳ ನಿರಾಕರಣೆ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿವೆ. ಉಗ್ರ ನಿಗ್ರಹ ಉಪಕ್ರಮಗಳು ಮಾನವ ಹಕ್ಕುಗಳ ಉಲ್ಲಂಘಟನೆಗೆ ನೆಪವಾಗಬಾರದು ಎಂದು ಆಗ್ರಹಿಸಿವೆ.