ನವದೆಹಲಿ (ನ. 29): ಸಸ್ಯಗಳು ಸೂರ್ಯನ ಬೆಳಕನ್ನು ಬಳಸಿ ದ್ಯುತಿಸಂಶ್ಲೇಷಣೆಯ ಮೂಲಕ ಇಂಗಾಲ ಡೈ ಆಕ್ಸೈಡ್‌ ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುತ್ತವೆ ಎಂಬುದು ಮಕ್ಕಳಿಗೂ ಗೊತ್ತಿರುವ ಸಂಗತಿ. ಆದರೆ, ಈ ವಿಷಯ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಗೊತ್ತೇ ಇಲ್ಲ.

 

ಇಮ್ರಾನ್‌ ಖಾನ್‌ ಪ್ರಕಾರ ಮರಗಳು ರಾತ್ರಿಯ ವೇಳೆಯಲ್ಲಿ ಆಮ್ಲಜನಕ ಬಿಡುಗಡೆ ಮಾಡುತ್ತವೆಯಂತೆ. ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಇಮ್ರಾನ್‌, ಕಳೆದ 10 ವರ್ಷಗಳಲ್ಲಿ ಶೇ.70 ರಷ್ಟುಕಾಡನ್ನು ನಾಶಮಾಡಲಾಗಿದೆ. ಇದರ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ. ಏಕೆಂದರೆ ಮರಗಳು ರಾತ್ರಿ ವೇಳೆಯಲ್ಲಿ ಆಮ್ಲಜನಕ ನೀಡುತ್ತವೆ ಎಂದು ಹೇಳಿದ್ದಾರೆ. ಈ ಹೇಳಿಕೆ ಟ್ವಿಟರ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಹೊಸ ಸಂಶೋಧನೆ ಮಾಡಿದ್ದಕ್ಕೆ ಇಮ್ರಾನ್ ಖಾನ್‌ಗೆ ನೋಬೆಲ್ ಪ್ರಶಸ್ತಿ ನೀಡಬೇಕೆಂದು ನೆಟ್ಟಿಗರು ಕಾಲೆಳೆದಿದ್ದಾರೆ.