ಒಂದು ಗುಂಡಿಯಿಂದ ಹೊರತೆಗೆದ ಕಬ್ಬಿಣದ ಪೆಟ್ಟಿಗೆಯಲ್ಲಿ ತುಂಬಾ ಚಿನ್ನಾಭರಣಗಳು ಮತ್ತು ಚಿನ್ನದ ವಿಗ್ರಹಗಳು ಪತ್ತೆಯಾಗಿವೆ. ಇದನ್ನು 2ನೇ ಮಹಾಯುದ್ಧದ ವೇಳೆ ಸೈನಿಕರು ಬಚ್ಚಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ಗುಂಡಿಯಿಂದ ಹೊರತೆಗೆದ ಕಬ್ಬಿಣದ ಪೆಟ್ಟಿಗೆಯಲ್ಲಿ ತುಂಬಾ ಚಿನ್ನಾಭರಣಗಳು ಮತ್ತು ಚಿನ್ನದ ವಿಗ್ರಹಗಳು ಪತ್ತೆಯಾಗಿವೆ. ಇದನ್ನು 2ನೇ ಮಹಾಯುದ್ಧದ ವೇಳೆ ಸೈನಿಕರು ಬಚ್ಚಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಹಲವು ನಿಧಿ ಶೋಧನೆ ಮಾಡಿದ ವಿಡಿಯೋಗಳನ್ನು ನೋಡಿದರೆ ಇದು ನಮಗೆ ಸಿಗಬಾರದೇ ಎಂದು ಕೈ-ಕೈ ಹಿಸುಕಿಕೊಂಡು ಕೊರಗುವುದು ಸಹಜ. ಆದರೆ, ನಿಧಿ ಶೋಧಕರು ಜೀವನ ಪೂರ್ತಿ ಇದೇ ಕೆಲಸಕ್ಕೆ ತಮ್ಮನ್ನು ಅರ್ಪಿಸಿಕೊಂಡಿರುತ್ತಾರೆ. ಆದರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಗುಂಡಿಯೊಂದರಲ್ಲಿ ಹಳೆಯ ಕಬ್ಬಿಣದ ಪೆಟ್ಟಿಗೆ ಸಿಕ್ಕಿದ್ದು, ಅದರಲ್ಲಿ ಚಿನ್ನದ ನಾಣ್ಯಗಳು ಹಾಗೂ ದೇವರ ವಿಗ್ರಹಳು ಸಿಕ್ಕಿವೆ. ಇದು 2ನೇ ಜಾಗತಿಕ ಮಹಾಯುದ್ಧದಲ್ಲಿ ಸೈನಿಕರು ಬಚ್ಚಿಟ್ಟಿರಬಹುದು ಎಂದು ಹೇಳಲಾಗಿದೆ. ಆದರೆ, ಈ ವಿಡಿಯೋದ ಬಗ್ಗೆ ಹಲವರು ಇದು ನಕಲಿ ವಿಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ. 

ಹೌದು, ನಿಧಿ ಸಿಕ್ಕಿದ್ದರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಜನಪ್ರಿಯ ಆಗುತ್ತಿವೆ. ಅಂಥ ಹಲವು ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ. ಆದರೆ, ಕೆಲವು ನಕಲಿ ವಿಡಿಯೋಗಳೂ ಇವೆ. ಜನ ಅವುಗಳ ನಿಜಾಂಶವನ್ನು ಪ್ರಶ್ನಿಸಿ, ನೀವು ಜನರಿಗೆ ವಂಚನೆ ಮಾಡುತ್ತಿದ್ದೀರಿ ಎಂದು ಟೀಕೆಗೂ ಗುರಿ ಆಗುತ್ತಾರೆ. ಈಗ ವೈರಲ್ ಆಗಿರೋ ಒಂದು ವಿಡಿಯೋದ ಬಗ್ಗೆ ಜನ ಎರಡು ಬಣ ಆಗಿದ್ದಾರೆ. ಒಬ್ಬರು ನಿಜವಾದ ನಿಧಿ ಸಿಕ್ಕಿದೆ ಎಂದರೆ, ಇನ್ನು ಕೆಲವರು ಇದು ಫೇಕ್ ಎಂದು ಜಗಳ ಆರಂಭಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭಾರತೀಯ ಯುವಕರಿಗೆ ಭಾರೀ ಬೇಡಿಕೆ; ಇಲ್ಲಿದೆ ಪಾಕ್ ಹುಡುಗಿಯರ ಅಧಿಕೃತ ಆಹ್ವಾನ!

ಫೆಲಿಸ್ಯಾಬ್ ಸಿಕೊ ಅನ್ನೋ ಇನ್‌ಸ್ಟಾಗ್ರಾಮ್ ಅಕೌಂಟ್‌ನಿಂದ ಈ ವಿಡಿಯೋ ಶೇರ್ ಆಗಿದೆ. ಅವರು ತಮ್ಮನ್ನು ಆರ್ಕಿಯಾಲಜಿ ಸೇವಕ ಅಂತ ಕರೆದುಕೊಳ್ಳುತ್ತಾರೆ. ವಿಡಿಯೋ ಒಂದು ಗುಂಡಿ ತೋಡುವುದರಿಂದ ಶುರುವಾಗುತ್ತದೆ. ಸ್ವಲ್ಪ ಹೊತ್ತಿನ ನಂತರ, ತೋಡುತ್ತಿದ್ದ ಗುಂಡಿಯಲ್ಲಿ ಒಂದು ಕಬ್ಬಿಣದ ಪೆಟ್ಟಿಗೆ ಸಿಗುತ್ತದೆ. ಅದನ್ನು ಕಷ್ಟಪಟ್ಟು ಹೊರತೆಗೆಯುತ್ತಾರೆ. ಹಳೆಯ ಕಾಲದ ಸೈನಿಕರು ಉಪಯೋಗಿಸ್ತಿದ್ದ ಕಬ್ಬಿಣದ ಪೆಟ್ಟಿಗೆಯಂತಿದೆ. ಭಾರವಾಗಿರೋ ಪೆಟ್ಟಿಗೆಯನ್ನು ಹೊರತೆಗೆದು ಅದರ ಬಾಗಿಲು ಓಪನ್ ಮಾಡಿದಾಗ, ಒಳಗೆ ತುಂಬಾ ಚಿನ್ನದ ಆಭರಣಗಳು ಮತ್ತು ದೇವರ ವಿಗ್ರಹಗಳಿರುವುದು ಕಾಣುತ್ತದೆ. ಅಲ್ಲಿಗೆ ಈ ವಿಡಿಯೋ ಮುಗಿಯುತ್ತದೆ.

View post on Instagram

ಇನ್ನು ವಿಡಿಯೋ ಪೋಸ್ಟ್ ಮಾಡಿಕೊಂಡ ವ್ಯಕ್ತಿ 'ನಿಧಿ ನಕ್ಷೆ ಪ್ರಕಾರ ಹಳೆಯ ನಿಧಿ ಸಿಕ್ಕಿದೆ' ಅಂತ ಶೀರ್ಷಿಕೆ ಬರೆದುಕೊಂಡಿದ್ದಾರೆ. ಇದೇ ರೀತಿಯ ಹಲವು ವಿಡಿಯೋಗಳು ಈತನ ಅಕೌಂಟ್‌ನಲ್ಲಿವೆ. ಈಗ ಶೇರ್ ಮಾಡಿರುವ ವಿಟಿಯೋವನ್ನು 12 ಲಕ್ಷ ಜನ ನೋಡಿದ್ದಾರೆ. ಆದರೆ, ಜನ ಆತ ಶೋಧನೆ ಮಾಡುತ್ತಿರುವ ನಿಧಿಯ ಬಗೆಗಿನ ನಿಜಾಂಶವನ್ನು ಪ್ರಶ್ನಿಸಿದ್ದಾರೆ. ಭೂಮಿಯೊಳಗೆ ಅಷ್ಟು ಭದ್ರವಾಗಿ ಪೆಟ್ಟಿಗೆ ಹಾಕಿದವರು ಅದಕ್ಕೆ ಒಂದು ಬೀಗ ಹಾಕಬಹುದಿತ್ತಲ್ಲ ಎಂದು ಒಬ್ಬರು ಕಾಮೆಂಟ್ ಮಾಡದ್ದಾರೆ. ಇನ್ನು ಕೆಲವರು, ನಿಧಿಯನ್ನು ಪಟಾಕಿ ಪೆಟ್ಟಿಗೆಯಲ್ಲಿ ಇಡ್ತಾರಾ ಅಂತ ಕೇಳಿದ್ದಾರೆ. ಮತ್ತೊಬ್ಬರು ಇದು 2ನೇ ಮಹಾಯುದ್ಧದ ಕಾಲದ ನಿಧಿ ಇರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಮುದ್ರ ತಳದಲ್ಲಿ 22,000 ಕೆಜಿ ಬಂಗಾರ ಪತ್ತೆ; ಕೆಜಿಎಫ್ ರಾಕಿಭಾಯ್ ಕಥೆ ನಿಜವಾಯ್ತಾ?