Alcohol Abuse: ಅಪರಿಚಿತ ಮಹಿಳೆ ಬೆಡ್‌ರೂಂನಲ್ಲಿ ಅರೆಬೆತ್ತಲೆ ಮಲಗಿದ ಕಂಪನಿಯ ಮುಖ್ಯ ಅಧಿಕಾರಿ ವಿರುದ್ದ ಕೇಸ್..!
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ಟೈಸನ್ ಫುಡ್ಸ್ ನಿರಾಕರಿಸಿದ್ದು, ಅದನ್ನು ವೈಯಕ್ತಿಕ ವಿಚಾರ ಎಂದು ಹೇಳಿದ್ದಾರೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮ ಸಿಎನ್‌ಎನ್‌ಗೆ ಇಮೇಲ್ ಮಾಡಿದ ಟೈಸನ್ ಫುಡ್ಸ್, ನಮಗೆ ಈ ವಿಚಾರದ ಬಗ್ಗೆ ಅರಿವಿದೆ. ಆದರೆ, ಇದು ವೈಯಕ್ತಿಕ ವಿಚಾರವಾದ್ದರಿಂದ ನಾವು ಈ ಬಗ್ಗೆ ಹೆಚ್ಚೇನೂ ಪ್ರತಿಕ್ರಿಯೆ ನೀಡಲ್ಲ ಎಂದು ಉತ್ತರಿಸಿದ್ದಾರೆ.
ಸಾಮಾನ್ಯ ಜನರಿಗೆ ಶ್ರೀಮಂತರ ಮೇಲೆ, ಜನ ಪ್ರತಿನಿಧಿಗಳ ಮೇಲೆ ಹಾಗೂ ದೊಡ್ಡ ದೊಡ್ಡ ಕಂಪನಿಗಳ ಪ್ರಮುಖ ಅಧಿಕಾರಿಗಳತ್ತ ಕಣ್ಣಿಟ್ಟಿರುತ್ತಾರೆ. ಅವರ ಒಂದೊಂದು ನಡೆಗಳನ್ನೂ ಹಲವರು ಗಮನಿಸಿರುತ್ತಿರುತ್ತಾರೆ. ಇನ್ನು, ಅಂತಹವರ ವಿರುದ್ಧ ಆರೋಪ ಕೇಳಿಬಂದರಂತೂ ದೊಡ್ಡದಾಗಿ ಸುದ್ದಿಯಾಗಿಬಿಡುತ್ತದೆ. ನಾವು ಹೇಳಲು ಹೊರಟಿರುವುದು ಸಹ ಇಂತದ್ದೇ ಕಥೆ. ಕಂಪನಿಯೊಂದರ ಪ್ರಮುಖ ಅಧಿಕಾರಿ ಕುಡಿದು ಟೈಟಾಗಿ ಯಾರದ್ದೋ ಮನೆಗೆ ಹೋಗಿ ಮಲಗಿ ಈಗ ಜೈಲು (Arrested) ಕಂಬಿ ಎಣಿಸುವಂತಾಗಿದೆ. ಅದೂ ಅವರು ಹೋಗಿರುವುದು ಒಂಟಿ ಮಹಿಳೆ (Woman) ಇರುವ ಮನೆಗೆ..!
ಅಮೆರಿಕ (United States of America) ಮೂಲದ ಮಾಂಸ ಸಂಸ್ಕರಣಾ ಕಂಪನಿಯೊಂದರ (Meat Processing Company) ಪ್ರಮುಖ ಹಣಕಾಸು ಅಧಿಕಾರಿ (Chief Financial Officer) ಕುಡಿದು, ಅಪರಿಚಿತ ಮಹಿಳೆಯ ಮನೆಗೆ ಹೋಗಿ ಆಕೆಯ ಬೆಡ್ (Bed) ಮೇಲೆ ಮಲಗಿದ ಆರೋಪಕ್ಕೆ ಭಾನುವಾರ ಅವರನ್ನು ಬಂಧಿಸಲಾಗಿದೆ ಎಂದು ವರದಿಗಳು ಹೇಳುತ್ತಿವೆ. ಟೈಸನ್ ಫುಡ್ಸ್ (Tyson Foods) ಕಂಪನಿಯ ಸಿಎಫ್‌ಒ (CFO) ಆಗಿರುವ ಜಾನ್. ಆರ್. ಟೈಸನ್ (John R Tyson) ವಿರುದ್ಧ ಅರ್ಕಾನ್ಸಸ್ ಮೂಲದ ಮಹಿಳೆ ಪೊಲೀಸರಿಗೆ ದೂರು ನೀಡಿದ ಬಳಿಕ ಅವರನ್ನು ಬಂಧಿಸಲಾಗಿದೆ. ಅಪರಿಚಿತ ವ್ಯಕ್ತಿ ತನ್ನ ಬೆಡ್ ಮೇಲೆ ಮಲಗಿದ್ದು, ತನ್ನ ಬಟ್ಟೆಗಳನ್ನು ನೆಲದ ಮೇಲೆ ಬಿಸಾಡಿ ಮಲಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಇದನ್ನು ಓದಿ: Viral Video: ಕುಡಿದು ಟೈಟಾದ 4 ಯುವತಿಯರಿಂದ ಪಬ್ ಎದುರೇ ಮತ್ತೊಬ್ಬಳ ಮೇಲೆ ಥಳಿತ
ಭಾನುವಾರ ಬೆಳ್ಳಂಬೆಳಗ್ಗೆ ಫಯೆಟ್ಟೆವಿಲ್ಲೆ ಪೊಲೀಸರು ಭಾನುವಾರ ಬೆಳಗ್ಗೆ ಮಹಿಳೆಯೊಬ್ಬರಂದ ದೂರವಾಣಿ ಕರೆ ಸ್ವೀಕರಿಸಿದ್ದು, ನಾನು ಮನೆಗೆ ವಾಪಸ್ ಬಂದಾಗ ತನಗೆ ಪರಿಚಯವಿಲ್ಲದ ಪುರುಷರೊಬ್ಬರು ತನ್ನ ಬೆಡ್ ಮೇಲೆ ಮಲಗಿದ್ದು, ಅವರ ಬಟ್ಟೆಗಳು ನೆಲದ ಮೇಲೆ ಬಿದ್ದಿದ್ದವು ಎಂದೂ ದೂರಿನಲ್ಲಿ ತಿಳಿಸಿದ್ದಾರೆ. ನಂತರ, ಪೊಲೀಸರು ಸ್ಥಳಕ್ಕೆ ಬಂದು, ಟೈಸನ್ ಅವರನ್ನು ಎಬ್ಬಿಸಿದಾಗ, ಅವರು ಸರಿಯಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಪೊಲೀಸರು ಅವರನ್ನು ವಿಚಾರಿಸುತ್ತಿದ್ದರೂ, ಮತ್ತೆ ಮಲಗಿ ಕೆಲ ಸಮಯದ ನಂತರ ಆ ಹಾಸಿಗೆಯಿಂದ ಎದ್ದರು ಎಂದು ತಿಳಿದುಬಂದಿದೆ. ಅವರು ಕೇವಲ ಅಂಡರ್‌ವೇರ್ ಧರಿಸಿ ಮಲಗಿದ್ದರು ಎಂದು ತಿಳಿದುಬಂದಿದೆ.
ಇನ್ನು, ಅವರ ದೇಹ ಹಾಗೂ ಅವರು ಮಾತನಾಡುತ್ತಿದ್ದಾಗ ಅವರು ಕುಡಿದಿದ್ದಾರೆ ಎಂಬುದನ್ನು ಪೊಲೀಸರು ಅರಿತುಕೊಂಡರು. ನಂತರ, ಅವರನ್ನು ಬಂಧಿಸಲಾಯಿತು ಎಂದು ತಿಳಿದುಬಂದಿದೆ. ಆದರೆ, ಸದ್ಯ ಅವರನ್ನು 415 ಡಾಲರ್ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದ್ದು, ಡಿಸೆಂಬರ್ 1 ರಂದು ಟೈಸನ್ ಕೋರ್ಟ್‌ಗೆ ಹಾಜರಾಗಬೇಕಿದೆ ಎಂದೂ ವರದಿಗಳು ತಿಳಿಸಿವೆ.
ಇದನ್ನೂ ಓದಿ: ಕುಡುಕಿಯ ಅವಾಂತರ : ವಿಮಾನ ತುರ್ತು ಭೂಸ್ಪರ್ಶ
ಈ ಮಧ್ಯೆ, ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ಟೈಸನ್ ಫುಡ್ಸ್ ನಿರಾಕರಿಸಿದ್ದು, ಅದನ್ನು ವೈಯಕ್ತಿಕ ವಿಚಾರ ಎಂದು ಹೇಳಿದ್ದಾರೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮ ಸಿಎನ್‌ಎನ್‌ಗೆ ಇಮೇಲ್ ಮಾಡಿದ ಟೈಸನ್ ಫುಡ್ಸ್, ನಮಗೆ ಈ ವಿಚಾರದ ಬಗ್ಗೆ ಅರಿವಿದೆ. ಆದರೆ, ಇದು ವೈಯಕ್ತಿಕ ವಿಚಾರವಾದ್ದರಿಂದ ನಾವು ಈ ಬಗ್ಗೆ ಹೆಚ್ಚೇನೂ ಪ್ರತಿಕ್ರಿಯೆ ನೀಡಲ್ಲ ಎಂದು ಉತ್ತರಿಸಿದ್ದಾರೆ.
ಇನ್ನೊಂದೆಡೆ, ಬಂಧನವಾಗಿದ್ದ ಟೈಸನ್ ಘಟನೆ ಬಗ್ಗೆ ಕ್ಷಮೆ ಕೇಳಿದ್ದು, ಮದ್ಯಪಾನದ ದುರಭ್ಯಾಸದ ಕುರಿತು ಕೌನ್ಸೆಲ್ಲಿಂಗ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದರು. ಕಂಪನಿಗೆ ಮೆಮೋ ಕಳಿಸಿದ ಟೈಸನ್, ನಾನು ಗಂಭೀರವಾದ ತಪ್ಪು ಮಾಡಿದ್ದೇನೆ, ನನ್ನ ಕ್ರಿಯೆಗಳು ಇತರರ ಮೇಲೆ ಬೀರಬಹುದಾದ ಪ್ರಭಾವವನ್ನು ಆಳವಾಗಿ ಪ್ರತಿಬಿಂಬಿಸುತ್ತೇನೆ ಎಂದೂ ಟೈಸನ್ ಫುಡ್ಸ್ ಕಂಪನಿಯ ಪ್ರಮುಖ ಹಣಕಾಸು ಅಧಿಕಾರಿ ಜಾನ್. ಆರ್. ಟೈಸನ್ ಕ್ಷಮೆ ಕೋರಿದ್ದಾರೆ.
ಇದನ್ನೂ ಓದಿ: ಮಣಿಪಾಲ್‌ನಲ್ಲಿ ನೈತಿಕ ಪೊಲೀಸ್ ಗಿರಿ: ಕುಡಿದ ಕಾರಣಕ್ಕೆ ಯುವತಿಯ ಮೇಲೆ ಸಾಮೂಹಿಕ ಹಲ್ಲೆ