ಬೀಜಿಂಗ್[ನ. 16]  ಈ ಮಳೆಗಾಲ ಮುಗಿದು ಚಳಿಗಾಲ ಆರಂಭದ ದಿನಗಳು ಇದೆಯಲ್ಲ. ಇದು ರೋಗಗಳ ಕಾಲ ಎಂದೇ ಹೇಳಬಹುದು. ಅದರಲ್ಲಿಯೂ ಮೂಗು ಕಟ್ಟಿಕೊಂಡು ತಾಪತ್ರಯ ಕೊಡುತ್ತಿದ್ದರೆ ಆ  ತೊಂದರೆ ಯಾರಿಗೂ ಬೇಡ.

ಆದರೆ ಚೀನಾದಿಂದ ವರದಿಯಾದ ಪ್ರಕರಣ ಮಾತ್ರ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ.ಉಸಿರಾಟದ ತೊಂದರೆ ಅನುಭವಿಸುತ್ತಿದ್ದ 30ವರ್ಷದ ಬಿನ್ ಶೆಂಗ್ ಚಿಕಿತ್ಸೆ ಪಡೆದುಕೊಳ್ಳಲು ಆಸ್ಪತ್ರೆಗೆ ದಾಖಲಾಗುತ್ತಾರೆ.

20 ವರ್ಷಗಳಿಂದ ಸಮಸ್ಯೆ ಅನುಭವಿಸುತ್ತಿದ್ದ ವ್ಯಕ್ತಿ ಮೂಗಿನಲ್ಲಿ ವಾಸನೆ ಸಮಸ್ಯೆಯನ್ನು ಅನುಭವಿಸುತ್ತಿದ್ದರು. ಇದಾದ ಮೇಲೆ ಎಕ್ಸ್ ರೇ  ಮಾಡಿದಾಗ ಅಚ್ಚರಿ ಅಂಶ ಗೊತ್ತಾಗುತ್ತದೆ.

ಎಕ್ಸ-ರೇ ಮಾಡಿದಾಗ ವ್ಯಕ್ತಿಯ ದಂತವೇ, ಹಲ್ಲುಗಳ ಸಾಲೇ ಮಿಸ್ ಆಗಿದ್ದು ಗೊತ್ತಾಗುತ್ತದೆ. ಇದು ಆ ವ್ಯಕ್ತಿಯ 10 ನೇ ವರ್ಷದಲ್ಲಿ ಆದ ಬೆಳವಣಿಗೆ ಎಂದು ಗೊತ್ತಾಗಿದೆ.   ದಂತ ಪಂಕ್ತಿ  ಆತನ ಬಾಯಿಂದ ಮೇಲೆ ಹೋಗಿ ಮೂಗಿನಲ್ಲಿ ಬೆಳೆದುಕೊಂಡಿದೆ.

ಸಮಸ್ಯೆ ಪತ್ತೆ ಹಚ್ಚಿದ ವೈದ್ಯರು 20 ನಿಮಿಷದ ಶಸ್ತ್ರಚಿಕಿತ್ಸೆ ಮಾಡಿದ್ದು ಯಶಸ್ವಿಯಾಗಿದೆ. ಈಗ    ಬಿನ್ ಶೆಂಗ್ ಮಾಮೂಲಿ ಸ್ಥಿತಿಗೆ ಮರಳಿದ್ದಾನೆ.