ಇಸ್ಲಾಮಿಕ್ ಪ್ರಾರ್ಥನೆ ಮಾಡಿ ಹಂದಿ ಮಾಂಸ ತಿಂದ ಟಿಕ್ ಟಾಕ್ ಸ್ಟಾರ್‌ಗೆ 2 ವರ್ಷ ಜೈಲು
ಇಂಡೋನೇಷ್ಯಾದ ಖ್ಯಾತ ಟಿಕ್ ಟಾಕ್ ಸ್ಟಾರ್ ಲೀನಾ ಮುಖರ್ಜಿಗೆ ಇಂಡೋನೇಷ್ಯಾದಲ್ಲಿ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಇಸ್ಲಾಮಿಕ್ ಪ್ರಾರ್ಥನೆ ಮಾಡಿದ ಬೆನ್ನಲ್ಲಿಯೇ ಹಂದಿ ಮಾಂಸ ತಿನ್ನುತ್ತಿರುವ ವಿಡಿಯೋವನ್ನು ಆಕೆ ಮಾಡಿದ್ದರು.

ನವದೆಹಲಿ (ಸೆ.22): ಬಾಲಿವುಡ್ ಚಲನಚಿತ್ರಗಳ ಮೇಲಿನ ಪ್ರೀತಿಯಿಂದಾಗಿ ಲೀನಾ ಮುಖರ್ಜಿ ಎಂದು ಪ್ರಸಿದ್ಧರಾಗಿರುವ ಲೀನಾ ಲುಟ್ಫಿಯಾವತಿಗೆ ಇಂಡೋನೇಷ್ಯಾದಲ್ಲಿ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಟಿಕ್‌ಟಾಕ್‌ನಲ್ಲಿ ಭಾರಿ ಜನಪ್ರಿಯರಾಗಿರುವ ಲೀನಾ ಮುಖರ್ಜಿ ಅಂದಾಜು 20 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದು, ತನ್ನನ್ನು ತಾನು ಮುಸ್ಲಿಂ ಎಂದು ಗುರುತಿಸಿಕೊಳ್ಳುತ್ತಾಳೆ. ಮಾರ್ಚ್ 2023 ರಲ್ಲಿ, 33 ವರ್ಷದ ಲುಟ್ಫಿಯಾವತಿ ಅವರು ಗರಿಗರಿಯಾದ ಹಂದಿಯ ಮಾಂಸವನ್ನು ತಿನ್ನುವ ಮೊದಲು "ಬಿಸ್ಮಿಲ್ಲಾ" ಎಂಬ ಅರೇಬಿಕ್ ಪದವನ್ನು ಅವರು ಉಚ್ಛಾರ ಮಾಡಿದ್ದರು. ಈ ವೀಡಿಯೊವನ್ನು ಟಿಕ್‌ಟಾಕ್‌ನಲ್ಲಿ ಅವರು ಪೋಸ್ಟ್ ಮಾಡಿದ್ದರು. ಇಸ್ಲಾಂನಲ್ಲಿ ಹಂದಿ ಮಾಂಸ ನಿಷೇಧಿತವಾಗಿದೆ. ಅದಲ್ಲದೆ, ಹಂದಿ ಮಾಂಸವನ್ನು ತಿನ್ನುವ ವೇಳೆಘೆ ಮುಖವನ್ನು ಅಸಹ್ಯವಾಗಿ ಮಾಡಿಕೊಂಡು ಇಸ್ಲಾಮಿಕ್ ಪ್ರಾರ್ಥನೆಯನ್ನೂ ಮಾಡಿದ್ದಳು. ಆ ಸಮಯದಲ್ಲಿ, ಲುಟ್ಫಿಯಾವತಿ ಅವರು ಇಂಡೋನೇಷ್ಯಾದ ಪ್ರವಾಸಿ ತಾಣವಾದ ಬಾಲಿಯಲ್ಲಿ ಪ್ರಯಾಣಿಸುತ್ತಿದ್ದರು, ಇದು ದೇಶದ ಉಳಿದ ಭಾಗಗಳಿಗಿಂತ ಭಿನ್ನವಾಗಿ ಬಹುಸಂಖ್ಯಾತ ಹಿಂದೂ ಜನಸಂಖ್ಯೆಯನ್ನು ಹೊಂದಿದೆ. ಹಂದಿ ಮಾಂಸ ಸೇವನೆಯನ್ನು ಇಸ್ಲಾಂನಲ್ಲಿ ನಿಷೇಧಿಸಿರುವುದರಿಂದ ವಿಶ್ವದ ಅತಿದೊಡ್ಡ ಮುಸ್ಲಿಂ ಬಹುಸಂಖ್ಯಾತ ದೇಶವಾಗಿರುವ ಇಂಡೋನೇಷ್ಯಾದಲ್ಲಿ ಈ ಕ್ಲಿಪ್ ಕೋಲಾಹಲಕ್ಕೆ ಕಾರಣವಾಗಿತ್ತು.
ವೈರಲ್ ವಿಡಿಯೋದಲ್ಲಿ ಹಂದಿ ಮಾಂಸ ತಿಂದ ಲೀನಾ ಮುಖರ್ಜಿಗೆ ಜೈಲು ಶಿಕ್ಷೆ: ಸೆಪ್ಟೆಂಬರ್ 19 ರಂದು, ಸುಮಾತ್ರಾದ ಪಾಲೆಂಬಾಂಗ್ ನಗರದ ನ್ಯಾಯಾಲಯವು ಉದ್ದೇಶಪೂರ್ವಕವಾಗಿ 'ಧರ್ಮದ ಆಧಾರದ ಮೇಲೆ ದ್ವೇಷ ಅಥವಾ ವ್ಯಕ್ತಿ/ಗುಂಪು ದ್ವೇಷವನ್ನು ಪ್ರಚೋದಿಸುವ ಉದ್ದೇಶದಿಂದ ಮಾಹಿತಿಯನ್ನು ಹರಡಿದೆ' ಎಂದು ಅಭಿಪ್ರಾಯಪಟ್ಟಿದೆ. ಲುಟ್ಫಿಯಾವತಿ ಅವರು ಧಾರ್ಮಿಕ ವ್ಯಕ್ತಿಗಳು ಮತ್ತು ಗುಂಪುಗಳ ವಿರುದ್ಧ "ದ್ವೇಷವನ್ನು ಪ್ರಚೋದಿಸುವ" ತಪ್ಪಿತಸ್ಥರೆಂದು ಕಂಡುಬಂದಿದೆ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು ಎಂದು ಮೆಟ್ರೋ ವರದಿ ಮಾಡಿದೆ. ಅದರೊಂದಿಗೆ ಆಕೆಗೆ 14 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಹಾಗೇನಾದರೂ ದಂಡ ಪಾವತಿ ಮಾಡದೇ ಇದ್ದಲ್ಲಿ ಆಕೆಯ ಜೈಲು ಶಿಕ್ಷೆಯನ್ನು ಮತ್ತೆ ಮೂರು ತಿಂಗಳು ವಿಸ್ತರಣೆ ಮಾಡಲಾಗುತ್ತದೆ.
ಸುಂದರಿಯರ 'ಟಾಪ್‌ಲೆಸ್ ಬಾಡಿಚೆಕ್' ವಿವಾದ, ಮಿಸ್ ಯುನಿವರ್ಸ್‌ನಿಂದ ಇಂಡೋನೇಷ್ಯಾ ಔಟ್!
ವಿಚಾರಣೆಯ ನಂತರ, ಲೀನಾ ಅವರು ತೀರ್ಪಿನಿಂದ ಅಚ್ಚರಿಗೆ ಒಳಗಾದರು ಎಂದು ತಿಳಿಸಲಾಗಿದೆ. "ನಾನು ತಪ್ಪು ಮಾಡಿದ್ದೇನೆ ಎಂದು ನನಗೆ ತಿಳಿದಿದೆ ಆದರೆ ನಾನು ಈ ಶಿಕ್ಷೆಯನ್ನು ನಿರೀಕ್ಷಿಸಿರಲಿಲ್ಲ" ಎಂದು ಲುಟ್ಫಿಯಾವತಿ ಸ್ಥಳೀಯ ಸುದ್ದಿ ಕೇಂದ್ರ ಮೆಟ್ರೋಟಿವಿಯಲ್ಲಿ ಹೇಳಿದರು.
ಇಂಡೋನೇಷ್ಯಾದಲ್ಲಿ ಹೊಸ ಕೊರೋನಾ ರೂಪಾಂತರ ಪತ್ತೆ, ತಜ್ಞರಿಂದ ಎಚ್ಚರಿಕೆ