Asianet Suvarna News Asianet Suvarna News

ಕೊರೋನಾ ಮೂರನೇ ಅಲೆ ಭೀತಿ ಮಧ್ಯೆ ಶುಭ ಸುದ್ದಿ ಕೊಟ್ಟ ಸಂಶೋಧಕರು!

* ಮಕ್ಕಳಲ್ಲಿ ಕೊರೋನಾ ತೀವ್ರತೆ, ಸಾವಿನ ಅಪಾಯ ತೀರಾ ಕಡಿಮೆ

* 3ನೇ ಅಲೆ ಭೀತಿ ನಡುವೆಯೇ ಬ್ರಿಟನ್‌ ಸಂಶೋಧಕರಿಂದ ಶುಭ ಸುದ್ದಿ

* 50000 ಮಕ್ಕಳಲ್ಲಿ ಒಬ್ಬರು ಮಾತ್ರವೇ ಐಸಿಯುಗೆ ದಾಖಲಾಗಬಹುದು

Third Wave Of Covid will not harm children says Britain scientists pod
Author
Bangalore, First Published Jul 10, 2021, 10:15 AM IST

ಲಂಡನ್‌(ಜು.10): ಕೊರೋನಾ 3ನೇ ಅಲೆ ಮಕ್ಕಳಿಗೆ ಮಾರಕವಾಗಬಲ್ಲದು ಎಂಬ ಆತಂಕಗಳ ನಡುವೆಯೇ, ಅಂಥ ಕಳವಳ ಬೇಕಿಲ್ಲ. ಒಂದು ವೇಳೆ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡರೂ, ಅದರ ತೀವ್ರತೆ ಕಡಿಮೆ ಇರುತ್ತದೆ. ಜೊತೆಗೆ ಸೋಂಕಿನಿಂದಾಗಿ ಮಕ್ಕಳ ಸಾವಿನ ಪ್ರಮಾಣವೂ ತೀರಾ ಕಡಿಮೆ ಇರುತ್ತದೆ ಎಂದು ಬ್ರಿಟನ್‌ನಲ್ಲಿ ನಡೆಸಿದ ಸಂಶೋಧನಾ ವರದಿಯೊಂದು ಶುಭ ಸುದ್ದಿ ನೀಡಿದೆ.

ಲಂಡನ್‌, ಬ್ರಿಸ್ಟೋಲ್‌, ಯಾರ್ಕ್ ಮತ್ತು ಲಿವರ್‌ಪೂಲ್‌ ವಿಶ್ವವಿದ್ಯಾಲಯ ಸಂಶೋಧಕರು ಮಕ್ಕಳ ಮೇಲೆ ಕೊರೋನಾದ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ಈ ಅಧ್ಯಯನದ ಪ್ರಕಾರ, ಮಕ್ಕಳು ಹಾಗೂ ಹದಿಹರೆಯದವರಲ್ಲಿ ಕೊರೋನಾದಿಂದ ಗಂಭೀರ ಸ್ಥಿತಿ ತಲುಪುವಿಕೆ ಅಥವಾ ಸಾವು ಸಂಭವಿಸುವ ಪ್ರಮಾಣ ತೀರಾ ವಿರಳ.

ಕೇರಳ, ಮಹಾರಾಷ್ಟ್ರ ಮತ್ತೆ ಡೇಂಜರ್‌: ಕೇಂದ್ರ ಆತಂಕ!

ಆದರೆ, ಈಗಾಗಲೇ ಬೇರೆ ಬೇರೆ ಕಾಯಿಲೆಯಿಂದ ಬಳಲುತ್ತಿರುವವರು ಕೊರೋನಾ ಸೋಂಕಿತರಾದರೆ ಗಂಭೀರ ಸ್ಥಿತಿ ತಲುಪುವ ಅಥವಾ ಸಾವಿಗೀಡಾಗುವ ಸಾಧ್ಯತೆ ಇದೆ. ಜೊತೆಗೆ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ವೈರಸ್‌ ಮತ್ತು ಇತರೆ ಸಮಸ್ಯೆಗಳಿಗೆ ಬಹುಬೇಗ ತುತ್ತಾಗುವವರ ಮೇಲೂ ಕೊರೋನಾ ಇತರೆ ಮಕ್ಕಳಿಗಿಂತ ಹೆಚ್ಚಿನ ಅಪಾಯ ಉಂಟು ಮಾಡಬಲ್ಲದು ಎಂದು ಅಧ್ಯಯನ ವರದಿ ಹೇಳಿದೆ.

ಬ್ರಿಟನ್‌ನಲ್ಲಿ ಲಭ್ಯವಾದ ಅಂಕಿ ಅಂಶಗಳ ಪ್ರಕಾರ, 18 ವರ್ಷದ ಒಳಗಿನ ಕೊರೋನಾ ಸೋಂಕಿತರ ಪೈಕಿ 251 ಮಂದಿ ಮಾತ್ರ ಐಸಿಯುಗೆ ದಾಖಲಾಗಿದ್ದಾರೆ. ಸುಮಾರು 50,000 ಮಕ್ಕಳಲ್ಲಿ ಒಬ್ಬರಿಗೆ ಮಾತ್ರ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಬೇಕಾಗಿ ಬರಬಹುದು ಎಂದು ವರದಿ ತಿಳಿಸಿವೆ.

1,500 PSA ಆಮ್ಲಜನಕ ಸ್ಥಾವರ ಸ್ಥಾಪನೆ, ಸ್ವಯಂಚಾಲಿತ ತಂತ್ರಜ್ಞಾನದಿಂದ ಮೇಲ್ವಿಚಾರಣೆ!

ಕಾರಣ ಏನು?

ಇದೇ ವೇಳೆ ಯುನಿವರ್ಸಿಟಿ ಕಾಲೇಜ್‌ ಲಂಡನ್‌ನ ಪ್ರಾಧ್ಯಾಪಕ ಡಾ. ಜೋಸೆಫ್‌ ವಾರ್ಡ್‌ ಅವರ ಪ್ರಕಾರ, ಮಕ್ಕಳು ಮತ್ತು ವಯಸ್ಕರಲ್ಲಿ ಕೊರೋನಾ ಸೋಂಕು ಒಂದೇ ರೀತಿಯಲ್ಲಿ ವರ್ತಿಸುತ್ತದೆ. ಆದರೆ, ಪೂರ್ವ ಆರೋಗ್ಯ ಸಮಸ್ಯೆಯಿಂದ ಬಳಲುವ ಮಕ್ಕಳ ಪ್ರಮಾಣ ತೀರಾ ಕಡಿಮೆ. ಆದರೆ, ವಯಸ್ಕರಲ್ಲಿ ಸಕ್ಕರೆ ಕಾಯಿಲೆ, ಅಸ್ತಮಾ, ಹೃದಯ ಸಂಬಂಧಿ ಕಾಯಲೆಯ ಯಂತಹ ಹಲವು ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಿರುತ್ತದೆ. ಹೀಗಾಗಿ ಅವರಲ್ಲಿ ಅಪಾಯದ ಪ್ರಮಾಣವೂ ಹೆಚ್ಚು ಎಂದು ಹೇಳಿದ್ದಾರೆ.

Follow Us:
Download App:
  • android
  • ios