Asianet Suvarna News

ಕೇರಳ, ಮಹಾರಾಷ್ಟ್ರ ಮತ್ತೆ ಡೇಂಜರ್‌: ಕೇಂದ್ರ ಆತಂಕ!

* ದೇಶದಲ್ಲಿ ಕೊರೋನಾ: 2 ರಾಜ್ಯದ್ದೇ ಅರ್ಧ ಪಾಲು

* ಕೇರಳ, ಮಹಾರಾಷ್ಟ್ರ ಮತ್ತೆ ಡೇಂಜರ್‌: ಕೇಂದ್ರ ಆತಂಕ

* ವಾರದ ಸರಾಸರಿ: ಕೇರಳ 32%, ಮಹಾರಾಷ್ಟ್ರ 21%

Over 50 Pc of India total Covid 19 cases from Maharashtra Kerala Govt pod
Author
Bangalore, First Published Jul 10, 2021, 7:57 AM IST
  • Facebook
  • Twitter
  • Whatsapp

ನವದೆಹಲಿ(ಜು.10): ದೇಶದಲ್ಲಿ ಮೊದಲ ಕೊರೋನಾ ಕೇಸು ಪತ್ತೆಯಾದ ಕೇರಳ ಮತ್ತು ಒಟ್ಟಾರೆ ಅತಿ ಹೆಚ್ಚು ಕೇಸು ಪತ್ತೆಯಾದ ಮಹಾರಾಷ್ಟ್ರದಲ್ಲಿ ಮತ್ತೆ ಪ್ರಕರಣ ಏರುಗತಿಯಲ್ಲಿರುವುದು ಕಳವಳಕಾರಿ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲದೆ ಕಳೆದ ವಾರ ದೇಶದಲ್ಲಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಕೇವಲ ಈ ಎರಡು ರಾಜ್ಯಗಳ ಪಾಲೇ ಶೇ.53ರಷ್ಟಿತ್ತು ಎಂದು ಆತಂಕ ವ್ಯಕ್ತಪಡಿಸಿದೆ.

ಈ ಕುರಿತು ಶುಕ್ರವಾರ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್‌ವಾಲ್‌ ‘ಕಳೆದ ವಾರ ದೇಶದಲ್ಲಿ ದಾಖಲಾದ ಒಟ್ಟು ಕೇಸಿನಲ್ಲಿ ಕೇರಳದ ಪಾಲು ಶೇ.32ರಷ್ಟುಮತ್ತು ಮಹಾರಾಷ್ಟ್ರದ ಪಾಲು ಶೇ.21ರಷ್ಟಿತ್ತು. ಅಂದರೆ ಶೇ.53ರಷ್ಟುಪಾಲು ಈ ಎರಡೇ ರಾಜ್ಯಗಳದ್ದಾಗಿತ್ತು. ಇದು ಕಳವಳಕಾರಿ ವಿಷಯ. ಈ ಹಿನ್ನೆಲೆಯಲ್ಲಿ ನಿರ್ಬಂಧ ಕ್ರಮಗಳ ಮೂಲಕ ಸೋಂಕು ಪ್ರಸರಣ ತಡೆಯಲು ನಾವು ರಾಜ್ಯಗಳ ಜೊತೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ಕಪ್ಪ ರೂಪಾಂತರಿ ಕೊರೋನಾ ಪತ್ತೆ..! ವೇಗವಾಗಿ ಹರಡೋದೆ ಇದರ ವಿಶೇಷತೆ

ಇದೇ ವೇಳೆ ದೇಶದ ಶೇ.80ರಷ್ಟುಪ್ರಕರಣಗಳು ಕರ್ನಾಟಕ ಸೇರಿದಂತೆ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ 90 ಜಿಲ್ಲೆಗಳಿಂದಲೇ ವರದಿಯಾಗುತ್ತಿದೆ. ಅಲ್ಲದೆ 17 ರಾಜ್ಯಗಳ 66 ಜಿಲ್ಲೆಗಳಲ್ಲಿ ಈಗಲೂ ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿದೆ. ರಷ್ಯಾ, ಬ್ರಿಟನ್‌, ದಕ್ಷಿಣ ಕೊರಿಯಾ, ಬಾಂಗ್ಲಾದೇಶ, ಇಂಡೋನೇಷ್ಯಾ ಸೇರಿದಂತೆ ಕೆಲ ದೇಶಗಳಲ್ಲಿ ಇತ್ತೀಚೆಗೆ ಜನರು ಕೋವಿಡ್‌ ಮಾರ್ಗಸೂಚಿ ಗಾಳಿಗೆ ತೂರಿದ ಕಾರಣ, ಅಲ್ಲಿ ಮತ್ತೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಇದು ಸೋಂಕು ನಿಯಂತ್ರಣಕ್ಕೆ ದೇಶದಲ್ಲೂ ನಿರ್ದಿಷ್ಟಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ಹೇಳಿದೆ ಎಂದು ಅಗರ್‌ವಾಲ್‌ ತಿಳಿಸಿದ್ದಾರೆ.

ಕೇಸು, ಸಾವು ಹೆಚ್ಚಳ:

ಕೇರಳದಲ್ಲಿ ಶುಕ್ರವಾರ 13,563 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಅಲ್ಲದೆ 130 ಮಂದಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 30.39 ಲಕ್ಷ ಮೀರಿದ್ದು, ಸಾವಿನ ಸಂಖ್ಯೆ 14,380ಕ್ಕೆ ಜಿಗಿದಿದೆ. ಇನ್ನು ಮಹಾರಾಷ್ಟ್ರದಲ್ಲಿ ಶುಕ್ರವಾರ 8992 ಕೇಸು ದಾಖಲಾಗಿದ್ದರೆ, 738 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇದುವರೆಗೆ 61 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 125034 ಜನರು ಸಾವನ್ನಪ್ಪಿದ್ದಾರೆ.

ಕೇರಳದಲ್ಲಿ ಸೋಂಕು ಹೆಚ್ಚಳ: 3ನೇ ಅಲೆ ಸುಳಿವು?

* 43393 ಕೇಸ್‌: ದೇಶದಲ್ಲಿ ನಿನ್ನೆ ದೃಢಪಟ್ಟಪ್ರಕರಣ

* 13563 ಕೇಸ್‌: ಕೇರಳದಲ್ಲಿ ಒಂದು ವಾರದ ಸರಾಸರಿ

* 8992 ಕೇಸ್‌: ಮಹಾರಾಷ್ಟ್ರದಲ್ಲಿ ವಾರದ ಸರಾಸರಿ

* 66 ಜಿಲ್ಲೆ: 17 ರಾಜ್ಯಗಳ 66 ಜಿಲ್ಲೆಗಳಲ್ಲಿ ಈಗಲೂ ಶೇ.10ಕ್ಕಿಂತ ಹೆಚ್ಚಿನ ಪಾಸಿಟಿವಿಟಿ

* ಶೇ.80 ಕೇಸು: ಒಟ್ಟು ಕೇಸಿನಲ್ಲಿ ಶೇ.80ರಷ್ಟುಪಾಲು 15 ರಾಜ್ಯಗಳ 90 ಜಿಲ್ಲೆಗಳದ್ದು

Follow Us:
Download App:
  • android
  • ios