Asianet Suvarna News Asianet Suvarna News

ಒಂಟಿ ಮಹಿಳೆ ಮನೆಗೆ ನುಗ್ಗಿದ ಕಳ್ಳ ಪಾತ್ರೆ, ಬಟ್ಟೆ ತೊಳೆದು ಅಡುಗೆ ಮಾಡಿಟ್ಟು ಪತ್ರ ಬರೆದಿಟ್ಟು ಹೋದ!

ಕಳ್ಳನೊಬ್ಬ ಮನೆಗೆ ನುಗ್ಗಿ ಕಳ್ಳತನ ಮಾಡುವ ಬದಲು ಮನೆ ಕೆಲಸ ಮಾಡಿ, ಊಟ ತಯಾರಿಸಿ ಪತ್ರ ಬರೆದಿಟ್ಟು ಹೋಗಿರುವ ವಿಚಿತ್ರ ಘಟನೆ ನಡೆದಿದೆ.

Thief enter woman home cook food and wash cloths mrq
Author
First Published Oct 7, 2024, 12:29 PM IST | Last Updated Oct 7, 2024, 12:29 PM IST

ಲಂಡನ್: ಮನೆಗಳ್ಳತನದ ಬಗ್ಗೆ ಪ್ರತಿನಿತ್ಯ ಹಲವಾರು ದೂರುಗಳು ದಾಖಲಾಗುತ್ತಿರುತ್ತವೆ. ಒಮ್ಮೆ ಕಳ್ಳರು ಮನೆಗೆ ನುಗ್ಗಿದ್ರೆ ಚಿನ್ನಾಭರಣ ಸೇರಿದಂತೆ ಕೈಗೆ ಸಿಗೋ ಬೆಲೆಬಾಳುವ ವಸ್ತುಗಳನ್ನು ಸಹ ಹೊತ್ತಯ್ಯುತ್ತಾರೆ. ಬ್ರಿಟನ್‌ ಕಳ್ಳನೊಬ್ಬ ಒಂಟಿ ಮಹಿಳೆಗೆ ನುಗಿದ್ದಾನೆ. ಮನೆಯೊಳಗೆ ಬಂದ ನಂತರ ಪಾತ್ರೆ ಮತ್ತು ಬಟ್ಟೆಯನ್ನು ತೊಳೆದಿದ್ದಾನೆ. ನಂತರ ಮನೆಯಲ್ಲಿನ ಎಲ್ಲಾ ಕೆಲಸಗಳನ್ನು ಮಾಡಿ, ಪತ್ರವೊಂದನ್ನು ಬರೆದಿಟ್ಟು ಹೋಗಿದ್ದಾನೆ. ಚಿಂತೆ ಮಾಡಬೇಡಿ, ಖುಷಿಯಾಗಿ ಹೊಟ್ಟೆ ತುಂಬಾ ಊಟ ಮಾಡಿ ಆರಾಮಾಗಿರಿ ಎಂದ ಪತ್ರದಲ್ಲಿ ಬರೆಯಲಾಗಿತ್ತು. 

ಬಿಬಿಸಿ ವರದಿ ಪ್ರಕಾರ, ಕಾರ್ಡಿಫ್ ನ್ಯಾಯಾಲಯ ಕಳ್ಳನಿಗೆ 22 ತಿಂಗಳ ಜೈಲು ಶಿಕ್ಷೆ ನೀಡಿ ಆದೇಶಿಸಿದೆ. 36 ವರ್ಷದ ಕಳ್ಳ ಡೇಮಿಯನ್ ವೊಜನಿಲೊವಿಚ್ ಜುಲೈ 16ರಂದು ಮಾನ್ಮೌತ್ಶೈರ್ ನಗರದಲ್ಲಿ ವಿಚಿತ್ರವಾಗಿ ಕಳ್ಳತನ ಮಾಡಿದ್ದನು. ಇದಿರಂದ ಮನೆಯಲ್ಲಿರಲು ಮಹಿಳೆ ಹೆದರಿಕೊಂಡಿದ್ದರು. ಮಹಿಳೆ ಹೇಳಿಕೆ ಪ್ರಕಾರ, ಕಳ್ಳತನ ನಡೆದ ಎರಡು ವಾರದ ಬಳಿಕ ಕಳ್ಳನನ್ನ ಹಿಡಿಯಲಾಯ್ತು. ಕಳ್ಳ ಸಿಗೋವರೆಗೂ ನನ್ನಲ್ಲಿ ಒಂದು ರೀತಿಯ ವಿಚಿತ್ರ ಭಯ ಉಟಾಗಿತ್ತು. ಈ ರೀತಿಯ ಅನುಭವ ಇದೇ ಮೊದಲ ಬಾರಿ ಆಗಿತ್ತು ಎಂದು ಹೇಳಿದ್ದಾರೆ. 

ಈ ಕಳ್ಳ ನನಗೆ ಗೊತ್ತಿರುವನೇ? ಕಳ್ಳತನಕ್ಕೆ ಬಂದವನು ಮನೆಗೆಲಸಗಳನ್ನು ಮಾಡಿದ್ದೇಕೆ? ಆತ ನನ್ನನ್ನು ಹಿಂಬಾಲಿಸುತ್ತಿದ್ದಾನೆಯೇ? ನಾನು ಮನೆಯಲ್ಲಿ ಒಂಟಿಯಾಗಿರೋದು ಆತನಿಗೆ ಗೊತ್ತಾಗಿದೆಯಾ? ಮತ್ತೆ ಮನೆಗೆ ಬರುತ್ತಾನಾ ಎಂಬ ಪ್ರಶ್ನೆಗಳು ನನ್ನನ್ನು ಸುತ್ತುವರಿದಿದ್ದವು. ಮನೆಯಲ್ಲಿ ಒಂಟಿಯಾಗಿರಲು ಸಾಕಷ್ಟು ಭಯವಾಗಿತ್ತು. ನನ್ನನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದರೆ ಹೇಗೆ ಎಂಬ ಭಯ ಪ್ರತಿ ಕ್ಷಣವೂ ನನ್ನನ್ನು ಕಾಡಿತ್ತು ಎಂದು ಮಹಿಳೆ ಹೇಳಿದ್ದಾರೆ.

ಶೇಕಡಾ 80ರಷ್ಟು ಪುರುಷರು ಸೆಕ್ಸ್‌ಗಾಗಿ ರೆಡ್‌ಲೈಟ್ ಏರಿಯಾಗೆ ಬರಲ್ಲ; ಕತ್ತಲೆ ಹಿಂದಿನ ರಹಸ್ಯ ಬಿಚ್ಚಿಟ್ಟ ಮಹಿಳೆ

ಮಹಿಳೆ ಇಲ್ಲದ ವೇಳೆ ಮನೆಯೊಳಗೆ ಬಂದ ಕಳ್ಳ ಡೇಮಿಯನ್ ವೊಜನಿಲೊವಿಚ್, ಮನೆಗೆಲಸ ಮಾಡಿದ್ದಾನೆ. ಬಂದಿದ್ದ ಆರ್ಡರ್ ತೆಗೆದುಕೊಂಡು ಅನ್‌ಬಾಕ್ಸ್ ಮಾಡಿ ಶೂಗಳನ್ನು ಅವುಗಳ ಸ್ಥಾನದಲ್ಲಿರಿಸಿ, ಪ್ಯಾಕಿಂಗ್ ಕವರ್ ಡಸ್ಟ್‌ಬಿನ್‌ಗೆ ಹಾಕಿದ್ದಾನೆ. ಅಡುಗೆಮನೆಯಲ್ಲಿದ್ದ ಎಲ್ಲಾ ಪಾತ್ರೆಗಳನ್ನು ತೊಳೆದು ಕ್ರಮಬದ್ಧವಾಗಿ ಜೋಡಿಸಿದ್ದಾನೆ. ನಂತರ ಕೊಳೆಯಾಗಿದ್ದ ಬಟ್ಟೆಗಳನ್ನು ತೊಳೆದಿದ್ದಾನೆ. ಶಾಪಿಂಗ್‌ ಬ್ಯಾಗ್‌ನಲ್ಲಿದ್ದ ಎಲ್ಲಾ ಆಹಾರ ಸಾಮಾಗ್ರಿಗಳನ್ನು ಫ್ರಿಡ್ಜ್‌ನಲ್ಲಿ ಸರಿಯಾಗಿರಿಸಿದ್ದಾನೆ. ನಂತರ ಪಕ್ಷಿಗಳಿಗೆ ಕಾಳುಗಳನ್ನು ಹಾಕಿ, ಮನೆಯಲ್ಲಿದ್ದ ಪ್ಲಾಂಟ್‌ ಕುಂಡದಲ್ಲಿನ ಮಣ್ಣು ಸಡಿಲಗೊಳಿಸಿ ನೀರು ಹಾಕಿ ಪೋಷಿಸಿದ್ದಾನೆ. ಕೊನೆಗೆ ಮನೆಯ ನೆಲವನ್ನು ಸ್ವಚ್ಛವಾಗಿ ತೊಳೆದಿದ್ದಾನೆ. 

ಮನೆಯಿಂದ ಹೊರಡುವ ಮುನ್ನ ಅಡುಗೆ ತಯಾರಿಸಿದ್ದಾನೆ. ಮಹಿಳೆ ಮನೆಗೆ ಬಂದಾಗ ಡೈನಿಂಗ್ ಟೇಬಲ್ ಮೇಲೆ ಆಹಾರದ ಗ್ಲಾಸ್‌ನಲ್ಲಿ ರೆಡ್ ವೈನ್ ಹಾಕಿ, ಪಕ್ಕದಲ್ಲಿಯೇ ಬಾಟೆಲ್ ಇರಿಸಲಾಗಿತ್ತು. ಲಿವಿಂಗ್ ರೂಮ್‌ ಮೇಜಿನ ಮೇಲೆ ಸಿಹಿ ತಿಂಡಿಯನ್ನು ಇರಿಸಲಾಗಿತ್ತು. ಇದೆಲ್ಲವನ್ನು ಕಂಡು ಮಹಿಳೆ ಶಾಕ್ ಆಗಿದ್ದಾರೆ. ಪಕ್ಕದ್ಮನೆಯವರು ಯಾರೋ ಬಟ್ಟೆ ತೊಳೆಯುತ್ತಿರೋದು ತಮ್ಮ ಗಮನಕ್ಕೆ ಬಂದಿರೋದರ ಬಗ್ಗೆ ಮಹಿಳೆಗೆ ತಿಳಿಸಿದ್ದಾರೆ. ಕಳ್ಳ ಬರೆದಿಟ್ಟ ಚೀಟಿ ನೋಡಿದ ಮಹಿಳೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಘಟನೆ ನಡೆದ ಬಳಿಕ ಕಳ್ಳನನ್ನು ಬಂಧಿಸಲಾಗಿದೆ. ಆದ್ರೆ ಯಾಕೆ ಹೀಗೆಲ್ಲಾ ಮಾಡಿದ ಎಂಬುದರ ಬಗ್ಗೆ ತಿಳಿದು ಬಂದಿಲ್ಲ.

ಸಾಲದ ಸುಳಿಗೆ ಸಿಲುಕಿ 1.5 ಲಕ್ಷ ಸರ್ಕಾರಿ ಹುದ್ದೆಗಳನ್ನೇ ಕಡಿತಗೊಳಿಸಿದ ಪಾಕಿಸ್ತಾನ

Latest Videos
Follow Us:
Download App:
  • android
  • ios