ಶೇಕಡಾ 80ರಷ್ಟು ಪುರುಷರು ಸೆಕ್ಸ್‌ಗಾಗಿ ರೆಡ್‌ಲೈಟ್ ಏರಿಯಾಗೆ ಬರಲ್ಲ; ಕತ್ತಲೆ ಹಿಂದಿನ ರಹಸ್ಯ ಬಿಚ್ಚಿಟ್ಟ ಮಹಿಳೆ

ಲೈಂಗಿಕ ಕಾರ್ಯಕರ್ತೆ ಮಿಕಿ ಡೇನಿಯಲ್, ತಮ್ಮ ಬಳಿ ಬರುವ ಪುರುಷರ ವರ್ತನೆ ಹೇಗಿರುತ್ತೆ? ನಮ್ಮ ಜೊತೆ ಹೇಗೆಲ್ಲಾ ನಡೆದುಕೊಳ್ಳುತ್ತಾರೆ ಎಂಬುದರ ಕುರಿತು ಮಾತನಾಡಿದ್ದಾರೆ. ಮಿಕಿ ಡೇನಿಯಲ್ ಗಂಟೆಗೆ 73 ಸಾವಿರ  ರೂಪಾಯಿ ಚಾರ್ಜ್ ಮಾಡುತ್ತಾರೆ.

Australia Micki Daniels reveals 80  percent  men come to red light area for not sex mrq

ಮೆಲ್ಬೋರ್ನ್: ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಯುವತಿಯ ಸಂದರ್ಶನದ ವಿಡಿಯೋ ಕ್ಲಿಪ್ ವ್ಯಾಪಕವಾಗಿ ವೈರಲ್ ಆಗ್ತಿದೆ. ಈ ವಿಡಿಯೋ ಕ್ಲಿಪ್‌ನಲ್ಲಿ ಕಾಣುವ ಯುವತಿಯ ಹೆಸರು ಮಿಕಿ ಡೇನಿಯಲ್, ವಯಸ್ಸು 29. ಅಸ್ಟ್ರೇಲಿಯಾದ ಬ್ರಿಸ್ಬೇನ್ ಮೂಲದ ಮಿಕಿ ಡೇನಿಯಲ್ ರೆಡ್‌ಲೈಟ್ ಏರಿಯಾದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮಿಕಿ ಡೇನಿಯಲ್ ತನ್ನ ಬಳಿಯಲ್ಲಿ ಬರುವ ಪುರುಷರ ಜೊತೆ ಲೈಂಗಿಕ ಸಂಪರ್ಕ ಹೊಂದುವುದೇ ಕೆಲಸ. ಗ್ರಾಹಕರ ದೈಹಿಕ ಸಂಬಂಧದ ಇಚ್ಛೆಗಳನ್ನು ಪೂರ್ಣಗೊಳಿಸುವ ಮಿಕಿ ಡೇನಿಯಲ್ ಕೆಲಸವಾಗಿದೆ. ತನ್ನ ಈ ಕೆಲಸಕ್ಕಾಗಿ ಮಿಕಿ ಡೇನಿಯಲ್ ಗಂಟೆಗೆ 1,300 ಡಾಲರ್ (ಅಂದಾಜು 73,000 ರೂಪಾಯಿ) ಚಾರ್ಜ್ ಮಾಡುವ ಮೂಲಕ ದುಬಾರಿ ಬೆಲೆಯ ವರ್ಕರ್ ಅಂತ ಅನ್ನಿಸಿಕೊಂಡಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಮಿಕಿ ಡೇನಿಯಲ್ ತಮ್ಮ ಬಳಿ ಬರುವ ಗ್ರಾಹಕರ ವರ್ತನೆ ಹೇಗಿರುತ್ತೆ ಸೇರಿದಂತೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. 

ಸಂದರ್ಶನದಲ್ಲಿ ಮಾತನಾಡಿರುವ ಮಿಕಿ ಡೇನಿಯಲ್, ಇಂದು ಶೇ.80ರಷ್ಟು ಪುರುಷರ ಜೊತೆ ದೈಹಿಕ ಸಂಪರ್ಕ ಬೆಳೆಸಲ್ಲ. ಕಾರಣ ಪುರುಷರು ಸಹ ಶಾರೀರಿಕ ಸಂಬಂಧ ಬೆಳೆಸಲು ಬಯಸುವದಿಲ್ಲ. ಇಂದು ಪುರುಷರ ಮನಸ್ಥಿತಿ ಬದಲಾಗಿದೆ ಅನ್ನೋದು ನನ್ನ ವೃತ್ತಿ ಜೀವನದ ಅನುಭವ ಎಂದು ಹೇಳುತ್ತಾರೆ. ಕೇವಲ ನಮ್ಮ ಜೊತೆಯಲ್ಲಿ ಸಮಯ ಕಳೆಯಲು ಬರುತ್ತಾರೆ. ತಮ್ಮ ಮನಸ್ಸಿನಲ್ಲಿರುವ ಮಾತುಗಳನ್ನು ನಮ್ಮೊಂದಿಗೆ ಶೇರ್ ಮಾಡಿಕೊಳ್ಳುತ್ತಾರೆ. ತಮ್ಮ ಜೊತೆ ನಡೆದ ಘಟನೆಗಳು, ದುಃಖ ಮತ್ತು ಯಾರ ಜೊತೆಯಲ್ಲಿಯೂ ಹಂಚಿಕೊಳ್ಳದ ವಿಷಯಗಳ ಕುರಿತು ಮಾತನಾಡುತ್ತಾರೆ. ತುಂಬಾ ಸಮಯದವರೆಗೆ ಮಾತನಾಡಿ ನಗುತ್ತಲೇ ಹೊರಡುತ್ತಾರೆ.

ಮದುವೆಯಾದ್ರೂ ಪರವಾಗಿಲ್ಲ, ಮುದುಕನಾದ್ರೂ ಓಕೆ : ಬಾಯ್‌ಫ್ರೆಂಡ್ ಹುಡುಕಾಟದಲ್ಲಿ ಮಾದಕ ಚೆಲುವೆ!

ನನ್ನ ಈ ಮಾತುಗಳನ್ನು ಹಲವರು ಸುಳ್ಳು ಎಂದು ಹೇಳಬಹುದು. ಆದ್ರೆ ಇದು ಸತ್ಯ. ಲೈಂಗಿಕ ಸಂಪರ್ಕಕ್ಕಾಗಿಯೇ ಬರೋ ಪುರುಷರ ಸಂಖ್ಯೆ ಇಳಿಮುಖವಾಗಿದೆ. ಪುರುಷರು ಸಹ ಭಾವನಾತ್ಮಕವಾಗಿ ಕುಸಿದಾಗ ಅದೆಲ್ಲವನ್ನು ಹೇಳಲು ಅವರಿಗೆ ಸಂಗಾತಿಯ ಅವಶ್ಯಕತೆ ಇರುತ್ತದೆ. ತುಂಬಾ ಗ್ರಾಹಕರು ಬುಕ್ ಮಾಡುವಾಗಲೇ ನಮಗೆ ಸೆಕ್ಸ್ ಬೇಕಿಲ್ಲ   ಅಂತಾನೇ ಹೇಳಿಕೊಂಡಿರುತ್ತಾರೆ. ಮುಕ್ತವಾಗಿ ಮಾತಾನಾಡಲು ಗಂಟೆಗೆ ಸಾವಿರಾರು ಡಾಲರ್ ನೀಡುತ್ತಾರೆ. ತಮ್ಮ ಬಳಿ ಬರುವ ಪುರುಷರ ಅರ್ಧಕ್ಕಿಂತ ಹೆಚ್ಚಿನು ಜನರು ವಿವಾಹಿತರು ಮತ್ತು ಸಂಗಾತಿಯನ್ನು ಹೊಂದಿರುತ್ತಾರೆ. ಪಾರ್ಟನರ್ ಜೊತೆ ಲೈಂಗಿಕ ಸುಖ ಸಿಕ್ಕರೂ, ಅವರಲ್ಲಿ ಒಂಟಿತನ ಕಾಣಿಸಿಕೊಳ್ಳುತ್ತದೆ. ಹಾಗಾಗಿಯೇ ದುಃಖವನ್ನು ಹಂಚಿಕೊಳ್ಳಲು ನಮ್ಮ ಬಳಿ ಬರುತ್ತಾರೆ ಎಂದು ಮಿಕಿ ಡೇನಿಯಲ್ ಹೇಳುತ್ತಾರೆ.

ಪುರುಷರು ತಾನು ಭಾವನಾತ್ಮಕ ಜೀವಿ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಸಮಾಜದಲ್ಲಿ ತಾನು ಸ್ಟ್ರಾಂಗ್ ಎಂಬುದನ್ನು ಬಿಂಬಿಸಲು ಪ್ರಯತ್ನಿಸುತ್ತಿರುತ್ತಾರೆ. ಅತ್ಯಂತ ತೀವ್ರವಾಗಿ ಕುಸಿದಾಗ ನಮ್ಮ ಬಳಿ ಬರುತ್ತಾರೆ. ಈ ಕಾರಣಗಳಿಂದ ರೆಡ್‌ ಲೈಟ್ ಏರಿಯಾದ ಟ್ರೆಂಡ್ ಬದಲಾಗಿದೆ ಅಂತ ಹೇಳಬಹುದು. ಕೆಲ ಗ್ರಾಹಕರ ಕಥೆಗಳು ನಮ್ಮ ಜೀವನದ ಮೇಲೆಯೂ ಅಗಾಧ ಪರಿಣಾಮ ಬೀರುತ್ತದೆ ಅಂತಾನೂ ಮಿಕಿ ಡೇನಿಯಲ್ ಹೇಳಿದ್ದಾರೆ. ಮಿಕಿ ಡೇನಿಯಲ್ ಸಂದರ್ಶನದ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ವಯಸ್ಸಿನ ಪ್ರಕಾರ ತಿಂಗಳಿಗೆ ಎಷ್ಟು ಬಾರಿ ಲೈಂಗಿಕ ಸಂಪರ್ಕ ಹೊಂದಬೇಕು? ಸಮೀಕ್ಷೆಯಲ್ಲಿ ಶಾಕಿಂಗ್ ಮಾಹಿತಿ

Latest Videos
Follow Us:
Download App:
  • android
  • ios