ಕೋವಿಡ್ ವಿರುದ್ದದ ಹೋರಾಟದಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿರುವ, ವಿಶ್ವದ ಅತೀ ದೊಡ್ಡ ಲಸಿಕೆ ಉತ್ಪಾದನಾ ಕೇಂದ್ರ ಪುಣೆಯ ಸೀರಂ ಸಂಸ್ಥೆ| ಸೀರಂ ಸಂಸ್ಥೆಯ ಸಿಇಒ ಅದರ್ ಪೂನಾವಾಲ (39) ಮತ್ತು ಇತರೆ 6 ಜನರನ್ನು ಸಿಂಗಾಪುರದ ‘ದಿ ಸ್ಟೆ್ರೖಟ್ ಟೈಮ್ಸ್’ ಪತ್ರಿಕೆ ‘ವರ್ಷದ ಏಷ್ಯಾ ವ್ಯಕ್ತಿಗಳು’ ಎಂದು ಗೌರವಿಸಿದೆ
ಸಿಂಗಾಪುರ(ಡಿ.06): ಕೋವಿಡ್ ವಿರುದ್ದದ ಹೋರಾಟದಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿರುವ, ವಿಶ್ವದ ಅತೀ ದೊಡ್ಡ ಲಸಿಕೆ ಉತ್ಪಾದನಾ ಕೇಂದ್ರ ಪುಣೆಯ ಸೀರಂ ಸಂಸ್ಥೆಯ ಸಿಇಒ ಅದರ್ ಪೂನಾವಾಲ (39) ಮತ್ತು ಇತರೆ 6 ಜನರನ್ನು ಸಿಂಗಾಪುರದ ‘ದಿ ಸ್ಟೆ್ರೖಟ್ ಟೈಮ್ಸ್’ ಪತ್ರಿಕೆ ‘ವರ್ಷದ ಏಷ್ಯಾ ವ್ಯಕ್ತಿಗಳು’ ಎಂದು ಗೌರವಿಸಿದೆ.
ಇವರನ್ನು ‘ದಿ ವೈರಸ್ ಬಸ್ಟರ್ಸ್’ (ವೈರಸ್ ವಿನಾಶಕರು) ಎಂದು ಬಣ್ಣಿಸಿರುವ ಪತ್ರಿಕೆ, ಕೋವಿಡ್ ವಿರುದ್ಧದ ಹೋರಾಟಲ್ಲಿ ತಮ್ಮನ್ನು ಸಮರ್ಪಿಸಿದ ಪರಿಯನ್ನು ಕೊಂಡಾಂಡಿದೆ.
'ಗಂಭೀರ ಸ್ವರೂಪದ ಅಲರ್ಜಿ ಇರುವವರು ಫೈಝರ್‌ನಿಂದ ದೂರವಿರಿ!'
ಸದ್ಯ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಬ್ರಿಟೀಷ್ -ಸ್ವೀಡಿಶ್ ಔಷಧಿ ಕಂಪನಿ ಆಸ್ಟ್ರಜೆನೆಕಾ ಜತೆ ಒಪ್ಪಂದ ಮಾಡಿಕೊಂಡು ಸಿರಂ ಸಂಸ್ಥೆ ‘ಕೊವಿಶೀಲ್ಡ್’ ಲಸಿಕೆಯನ್ನು ಉತ್ಪಾದಿಸುತ್ತಿದೆ.
ಲಸಿಕೆ ಸುರಕ್ಷೆ ಖಚಿತ ಆಗುವವರೆಗೂ ಜನ ಬಳಕೆಗಿಲ್ಲ: ಸೀರಂ
ಕೊರೋನಾ ನಿಗ್ರಹಕ್ಕೆ ಆಕ್ಸ್‌ಫರ್ಡ್ ವಿವಿ ಮತ್ತು ಅಸ್ಟ್ರಾಜೆನಿಕಾ ಸಿದ್ಧಪಡಿಸಿರುವ ‘ಕೋವಿಶೀಲ್ಡ್’ ಲಸಿಕೆಯು ಸಂಪೂರ್ಣ ಸುರಕ್ಷಿತವಾಗಿದ್ದು, ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ಭಾರತದಲ್ಲಿ ಈ ಲಸಿಕೆಯನ್ನು ಉತ್ಪಾದಿಸುತ್ತಿರುವ ಪುಣೆಯ ಸೀರಂ ಸಂಸ್ಥೆ ಪ್ರತಿಪಾದಿಸಿದೆ.
ಸೀರಂ, ಭಾರತ್ ಬಯೋಟೆಕ್‌ನಿಂದ ಮತ್ತಷ್ಟು ಮಾಹಿತಿ ಕೋರಿದ ಕೇಂದ್ರ!
ಇತ್ತೀಚೆಗಷ್ಟೇ ಈ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದರಿಂದ ತಾನು ನರ ಮತ್ತು ಮಾನಸಿಕ ರೋಗಕ್ಕೆ ತುತ್ತಾಗಿದ್ದು, ತನಗೆ 5 ಕೋಟಿ ರು. ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಚೆನ್ನೈ ಮೂಲದ ವ್ಯಕ್ತಿಯೋರ್ವ ಇತರರ ಜೊತೆಗೂಡಿ ದಾವೆ ಹೂಡಿದ್ದ. ಇದರ ಬೆನ್ನಲ್ಲೇ, ಈ ಸಂಬಂಧ ಮಂಗಳವಾರ ಸ್ಪಷ್ಟನೆ ರೂಪದ ಹೇಳಿಕೆ ಬಿಡುಗಡೆ ಮಾಡಿರುವ ಸೀರಂ, ಲಸಿಕೆಯು ಸುರಕ್ಷಿತ ಎಂದು ಸಾಬೀತಾಗುವವರೆಗೂ ಸಮೂಹ ಬಳಕೆಗೆ ಇದನ್ನು ಬಿಡುಗಡೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
