Asianet Suvarna News Asianet Suvarna News

ಕೊರೋನಾ ಪ್ರಭಾವ ಕೆಲವರ ಮೇಲೆ ಏಕೆ ಕಡಿಮೆ? ಕಾರಣ ಪತ್ತೆ

ವೈರಸ್‌ ತಗಲಿದರೆ ಕೆಲವರಲ್ಲಿ ಅದರ ಲಕ್ಷಣಗಳು ಜೋರಾಗಿ ಗೋಚರಿಸುತ್ತವೆ| ಕೊರೋನಾ ಪ್ರಭಾವ ಕೆಲವರ ಮೇಲೆ ಏಕೆ ಕಡಿಮೆ? ಕಾರಣ ಪತ್ತೆ

The Reason Why Covid Symptoms are not found in Some People Found
Author
Bangalore, First Published Aug 6, 2020, 12:58 PM IST

‌ ಏಂಜಲೀಸ್‌(ಆ.06): ಕೊರೋನಾ ವೈರಸ್‌ ತಗಲಿದರೆ ಕೆಲವರಲ್ಲಿ ಅದರ ಲಕ್ಷಣಗಳು ಜೋರಾಗಿ ಗೋಚರಿಸುತ್ತವೆ, ಇನ್ನು ಕೆಲವರಲ್ಲಿ ಕಡಿಮೆ ಲಕ್ಷಣಗಳು ಗೋಚರಿಸುತ್ತವೆ. ಇದು ಏಕೆ ಎಂಬುದಕ್ಕೆ ಅಮೆರಿಕದ ವಿಜ್ಞಾನಿಗಳು ಕಾರಣ ಪತ್ತೆಹಚ್ಚಿದ್ದಾರೆ.

ದೇಹದ ರೋಗನಿರೋಧ ವ್ಯವಸ್ಥೆಯಲ್ಲಿರುವ ‘ಟಿ’ ಕೋಶಗಳು ಸಾಮಾನ್ಯ ನೆಗಡಿ ಉಂಟಾಗುವುದನ್ನು ಮೊದಲೇ ಗುರುತಿಸಿ ಅವುಗಳ ವಿರುದ್ಧ ಹೋರಾಡುವ ರೀತಿಯಲ್ಲಿ ಕೆಲವರಲ್ಲಿ ಕೊರೋನಾ ವಿರುದ್ಧವೂ ಹೋರಾಡುವುದೇ ಇದಕ್ಕೆ ಕಾರಣವಾಗಿರಬಹುದು ಎಂದು ಈ ಕುರಿತು ಸಂಶೋಧನೆ ನಡೆಸಿದ ಲಾ ಜೊಲ್ಲಾ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ಹೇಳಿದ್ದಾರೆ. ಆದರೆ, ಟಿ ಸೆಲ್‌ಗಳು ಇದ್ದರೆ ಅವು ಕೊರೋನಾ ಚಿಕಿತ್ಸೆಯ ಮೇಲೆ ಏನಾದರೂ ಪರಿಣಾಮ ಉಂಟುಮಾಡುತ್ತವೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ತಿಳಿದುಬಂದಿಲ್ಲ.

ದೇಹದಲ್ಲಿ ಟಿ ಸೆಲ್‌ಗಳು ಕ್ರಿಯಾಶೀಲವಾಗಿದ್ದರೆ ಅಂತಹವರ ಮೇಲೆ ಕೊರೋನಾದ ಪ್ರಭಾವ ಕಡಿಮೆಯಾಗಬಹುದು. ಏಕೆಂದರೆ ಈ ಕೋಶಗಳು ಕೊರೋನಾ ವೈರಸ್‌ ದೇಹಕ್ಕೆ ಪ್ರವೇಶಿಸುತ್ತಿದ್ದಂತೆ ಅದೊಂದು ಸಾಮಾನ್ಯ ನೆಗಡಿಯ ವೈರಸ್‌ ಎಂದು ಭಾವಿಸಿ ಹೋರಾಡಲು ಶುರುಮಾಡುತ್ತವೆ. ಅದರಿಂದ ಹೆಚ್ಚಿನವರಲ್ಲಿ ಕೊರೋನಾ ನಿಯಂತ್ರಣಕ್ಕೆ ಬರಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios