ವಿದೇಶದಲ್ಲಿ ನೆಲದ ಮೇಲಿದ್ದ ರಾಷ್ಟ್ರಧ್ವಜ ಎತ್ತಿ ಜೇಬಿನಲ್ಲಿರಿಸಿ ಗೌರವ ಸೂಚಿಸಿದ ಪ್ರಧಾನಿ: ವಿಡಿಯೋ ವೈರಲ್
ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿಯಾಗಿದ್ದ ನಾಯಕರ ಫೋಟೋ ಸೆಷನ್ ವೇಳೆ ನೆಲದ ಮೇಲೆ ಇಟ್ಟಿದ್ದ ಭಾರತದ ರಾಷ್ಟ್ರಧ್ವಜದ ಚೀಟಿಯನ್ನು ಎತ್ತಿಕೊಂಡ ಮೋದಿ, ಅದಕ್ಕೆ ಗೌರವ ಸಲ್ಲಿಸಿದ ಘಟನೆ ಬುಧವಾರ ನಡೆದಿದೆ.
ಜೋಹಾನ್ಸ್‌ಬರ್ಗ್: ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿಯಾಗಿದ್ದ ನಾಯಕರ ಫೋಟೋ ಸೆಷನ್ ವೇಳೆ ನೆಲದ ಮೇಲೆ ಇಟ್ಟಿದ್ದ ಭಾರತದ ರಾಷ್ಟ್ರಧ್ವಜದ ಚೀಟಿಯನ್ನು ಎತ್ತಿಕೊಂಡ ಮೋದಿ, ಅದಕ್ಕೆ ಗೌರವ ಸಲ್ಲಿಸಿದ ಘಟನೆ ಬುಧವಾರ ನಡೆದಿದೆ. ಫೋಟೋ ಸೆಷನ್ ವೇಳೆ ಯಾವ ನಾಯಕರು ಎಲ್ಲಿ ನಿಲ್ಲಬೇಕು ಎಂಬುದನ್ನು ಸೂಚಿಸಲು ಪ್ರತಿ ದೇಶಗಳ ರಾಷ್ಟ್ರಧ್ವಜವನ್ನು ಒಳಗೊಂಡ ಪುಟ್ಟ ಚೀಟಿಯನ್ನು ವೇದಿಕೆ ಮೇಲೆ ಇಡಲಾಗಿತ್ತು. ಮೊದಲಿಗೆ ವೇದಿಕೆ ಮೇಲೆ ದಕ್ಷಿಣ ಆಫ್ರಿಕಾ ಅಧ್ಯಕ್ಷ (South African President) ಸಿರಿಲ್ ರಮಾಫೋಸಾ (Cyril Ramaphosa)ಜೊತೆಗೆ ಆಗಮಿಸಿದ ಮೋದಿ, ಭಾರತದ ರಾಷ್ಟ್ರಧ್ವಜದ ಚೀಟಿ ಕಾಣುತ್ತಲೇ ಅದನ್ನು ಎತ್ತಿಕೊಂಡು ತಮ್ಮ ಜೇಬಿಗೆ ಹಾಕಿಕೊಂಡು ಬಳಿಕ ಆ ಸ್ಥಳದಲ್ಲಿ ನಿಂತರು.
ಇದನ್ನು ನೋಡಿದ ರಮಾಫೋಸಾ ಕೂಡಾ ತಮ್ಮ ದೇಶದ ರಾಷ್ಟ್ರಧ್ವಜದ ಚೀಟಿ ಎತ್ತಿಕೊಂಡರು, ಜೊತೆಗೆ ಅದನ್ನು ಅಲ್ಲೇ ಇದ್ದ ಅಧಿಕಾರಿಯೊಬ್ಬರಿಗೆ ನೀಡಿದರು. ಈ ವೇಳೆ ಮೋದಿಗೂ ನಿಮ್ಮ ರಾಷ್ಟ್ರಧ್ವಜವನ್ನು ಅಧಿಕಾರಿ ಬಳಿ ನೀಡಿ ಎಂದು ಸಲಹೆ ನೀಡಿದರು. ಆದರೆ ಈ ಸಲಹೆ ತಿರಸ್ಕರಿಸಿದ ಮೋದಿ ಅದನ್ನು ತಮ್ಮ ಜೇಬಲ್ಲೇ ಇಟ್ಟುಕೊಳ್ಳುವ ಮೂಲಕ ಅದಕ್ಕೆ ಗೌರವ ವ್ಯಕ್ತಪಡಿಸಿದರು.
ಯಾವುದೇ ದೇಶ ಹೋಗದ ಕಡೆ ಇಂದು ಭಾರತ ಹೋಗಿದೆ: ಚಂದ್ರಯಾನ ಯಶಸ್ಸಿಗೆ ಮೋದಿ ಹರ್ಷ