ನವದೆಹಲಿ(ಜ.30): ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಯುರೋಪಿಯನ್ ಸಂಸತ್ ಸದಸ್ಯರು ಮಂಡಿಸಿದ್ದ ನಿರ್ಣಯದ ಮೇಲಿನ ಮತ ಪ್ರಕ್ರಿಯೆಯನ್ನು ಸಂಸತ್ತು ಮುಂದೂಡಿದೆ.

ಸಿಎಎ ವಿರೋಧಿ ನಿರ್ಣಯವನ್ನು ಚರ್ಚೆಗೆ ತೆಗೆದುಕೊಳ್ಳಲಾಗಿದ್ದು, ಆದರೆ ನಿರ್ಣಯದ ಮೇಲಿನ ಮತ ಪ್ರಕ್ರಿಯೆಯನ್ನು ಮುಂದಿನ ಮಾರ್ಚ್‌ಗೆ  ಮುಂದೂಡಲಾಗಿದೆ ಯೂರೋಪಿಯನ್ ಯೂನಿಯನ್ ಸಂಸತ್ತು ಸ್ಪಷ್ಟಪಡಿಸಿದೆ.

ಮುಂದಿನ ಮಾರ್ಚ್‌ನಲ್ಲಿ ಯೂರೋಪಿಯನ್ ಸಂಸತ್ತಿನ ಮಹಾಧಿವೇಶನ ನಡೆಯಲಿದ್ದು, ಈ ವೇಳೆ ಸಿಎಎ ಗೆ ಸಂಬಂಧಿಸಿದ ಮತ ಪ್ರಕ್ರಿಯೆಗೆ ಚಾಲನೆ ನೀಡಲು ತೀರ್ಮಾನಿಸಲಾಗಿದೆ ಎನ್ನಲಾಗದೆ.

ಭಾರತಕ್ಕೆ ಫುಲ್ ಸಪೋರ್ಟ್: ಐರೋಪ್ಯ ಒಕ್ಕೂಟ ನಿಯೋಗದ ಘೋಷಣೆ!

ಅಲ್ಲಿಯವೆಗೂ ಸಿಎಎ ವಿರೋಧಿ ನಿರ್ಣಯದ ಮೇಲಿನ ಚರ್ಚೆ ನಿಗದಿಯಂತೆಯೇ ಮುಂದುವರೆಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಯೂರೋಪಿಯನ್ ಯೂನಿಯನ್ ಸಂಸತ್ತು ಮಾಹಿತಿ ನೀಡಿದೆ. 

ಯುರೋಪಿಯನ್ ಸಂಸತ್‌ನಲ್ಲಿ ಸಿಎಎ ಸಂಬಂಧ ಮತ ಎಣಿಕೆ ನಡೆಯದಂತೆ ಭಾರತ ಸರ್ಕಾರ ನಡೆಸಿದ ಪ್ರಯತ್ನಕ್ಕೆ ಸದ್ಯ ಜಯ ಲಭಿಸಿದ್ದು,  ಆದರೂ ನಿರ್ಣಯದ ಮೇಲಿನ ಚರ್ಚೆ ಮುಂದುವರೆದಿರುವುದು ಕುತೂಹಲ ಮೂಡಿಸಿದೆ.