Asianet Suvarna News Asianet Suvarna News

ಭಾರತಕ್ಕೆ ಫುಲ್ ಸಪೋರ್ಟ್: ಐರೋಪ್ಯ ಒಕ್ಕೂಟ ನಿಯೋಗದ ಘೋಷಣೆ!

ಕಣಿವೆಯ ಪರಿಸ್ಥಿತಿ ಅವಲೋಕನಕ್ಕೆ ಬಂದಿರುವ ಐರೋಪ್ಯ ಒಕ್ಕೂಟದ ನಿಯೋಗ| ಕಾಶ್ಮೀರ ವಿಚಾರವಾಗಿ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಣೆ| ಐರೋಪ್ಯ ಒಕ್ಕೂಟದ ಸಂಸದರ ನಿಯೋಗದಿಂದ ಶ್ರೀನಗರದಲ್ಲಿ ಪತ್ರಿಕಾಗೋಷ್ಠಿ| ಕಾಶ್ಮೀರ ವಿಚಾರವಾಗಿ ಭಾರತ ಸರ್ಕಾರದ ನಿರ್ಧಾರಗಳಿಗೆ ಬೆಂಬಲ ಎಂದ ನಿಯೋಗ| ನಿಯೋಗದ ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ಪತ್ರಕರ್ತರಿಗೆ ಪ್ರವೇಶ ನಿರ್ಬಂಧ| ಶ್ರೀನಗರದ ಪ್ರಸಿದ್ಧ ದಾಲ್ ಸರೋವರದಲ್ಲಿ ನಿಯೋಗದಿಂದ ದೋಣಿ ವಿಹಾರ| ನಿಯೋಗದ ಕಣಿಕವೆಯ ಭೇಟಿ ಉದ್ದೇಶ ಟೀಕಿಸಿದ ಪ್ರತಿಪಕ್ಷಗಳು|

EU Delegation Says Support India In Efforts To End Terror In Valley
Author
Bengaluru, First Published Oct 30, 2019, 12:50 PM IST

ಶ್ರೀನಗರ(ಅ.30): ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ಭಾರತ ಸರ್ಕಾರದ ನಿರ್ಧಾರಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ, ಪರಿಸ್ಥಿತಿ ಅವಲೋಕನಕ್ಕಾಗಿ ಕಣಿವೆಗೆ ಭೇಟಿ ನೀಡಿರುವ ಐರೋಪ್ಯ ಒಕ್ಕೂಟದ ನಿಯೋಗ ಘೋಷಿಸಿದೆ.

ಕಣಿವೆಯ ಪರಿಸ್ಥಿತಿ ಅವಲೋಕಿಸಿದ ಬಳಿಕ ಶ್ರೀನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಐರೋಪ್ಯ ಒಕ್ಕೂಟದ ಸಂಸದರ ನಿಯೋಗದ ಸದಸ್ಯರು, ಶಾಂತಿ ಸುವ್ಯವಸ್ಥೆಗೆ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿ ತಂದಿವೆ ಎಂದು ಹೇಳಿದ್ದಾರೆ.

ಕಣಿವೆ ನೋಡುವುದೇ ಸುಯೋಗ: ಕಣಿವೆಗೆ ಭೇಟಿ ನೀಡಿದ ಯೂರೋಪಿಯನ್ ನಿಯೋಗ!

ಇದೇ ವೇಳೆ ನಿಯೋಗದ ಕಾಶ್ಮೀರ ಭೇಟಿಗೆ ವಿರೋಧ ವ್ಯಕ್ತಪಡಿಸಿರುವ ವಿಪಕ್ಷಗಳ ನಡೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಐರೋಪ್ಯ ಒಕ್ಕೂಟದ ಸಂಸದರು, ಭಾರತದ ಆಂತರಿಕ ರಾಜಕೀಯದಲ್ಲಿ ತಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಆದರೆ ಕಣಿವೆಯಲ್ಲಿ ಶಾಂತಿ ನೆಲೆಸಿದ್ದು, ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕಲು ಭಾರತ ಸರ್ಕಾರ ಕೈಗೊಂಡ ಕ್ರಮಗಳು ನಿಜಕ್ಕೂ ಶ್ಲಾಘನೀಯ ಎಂದಿರುವ ನಿಯೋಗ, ಕಾಶ್ಮೀರ ವಿಚಾರವಾಗಿ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದೆ.

ಇದಕ್ಕೂ ಮೊದಲು ಐರೋಪ್ಯ ಒಕ್ಕೂಟದ ಸಂಸದರ ನಿಯೋಗ ಶ್ರೀನಗರದ ಪ್ರಸಿದ್ಧ ದಾಲ್ ಸರೋವರದಲ್ಲಿ ದೋಣಿ ವಿಹಾರ ಮಾಡಿದ್ದು, ನಿಯೋಗದ ಸದಸ್ಯರಿಗೆ ಕಾಶ್ಮೀರಿ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.

'ನಾಜಿ ಲವರ್ಸ್'ಗಳಿಂದ ಕಣಿವೆ ಭೇಟಿ: ಮೋದಿ ವಿರುದ್ಧ ಒವೈಸಿ ಕಿಡಿ!

ಆದರೆ ಐರೋಪ್ಯ ಒಕ್ಕೂಟದ ಸಂಸದರ ನಿಯೋಗ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬೆರಳೆಣಿಕೆಯಷ್ಟು ಪತ್ರಕರ್ತರಿಗೆ ಮಾತ್ರ ಪ್ರವೇಶ ನೀಡಲಾಗಿದ್ದು, ಬಹುತೇಕ ಕಾಶ್ಮೀರಿ ಪ್ರಮುಖ ದಿನಪತ್ರಿಕೆಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಅಲ್ಲದೇ ನಿಯೋಗ ಕಾಶ್ಮೀರಿ ಪ್ರತಿಪಕ್ಷ ನಾಯಕರನ್ನೂ ಭೇಟಿ ಮಾಡದಿರುವುದು ವಿವಾದಕ್ಕೆ ಕಾರಣವಾಗಿದೆ.

ಐರೋಪ್ಯ ಒಕ್ಕೂಟದ ನಿಯೋಗ ಮೋದಿ ಸರ್ಕಾರದ ಆದೃಶದಂತೆ ಕೇವಲ ದಾಲ್ ಸರೋವರದಲ್ಲಿ ದೋಣಿ ವಿಹಾರ ನಡೆಸಲು ಬಂದಿದ್ದು, ಕಣಿವೆಯ ಅಸಲಿ ಪರಿಸ್ಥಿತಿ ಅವಲೋಕಿಸುವ ಇರಾದೆ ಅದಕ್ಕಿಲ್ಲ ಎಂದು ವಿಪಕ್ಷಗಳು ಟೀಕಿಸಿವೆ.

Follow Us:
Download App:
  • android
  • ios