Asianet Suvarna News Asianet Suvarna News

ಅಪಾರ್ಟ್‌ಮೆಂಟ್‌ನಲ್ಲಿ ಅಮೆರಿಕಾ ಮೂಲದ ಇಬ್ಬರು ಮಾಡೆಲ್‌ಗಳ ಶವ ಪತ್ತೆ

ಇಬ್ಬರು ಅಮೆರಿಕಾ ಮೂಲದ ಮಾಡೆಲ್‌ಗಳು ಐಷಾರಾಮಿ ಅಪಾರ್ಟ್‌ಮೆಂಟೊಂದರಲ್ಲಿ ( Luxury Apartments) ಶವವಾಗಿ ಪತ್ತೆಯಾಗಿದ್ದಾರೆ.

The bodies of two American origin models were found in the luxury apartment  in Los Angeles akb
Author
First Published Sep 19, 2023, 9:07 AM IST | Last Updated Sep 19, 2023, 9:07 AM IST

ಲಾಸ್‌ ಏಂಜಲೀಸ್‌: ಇಬ್ಬರು ಅಮೆರಿಕಾ ಮೂಲದ ಮಾಡೆಲ್‌ಗಳು ಐಷಾರಾಮಿ ಅಪಾರ್ಟ್‌ಮೆಂಟೊಂದರಲ್ಲಿ ( Luxury Apartments) ಶವವಾಗಿ ಪತ್ತೆಯಾಗಿದ್ದಾರೆ. 31 ವರ್ಷದ ಮೆಲೀಸಾ ಮೂನಿ ಶವ ಸೆಪ್ಟೆಂಬರ್ 12 ರಂದು ಪತ್ತೆಯಾಗಿದ್ದರೆ, ಮತ್ತೊಬ್ಬ ಮಾಡೆಲ್ 32 ವರ್ಷದ ನಿಕೋಲೆ ಕೋಟ್ಸ್ ಶವ ಸೆಪ್ಟೆಂಬರ್ 10 ರಂದು ಆಕೆಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ಈ ಎರಡೂ ಅಪಾರ್ಟ್‌ಮೆಂಟ್‌ಗಳು ಕೇವಲ ಒಂದು ಮೈಲು ಅಂತರದಲ್ಲಿವೆ  ಎಂದು ಪೊಲೀಸರು ತಿಳಿಸಿದ್ದಾರೆ.

ಮೂನಿ (Maleesa Mooney)ಅವರು ಬಂಕರ್ ಹಿಲ್‌ನಲ್ಲಿರುವ ಅವರ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಕುಟುಂಬದವರು ಅವರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ವಿಚಾರ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಲಾಸ್ ಏಂಜಲೀಸ್‌ ಪೊಲೀಸ್ ಇಲಾಖೆ ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ಆಕೆಯ ಸಾವಿಗೆ ಕಾರಣವಾದ ವ್ಯಕ್ತಿ ಅಥವಾ ಜನರನ್ನು ಗುರುತಿಸಲು ಸಾರ್ವಜನಿಕರಿಂದ ಸಹಾಯವನ್ನು ಪಡೆಯಲು ಪೊಲೀಸ್ ಇಲಾಖೆ ನಿರ್ಧರಿಸಿದೆ. 

ಮತ್ತೊಂದೆಡೆ ಮತ್ತೊಬ್ಬ ಮಾಡೆಲ್ ನಿಕೋಲೆ ಕೋಟ್ಸ್‌ (Nichole Coats) ಅವರ ಸಾವಿಗೆ ಎರಡು ದಿನಗಳ ಹಿಂದಷ್ಟೇ ಕಲ್ಯಾಣ ಅಧಿಕಾರಿಗಳು ಆಕೆಯ ಯೋಗಕ್ಷೇಮ ವಿಚಾರಿಸಲು ಕರೆ ಮಾಡಿದ್ದರು. ಆದರೆ ಈ ವೇಳೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದಾದ ನಂತರ ಯಾರೋ ಕರೆ ಮಾಡಿ ಮನೆಯಲ್ಲಿ ಶವ ಇರುವ ಬಗ್ಗೆ ತಿಳಿಸಿದ್ದಾರೆ. ಇದೊಂದು ಕೊಲೆ ಎಂದು ಹೇಳಲಾಗದು. ಆದರೆ ನಿಕೋಲೆ ಕೋಟ್ಸ್ ಕುಟುಂಬದವರು ಇದೊಂದು ಕೊಲೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. 

ಇದೊಂದು ಕೊಲೆ (Murder) ಎಂದೇ ನಾನು ನಂಬುತ್ತೇನೆ, ಏಕೆಂದರೆ ಅವಳ ಒಂದು ಕಾಲು ಒದೆಯುವ ಭಂಗಿಯಲ್ಲಿ ಗಾಳಿಯಲ್ಲಿತ್ತು. ಅದು ಕೇವಲ ಹಾಸಿಗೆಯಲ್ಲಿ ಮಲಗಿ ಸತ್ತವರಂತೆ ಇರಲಿಲ್ಲ ಎಂದು ಮಾಡೆಲ್ ನಿಕೋಲೆ ಕೋಟ್ಸ್ ಅವರ ಚಿಕ್ಕಮ್ಮ ಮೇ ಸ್ಟೀವನ್ಸ್ ಹೇಳಿದ್ದಾರೆ. ಮಾಡೆಲ್ ಸಾವಿನಿಂದ ಆಕೆಯ ತಾಯಿ ಶರೋನ್ ಕೋಟ್ಸ್‌ ತೀವ್ರ ಆಘಾತಕೀಡಾಗಿದ್ದು, ನನ್ನ ಮಗಳು ಹೊರಟು ಹೋದಳು, ಆಕೆಯ ಸಾವು ನ್ಯಾಯೋಚಿತವಲ್ಲ, ಆಕೆಗೆ ಯಾರೂ ಈ ರೀತಿ ಮಾಡಿದರು, ಆಕೆಯ ಸಾವಿಗೆ ಕಾರಣ ಯಾರು ಎಂದು ನಾನು ತಿಳಿಯಲು ಬಯಸುವೆ. ಈ ಪ್ರಕರಣ ಅಲ್ಲಿಗೆ ಮುಚ್ಚಿ ಹೋಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರುಚಿ ನೋಡೋ ನೆಪದಲ್ಲಿ ಅರೆಬೆಂದ ಆಹಾರ ತಿನ್ನುವ ಮುನ್ನ ಜೋಪಾನ: ದೇಹದ ಸ್ವಾಧೀನವನ್ನೇ ಕಳೆದುಕೊಂಡ ಮಹಿಳೆ

ಈ ಎರಡೂ ಪ್ರಕರಣಗಳು ಒಂದಕ್ಕೊಂದು ಸಂಬಂಧಿಸಿದ್ದೆ ಎಂಬುದು ಇನ್ನು ಖಚಿತವಾಗಿಲ್ಲ, ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಎರಡು ಕೊಲೆ ಪ್ರಕರಣಗಳಿಗೆ ಸಂಬಂಧ ಇದೆ ಎಂದು ಈ ಎರಡು ಮಾಡೆಲ್‌ಗಳ ಕುಟುಂಬದವರು ಶಂಕಿಸಿದ್ದು, ಬಹುಶಃ ಸರಣಿ ಹಂತಕ ಈ ಕೃತ್ಯವೆಸಗಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.  ನಾವು ಏನಾಯಿತು ಎಂದು ತಿಳಿದುಕೊಳ್ಳಲು ಬಯಸುತ್ತೇವೆ ಇದು ಸರಿಯಾಗಿ ಕಾಣುತ್ತಿಲ್ಲ, ಇವರಿಬ್ಬರ ಮಧ್ಯೆ ಏನಾದರೂ ಸಂಬಂಧವಿದೆಯೇ ಅವರಿಬ್ಬರೂ ಬಹುತೇಕ ಒಂದೇ ಪ್ರದೇಶದಲ್ಲಿದ್ದರು. ಅಥವಾ ಎರಡಕ್ಕೂ ಸಂಬಂಧವಿಲ್ಲದ ಹತ್ಯೆಯೇ ಎಂದು ಖಚಿತಪಡಿಸಿಕೊಳ್ಳಲು ಬಯಸಿದ್ದೇವೆ ಎಂದು ಮಾಡೆಲ್ ಕೋಟ್ಸ್ ಸಂಬಂಧಿ ಶೇನಿಯ ಮೇಸನ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios