* ಮಸ್ಕ್‌ ಒಡೆತನದ ಟೆಸ್ಲಾ ಎಲೆಕ್ಟ್ರಿಕ್‌ ಕಾರ್‌ ಕಂಪನಿಯ ವಿರುದ್ಧ ಲೈಂಗಿಕ ಕಿರುಕುಳದ ಮೊಕದ್ದಮೆ* ಕಾರ್ಖಾನೆಯಲ್ಲಿ ಸಹೊದ್ಯೋಗಿಗಳು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ 

ಸ್ಯಾನ್‌ಫ್ರಾನ್ಸಿಸ್ಕೊ(ನ.21): ಮಹಿಳಾ ಉದ್ಯೋಗಿಯೊಬ್ಬರು ಎಲಾನ್‌ ಮಸ್ಕ್‌ (Elon Musk) ಒಡೆತನದ ಟೆಸ್ಲಾ ಎಲೆಕ್ಟ್ರಿಕ್‌ ಕಾರ್‌ ಕಂಪನಿಯ ವಿರುದ್ಧ ಲೈಂಗಿಕ ಕಿರುಕುಳದ (Sexual Harassment) ಮೊಕದ್ದಮೆಯನ್ನು ದಾಖಲಿಸಿದ್ದಾರೆ.

‘ಟೆಸ್ಲಾ ಮಾಡಲ್‌ 3’ 9Tesla Model 3) ಯೋಜನೆಯ ಪ್ರೊಡಕ್ಷನ್‌ ಅಸೋಸಿಯೇಟ್‌ ಜೆಸ್ಸಿಕಾ ಬರ್ರಾಜಾ ಎಂಬಾಕೆ, ‘ಕ್ಯಾಲಿಫೋರ್ನಿಯಾದ ?(california) ಫೀಮಾಂಟ್‌ನಲ್ಲಿರುವ ಟೆಸ್ಲಾ ಕಾರ್ಖಾನೆಯಲ್ಲಿ (Telsa Factory) ಸಹೊದ್ಯೋಗಿಗಳು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿದ್ದಾಳೆ.

‘ಸುಮಾರು ಮೂರು ವರ್ಷಗಳಿಂದಲೂ ನಾನು ಸೇರಿ ಎಲ್ಲ ಮಹಿಳಾ ಸಹೋದ್ಯೋಗಿಗಳು ನಿರಂತರವಾಗಿ ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದೇವೆ. ಪ್ರತಿದಿನವೂ ನಮ್ಮ ಅಂಗಾಂಗಗಳ ಜತೆ ಅಸಭ್ಯವಾಗಿ ವರ್ತಿಸುವುದು, ಅನುಚಿತ ದೈಹಿಕ ಸ್ಪರ್ಶ, ಲೈಂಗಿಕ ಬೆದರಿಕೆಗಳಿಂದ ಬೇಸತ್ತಿದ್ದೇನೆ. ನಾನು ಯಾವುದೇ ರೀತಿಯ ಲೈಂಗಿಕ ಕಿರುಕುಳ ಇಲ್ಲದೇ ನನ್ನ ಕೆಲಸವನ್ನು ಮಾಡಲು ಬಯಸುತ್ತೇನೆ’ ಎಂದಿದ್ದಾರೆ. ಟೆಸ್ಲಾ ಕಂಪನಿ ಈ ಮೊಕದ್ದಮೆಯ ಕುರಿತು ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಎಲಾನ್‌ ಮಸ್ಕ್‌ ಸಂಪತ್ತು 300 ಶತಕೋಟಿ ಡಾಲರ್‌

ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಎಂಬ ಹಿರಿಮೆ ಹೊಂದಿರುವ ಅಮೆರಿಕದ ಉದ್ಯಮಿ ಎಲಾನ್‌ ಮಸ್ಕ್‌ 300 ಶತಕೋಟಿ ಡಾಲರ್‌ (22.50 ಲಕ್ಷ ಕೋಟಿ ರು.) ಆಸ್ತಿ ಹೊಂದಿರುವ ವಿಶ್ವದ ಮೊದಲ ಧನಿಕ ಎನ್ನಿಸಿಕೊಂಡಿದ್ದಾರೆ. ಬ್ಲೂಮ್‌ಬರ್ಗ್‌ ಬಿಲಿಯನೇರ್‌ ಇಂಡೆಕ್ಸ್‌ನಲ್ಲಿ ಮಸ್ಕ್‌ ಆಸ್ತಿ ಶನಿವಾರ 311 ಶತಕೋಟಿ ಡಾಲರ್‌ಗೆ ಏರಿದೆ. ಇದರೊಂದಿಗೆ 300 ಶತಕೋಟಿ ಡಾಲರ್‌ ಕ್ಲಬ್‌ ದಾಟಿದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಮಸ್ಕ್‌ ಅವರು ಟೆಸ್ಲಾ ವಾಹನ ಉದ್ಯಮ ಸೇರಿದಂತೆ ಹಲವು ಸಮೂಹಗಳ ಉದ್ದಿಮೆದಾರರು. ಅವರ ಕಂಪನಿಯ ಷೇರು ಮೌಲ್ಯಗಳು ಭಾರೀ ಏರಿಕೆ ಕಂಡಿದ್ದರಿಂದ ಹಾಗೂ 1 ಲಕ್ಷದಷ್ಟುಟೆಸ್ಲಾ ಎಲೆಕ್ಟ್ರಿಕ್‌ ವಾಹನಗಳು ಒಮ್ಮಿಂದೊಮ್ಮೆಲೇ ಮಾರಾಟ ಕಂಡಿದ್ದರಿಂದ ಅಕ್ಟೋಬರ್‌ 25ರಂದು ಅವರ ಆಸ್ತಿ ಮೌಲ್ಯ 292 ಶತಕೋಟಿ ಡಾಲರ್‌ಗೆ (22.50 ಲಕ್ಷ ಕೋಟಿ ರು.) ಏರಿತ್ತು. ಇದೀಗ ಐದೇ ದಿನದಲ್ಲಿ ಅವರ ಆಸ್ತಿ 1.42 ಲಕ್ಷ ಕೋಟಿ ರು.ನಷ್ಟುಹೆಚ್ಚಿದೆ.

ಬ್ಲೂಮ್‌ಬರ್ಗ್‌ ಇಂಡೆಕ್ಸ್‌ನಲ್ಲಿ ಮಸ್ಕ್‌ ನಂತರದ ಸ್ಥಾನದಲ್ಲಿ ಜೆಫ್‌ ಬೆಜೋಸ್‌ (14.62 ಲಕ್ಷ ಕೋಟಿ ರು), ಬೆರ್ನಾರ್ಡ್‌ ಅರ್ನಾಲ್ಟ್‌ (12.52 ಲಕ್ಷ ಕೋಟಿ ರು) ಇದ್ದಾರೆ. ಈ ಪಟ್ಟಿಯಲ್ಲಿ ರಿಲಯನ್ಸ್‌ ಒಡೆಯ ಮುಕೇಶ್‌ ಅಂಬಾನಿ 71.2 ಲಕ್ಷ ಕೋಟಿ ರು. (11ನೇ ಸ್ಥಾನ) ಹಾಗೂ ಗೌತಮ್‌ ಅದಾನಿ 5.77 ಲಕ್ಷ ಕೋಟಿ ರು. ಆಸ್ತಿ (13ನೇ ಸ್ಥಾನ) ಹೊಂದಿದ್ದಾರೆ.

ಮಸ್ಕ್‌ ಆಸ್ತಿ ಪಾಕ್‌ ಜಿಡಿಪಿಗಿಂತಲೂ ಅಧಿಕ!

ವಾಷಿಂಗ್ಟನ್‌: ವಿಶ್ವದ ಅತ್ಯಂತ ಸಿರಿವಂತ ವ್ಯಕ್ತಿ ಎಂಬ ಖ್ಯಾತಿ ಪಡೆದಿರುವ ಉದ್ಯಮಿ ಎಲಾನ್‌ ಮಸ್ಕ್‌ ಆಸ್ತಿ ಈಗ ಪಾಕಿಸ್ತಾನದ ಜಿಡಿಪಿ ಮೌಲ್ಯಕ್ಕಿಂತ ಅಧಿಕವಾಗಿದೆ! ಹೌದು, ಮಸ್ಕ್‌ ಆಸ್ತಿ ಮೌಲ್ಯ 300 ಶತಕೋಟಿ ಡಾಲರ್‌ ಮೀರಿದೆ. ಇದು 22 ಕೋಟಿ ಜನಸಂಖ್ಯೆ ಹೊಂದಿರುವ ಪಾಕಿಸ್ತಾನದ 280 ಶತಕೋಟಿ ಡಾಲರ್‌ ಜಿಡಿಪಿಗಿಂತ ಹೆಚ್ಚಿನದು ಎಂಬುದು ವಿಶೇಷ. ಅಂದರೆ ಪಾಕಿಸ್ತಾನದ ಒಂದು ವರ್ಷದ ಒಟ್ಟು ಉತ್ಪಾದನೆಗಿಂತ ಮಸ್ಕ್‌ ಆಸ್ತಿಯೇ ಹೆಚ್ಚು.