ಟೊಂಗಾದ ಭೀಕರ ಜ್ವಾಲಾಮುಖಿ ಸ್ಫೋಟ ಮತ್ತು ಸುನಾಮಿಯಿಂದ ನೀರೊಳಗಿನ ಫೈಬರ್-ಆಪ್ಟಿಕ್ ಕೇಬಲ್‌ಗಳಿಗೆ ಹಾನಿಯುಂಟಾಗಿದ್ದು ದೂರಸಂಪರ್ಕ ವ್ಯವಸ್ಥೆಗೆ ತೀವ್ರ ಅಡ್ಡಿ ಉಂಟಾಗಿದೆ. ‌

ನುಕುವಾಲೋಫಾ (ಫೆ. 19): ಜ್ವಾಲಾಮುಖಿಯಿಂದ ಹಾನಿಗೊಳಗಾದ ಪೆಸಿಫಿಕ್‌ ಸಾಗರದ ದ್ವೀಪ ದ್ವೀಪವನ್ನು ಪ್ರಪಂಚದೊಂದಿಗೆ ಮರುಸಂಪರ್ಕಿಸಲು ಸಹಾಯ ಮಾಡಲು ಬಾಹ್ಯಾಕಾಶ ಉದ್ಯಮಿ ಮತ್ತು ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ 50 ಉಪಗ್ರಹ ಟರ್ಮಿನಲ್‌ಗಳನ್ನು ದಾನ ಮಾಡಿದ್ದಾರೆ ಎಂದು ಟೊಂಗಾ ಹೇಳಿದೆ. ಪೆಸಿಫಿಕ್‌ ಸಾಗರದ ದ್ವೀಪ ದೇಶ ಟೊಂಗಾದಲ್ಲಿ(Tonga Volcano) ಇತ್ತೀಚೆಗೆ ಸ್ಫೋಟಿಸಿದ ಜ್ವಾಲಾಮುಖಿಯು ಜಾಗತಿಕ ಇತಿಹಾಸದಲ್ಲಿ ಕಾಣಿಸಿಕೊಂಡ ಅತ್ಯಂತ ಭೀಕರ ಜ್ವಾಲಾಮುಖಿಗಳಲ್ಲಿ ಒಂದು ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ(NASA) ಹೇಳಿತ್ತು. 

ಟೋಂಗಾದ ಭೀಕರ ಜ್ವಾಲಾಮುಖಿ ಸ್ಫೋಟ ಮತ್ತು ಸುನಾಮಿಯಿಂದ ನೀರೊಳಗಿನ ಫೈಬರ್-ಆಪ್ಟಿಕ್ ಕೇಬಲ್‌ಗಳಿಗೆ ಹಾನಿಯುಂಟಾಗಿದ್ದು ದೂರಸಂಪರ್ಕ ವ್ಯವಸ್ಥೆಗೆ ತೀವ್ರ ಅಡ್ಡಿ ಉಂಟಾಗಿದೆ. ಮಸ್ಕ್‌ನ ಸ್ಪೇಸ್‌ಎಕ್ಸ್ 50 ಅತಿ ಸಣ್ಣ-ದ್ಯುತಿರಂಧ್ರ ಟರ್ಮಿನಲ್‌ಗಳನ್ನು (VSAT) ಒದಗಿಸುತ್ತಿದೆ "ಮತ್ತು ನಾವು ಅದನ್ನು ಹೇಗೆ ಉತ್ತಮವಾಗಿ ಬಳಸಿಕೊಳ್ಳಬಹುದು ಎಂಬುದನ್ನು ನಾವು ನೋಡುತ್ತಿದ್ದೇವೆ" ಎಂದು ಪ್ರಧಾನ ಮಂತ್ರಿ ಸಿಯೋಸಿ ಸೊವಾಲೆನಿ (Siaosi Sovaleni) ಶುಕ್ರವಾರ ಹೇಳಿದ್ದಾರೆ.

ಇದು ಕೇಬಲ್‌ಗಳಿಗೆ ಹಾನಿಯಾದ ನಂತರ ಬಹಳ ಕಡಿಮೆ ಬ್ಯಾಂಡ್‌ವಿಡ್ತ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೆಸಿಫಿಕ್‌ ಸಾಗರದ ದ್ವೀಪ ಸಾಮ್ರಾಜ್ಯವು ತನ್ನ ಇಂಟರ್ನೆಟ್ ಸಾಮರ್ಥ್ಯವನ್ನು ಹೆಚ್ಚಿಸಲು ಕೊಡುಗೆಗಳನ್ನು ನಿರೀಕ್ಷಿಸುತ್ತಿತ್ತು.

ಇದನ್ನೂ ಓದಿದ್ವೀಪದಿಂದ ಮೇಲುಕ್ಕಿ ಬಂದ ಲಾವಾ..! ಬೆಂಕಿಯ ಕೆನ್ನಾಲಿಗೆಗೆ ಗ್ರಾಮವೇ ನಾಶ

ಸ್ಪೇಸ್‌ಎಕ್ಸ್ ಮತ್ತು ಟೊಂಗಾ ಸರ್ಕಾರದ ತಾಂತ್ರಿಕ ಸಿಬ್ಬಂದಿ ಮುಂದಿನ ವಾರದಿಂದ ಅದನ್ನು ಕಾರ್ಯಗತಗೊಳಿಸಲು ಉಪಕರಣಗಳನ್ನು ಸ್ಥಾಪಿಸುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ವಾರದ ಆರಂಭದಲ್ಲಿ ತಾತ್ಕಾಲಿಕ ರಿಪೇರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸೋವಲೆನಿ ಹೇಳಿದರು

ಟೊಂಗಾದಲ್ಲಿ ಭುಗಿಲೆದ್ದ ಜ್ವಾಲಾಮುಖಿ: ಜ.15ರಂದು ಟೊಂಗಾ ಗಣರಾಜ್ಯದಲ್ಲಿ ಜ್ವಾಲಾಮುಖಿ ಸ್ಫೋಟಿಸಿತ್ತು. ಸುಮಾರು 1 ಲಕ್ಷ ಜನ ವಾಸಿಸುವ ದ್ವೀಪ ದೇಶದಲ್ಲಿ ಭುಗಿಲೆದ್ದ ಜ್ವಾಲಾಮುಖಿಯಿಂದ ಸುತ್ತಲಿನ ಹತ್ತಾರು ದೇಶಗಳಲ್ಲಿ ಸುನಾಮಿ(tsunami) ಉಂಟಾಗಿತ್ತು. ಆ ವೇಳೆ ಮೃತಪಟ್ಟಿದ್ದು ಬೆರಳೆಣಿಕೆಯ ಜನರಾಗಿದ್ದರೂ, ಜ್ವಾಲಾಮುಖಿಯ ಪರಿಣಾಮ ಮಾತ್ರ ಭಾರಿ ಭೀಕರವಾಗಿದೆ. 

ಹುಂಗಾ ಟೊಂಗಾ ಹುಂಗಾ ಹಾಪೆಯ್‌ ಎಂದು ಹೆಸರಿಡಲಾದ ಜ್ವಾಲಾಮುಖಿಯು ಸುಮಾರು 40 ಕಿ.ಮೀ. ಎತ್ತರಕ್ಕೆ ವಾತಾವರಣದಲ್ಲಿ ಬೂದಿ ಹಾಗೂ ಕಸ ಉಗುಳಿದೆ. ಅದರ ಪರಿಣಾಮವಾಗಿ ಹೆಚ್ಚುಕಮ್ಮಿ ಇಡೀ ದೇಶದ ಜನರು ಈಗ ಅನಾರೋಗ್ಯ ಸೇರಿದಂತೆ ನಾನಾ ರೀತಿಯ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟಕ್ಕೆ 13 ಮಂದಿ ಬಲಿ, ಹಲವರು ಕಣ್ಮರೆ

30 ಮೆಗಾಟನ್‌ ಶಕ್ತಿ ಬಿಡುಗಡೆ: ಮಹಾಯುದ್ಧದಲ್ಲಿ ಜಪಾನ್‌ ಮೇಲೆ ಅಮೆರಿಕ ಹಾಕಿದ ಅಣುಬಾಂಬ್‌ ಸುಮಾರು 15 ಕಿಲೋಟನ್‌ (15 ಸಾವಿರ ಟನ್‌) ಶಕ್ತಿಯುಳ್ಳದ್ದಾಗಿತ್ತು. ಆದರೆ ಟೊಂಗಾ ಜ್ವಾಲಾಮುಖಿ 5ರಿಂದ 30 ಮೆಗಾಟನ್‌ (50 ಲಕ್ಷದಿಂದ 3 ಕೋಟಿ ಟನ್‌) ಶಕ್ತಿ ಉಗುಳಿದೆ. 

ಅದರ ಬೂದಿ ಹಾಗೂ ತ್ಯಾಜ್ಯದಿಂದ ಟೊಂಗಾದ 65 ಕಿ.ಮೀ. ಭೂಭಾಗ ನಿಷ್ೊ್ರಯೋಜಕವಾಗಿದೆ. ಎರಡು ಹಳ್ಳಿಗಳು ಸಂಪೂರ್ಣ ನಾಶವಾಗಿವೆ. ವಿಷಪೂರಿತ ಬೂದಿಯಿಂದ ಕೃಷಿ ಭೂಮಿಗಳು ಬರಡಾಗಿದ್ದು, ಕುಡಿಯುವ ನೀರು ಕೂಡ ವಿಷಪೂರಿತವಾಗಿ ಜನರಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುತ್ತಿದೆ ಎಂದು ನಾಸಾ ತಿಳಿಸಿದೆ.

ಜನರ ಕಣ್ಣು, ಬಾಯಿಯಲ್ಲೂ ಬೂದಿ: ಸ್ಫೋಟದ ಕೆಲ ದಿನಗಳ ಬಳಿಕವೂ ಗಾಳಿಯಲ್ಲಿ ಜ್ವಾಲಾಮುಖಿಯ ಬೂದಿ ಇರುವುದರಿಂದ ಟೊಂಗಾದ ಜನರ ಕಣ್ಣು, ಮೂಗು ಹಾಗೂ ಬಾಯಿಗಳಲ್ಲಿ ಬೂದಿ ತುಂಬಿಕೊಳ್ಳುತ್ತಿದೆ. ಅವರ ಉಗುರುಗಳು ಕೆಸರು ತುಂಬಿಕೊಂಡು ಕಪ್ಪಾಗಿವೆ. ಜ್ವಾಲಾಮುಖಿಯಿಂದ ಇಡೀ ದೇಶ ಬಾಹ್ಯ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿದೆ. ಜಪಾನ್‌, ನ್ಯೂಜಿಲೆಂಡ್‌, ಆಸ್ಪ್ರೇಲಿಯಾ ದೇಶಗಳು ನೆರವು ರವಾನಿಸುತ್ತಿವೆ ಎಂದು ಪ್ರತ್ಯಕ್ಷದರ್ಶಿ ಪತ್ರಕರ್ತೆಯೊಬ್ಬರು ತಿಳಿಸಿದ್ದಾರೆ.