ಇಸ್ರೇಲ್ ಹಾಗೂ ಇರಾನ್ ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಎರಡೂ ದೇಶಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆಯುತ್ತಿದೆ. ಇದರ ನಡುವೆ ಇಸ್ರೇಲ್ ಆಸ್ಪತ್ರೆ ಮೇಲೆ ಮಿಸೈಲ್ ದಾಳಿಯಾದ ಬೆನ್ನಲ್ಲೇ ಭಾರತೀಯ ಮೂಲದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.

ಟೆಲ್ ಅವೀವ್(ಜೂ.19) ಇರಾನ್ ಹಾಗೂ ಇಸ್ರೇಲ್ ಯುದ್ಧ ಹಲವು ದೇಶಗಳಿಗೆ ತೀವ್ರ ಆತಂಕ ತಂದಿದೆ. ಎರಡು ಬಲಿಷ್ಠ ರಾಷ್ಟ್ರಗಳು ಸತತ ದಾಳಿ ನಡೆಸುತ್ತಿದೆ. ಕಳೆದ ಒಂದು ವಾರದಿಂದ ಯುುದ್ಧ ನಡೆಯುತ್ತಿದ್ದು, ಅಪಾರ ನಷ್ಟ ಸಂಭವಿಸಿದೆ. ಇಸ್ರೇಲ್ ಏರ್‌ಸ್ಟ್ರೈಕ್, ಮಿಸೈಲ್ ದಾಳಿಯಲ್ಲಿ ಇರಾನ್ ಸೇನಾ ನೆಲೆಗಳು, ಅಣು ಸ್ಥಾವರಗಳನ್ನು ಗುರಿಯಾಗಿಸಿಕೊಂಡಿದೆ. ಆದರೆ ಇರಾನ್ ದಾಳಿಗಳು ಇಸ್ರೇಲ್ ಜನವತಿ ಕೇಂದ್ರ, ಆಸ್ಪತ್ರೆ, ಕಚೇರಿಗಳ ಮೇಲೆ ನಡೆಸುತ್ತಿದೆ. ಇದೀಗ ಇರಾನ್ ನಡೆಸಿದ ಮಿಸೈಲ್ ದಾಳಿಯಲ್ಲಿ ದಕ್ಷಿಣ ಇಸ್ರೇಲ್‌ನ ಪ್ರಮುಖ ಆಸ್ಪತ್ರೆಗೆ ಹಾನಿಯಾಗಿದೆ. ಆಸ್ಪತ್ರೆ ಮೇಲೆ ಇರಾನ್ ಕ್ಷಿಪಣಿಗಳು ಸ್ಫೋಟಗೊಂಡಿದೆ. ಸತತ ದಾಳಿಯಿಂದ ಇದೇ ಆಸ್ಪತ್ರೆಯಲ್ಲಿ ದಾಖಲಾದ ಭಾರತೀಯ ಮೂಲದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.

ಆಸ್ಪತ್ರೆ ದಾಖಲಾಗಿದ್ದ ರವೀಂದ್ರ ಸಾವು

ಟೆಲ್ ಅವೀವ್‌ನ ಬೀರ್‌ಶೆಬಾದಲ್ಲಿರುವ ಸೊರೊಕಾ ಮೆಡಿಕಲ್ ಆಸ್ಪತ್ರೆ ಮೇಲೆ ಇರಾನ್ ಮಿಸೈಲ್ ದಾಳಿ ಮಾಡಿದೆ. ಇರಾನ್‌ನ ಹಲವೆಡೆ ಇರಾನ್ ಮಿಸೈಲ್ ಸ್ಫೋಟಗೊಂಡಿದೆ. ಇದರಿಂದ ಹಲವು ಜನವಸತಿ ಪ್ರದೇಶಗಳಲ್ಲಿ ಹಾನಿಯಾಗಿದೆ. ಸತತ ಬಾಂಬ್ ದಾಳಿ, ಮಿಸೈಲ್ ದಾಳಿಯಿಂದ ದಕ್ಷಿಣ ಇಸ್ರೇಲ್‌ನ ಆಸ್ಪತ್ರೆ ದಾಖಲಾಗಿದ್ದ ಅನಾರೋಗ್ಯ ಪೀಡಿತ ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ರವೀಂದ್ರ ತೀವ್ರ ಅಸ್ವಸ್ಥಗೊಂಡಿದ್ದಾರೆ. ಬಾಂಬ್ ದಾಳಿ, ಮಿಸೈಲ್ ದಾಳಿ ಆತಂಕದಲ್ಲೇ ರವೀಂದ್ರ ಅನ್ನೋ ವ್ಯಕ್ತಿ ಹೃದಯಾಘಾತಕ್ಕೆ ಮೃತಪಟ್ಟಿದ್ದಾರೆ.

ಬಾಂಬ್ ದಾಳಿಯಿಂದ ಅಸ್ವಸ್ಥಗೊಂಡಿದ್ದ ರವೀಂದ್ರ

ಬಾಂಬ್ ದಾಳಿಯಿಂದ ಆಸ್ಪಸ್ಥಗೊಂಡ ರವೀಂದ್ರ ತೆಲಂಗಾಣದಲ್ಲಿರುವ ಕುಟಂಬಕ್ಕೆ ಕರೆ ಮಾಡಿ ಮಾತನಾಡಿದ್ದರು. ಸತತ ದಾಳಿಯಾಗುತ್ತಿದೆ. ಈ ದಾಳಿಯಿಂದ ತಾನು ತೀವ್ರ ಅಸ್ವಸ್ಥನಾಗಿದ್ದೇನೆ. ಆರೋಗ್ಯ ಹದಗೆಡುತ್ತಿದೆ ಎಂದು ಪತ್ನಿ ವಿಜಯಲಕ್ಷ್ಮಿ ಬಳಿ ಹೇಳಿಕೊಂಡಿದ್ದರು. ಫೋನ್ ಮೂಲಕ ಸಮಾಧಾನ ಮಾಡಿದ್ದ ವಿಜಯಲಕ್ಷ್ಮಿ ಗುಣಮುಖರಾಗಿ ತವರಿಗೆ ಮರಳುವಂತೆ ಸೂಚಿಸಿದ್ದರು. ಇದೇ ವೇಳೆ ಮಕ್ಕಳನ್ನು ನೋಡಿಕೊಳ್ಳಲು ರವೀಂದ್ರ ಹೇಳಿದ್ದಾರೆ.

ಮಕ್ಕಳ ನೋಡಿಕೊಳ್ಳಲು ಮನವಿ ಮಾಡಿದ್ದ ರವೀಂದ್ರ

ಪತ್ನಿ ಸಮಾಧಾನ ಮಾಡಿದರೂ ರವೀಂದ್ರಗೆ ತನ್ನ ಪಕ್ಕದ ಕಟ್ಟಡ, ಸ್ಥಳಗಳ ಮೇಲೆ ಬಾಂಬ್ ದಾಳಿಯಾಗುತ್ತಿರುವುದು ಆತಂಕ ಸೃಷ್ಟಿಸಿತ್ತು. ಪತ್ನಿ, ಮಕ್ಕಳನ್ನು ನೋಡಲು ಸಾಧ್ಯವಾಗುವಿದಿಲ್ಲ ಅನ್ನೋ ಕೊರಗು ಹಾಗೂ ಆತಂಕ ಹೆಚ್ಚಾಗಿತ್ತು. ಈ ಆತಂಕ ಹಾಗೂ ನೋವಿನಲ್ಲೇ ರವೀಂದ್ರಗೆ ಹೃದಯಾಘಾತವಾಗಿದೆ.

ಪತಿ ಮೃತದೇಹ ಭಾರತಕ್ಕೆ ತರಲು ಪತ್ನಿಯ ಮನವಿ

ಪತಿ ಕೆಲಸಕ್ಕಾಗಿ ಇಸ್ರೇಲ್‌ಗೆ ಹೋಗಿದ್ದರು. ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದರು. ಇದೀಗ ಪತ್ನಿ ಮೃತಪಟ್ಟಿದ್ದಾರೆ. ನಮ್ಮ ಕುಟುಂಬಕ್ಕೆ ಆಧಾರವಾಗಿದ್ದರು. ಮಕ್ಕಳು ಅನಾಥರಾಗಿದ್ದಾರೆ. ಪತಿಯ ಮೃತದೇಹವನ್ನು ಭಾರತಕ್ಕೆ ತರಲು ನೆರವು ನೀಡಬೇಕು. ನಾವು ಆರ್ಥಿಕವಾಗಿ ಕುಸಿದಿದ್ದೇವೆ.ಇದೇ ಕಾರಣದಿಂದ ಪತಿ ದೂರದ ಇಸ್ರೇಲ್‌ಗೆ ಕೆಲಸಕ್ಕಾಗಿ ಹೋಗಿದ್ದರು. ಆದರೆ ಪರಿಸ್ಥಿತಿ ಹೀಗಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ.

ಮಕ್ಕಳಿಗೆ ಕೆಲಸ ಕೊಡುವಂತೆ ಪತ್ನಿಯ ಮನವಿ

ರವೀಂದ್ರ ಪತ್ನಿ ವಿಜಯಲಕ್ಷ್ಮಿ ಸರ್ಕಾರಕ್ಕೆ ವಿಶೇಷ ಮನವಿ ಮಾಡಿದ್ದಾರೆ. ಪತಿ ಕುಟಂಬಕ್ಕೆ ಆಧಾರವಾಗಿದ್ದರು. ಇದೀಗ ಮಕ್ಕಳಿಗೆ ಕೆಲಸ ಕೊಡಿಸಲು ಸರ್ಕಾರ ನೆರವಾಗಬೇಕು. ಇಲ್ಲದಿದ್ದರೆ ನಮ್ಮ ಕುಟುಂಬ ಬೀದಿ ಪಾಲಾಗಲಿದೆ ಎಂದು ವಿಜಯಲಕ್ಷ್ಮಿ ಮನವಿ ಮಾಡಿಕೊಂಡಿದ್ದಾರೆ.

ಇಸ್ರೇಲ್ ಇರಾನ್‌ನ ಅರಾಕ್ ಭಾರಜಲ ರಿಯಾಕ್ಟರ್ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕ್ಷಿಪಣಿಗಳು ಇಸ್ರೇಲ್‌ನ ದಕ್ಷಿಣದಲ್ಲಿರುವ ಆಸ್ಪತ್ರೆ ಮತ್ತು ಟೆಲ್ ಅವೀವ್ ಸುತ್ತಮುತ್ತಲಿನ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿವೆ.ಖೊಂಡಾಬ್ ಗ್ರಾಮದ ಹೊರವಲಯದಲ್ಲಿರುವ ಅರಾಕ್ ಭಾರಜಲ ಸಂಶೋಧನಾ ರಿಯಾಕ್ಟರ್‌ನ ಕೆಲಸ 2000 ರ ದಶಕದಲ್ಲಿ ಪ್ರಾರಂಭವಾಯಿತು, ಆದರೆ ಇರಾನ್ ಮತ್ತು ವಿಶ್ವ ಶಕ್ತಿಗಳ ನಡುವೆ 2015 ರಲ್ಲಿ ತ್ಯಜಿಸಲಾದ ಪರಮಾಣು ಒಪ್ಪಂದದ ನಿಯಮಗಳ ಅಡಿಯಲ್ಲಿ ಸ್ಥಗಿತಗೊಂಡಿತು.