ಶಿಕ್ಷಕರ ದಿನದಂದು ಬರೀ 60 ರೂಪಾಯಿಯ ಚಾಕೋಲೆಟ್ ಗಿಫ್ಟ್ ಪಡೆದಿದ್ದಕ್ಕೆ ಕೆಲಸದಿಂದ ವಜಾಗೊಂಡ ಶಿಕ್ಷಕಿ!
ಶಿಕ್ಷಕರ ದಿನಾಚರಣೆಯಂದು ವಿದ್ಯಾರ್ಥಿಯಿಂದ ಚಾಕಲೇಟ್ ಉಡುಗೊರೆ ಪಡೆದ ನರ್ಸರಿ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಕೆಲಸ ಕಳೆದುಕೊಂಡ ಘಟನೆ ಚೀನಾದಲ್ಲಿ ನಡೆದಿದೆ. ಈ ಘಟನೆ ನ್ಯಾಯಾಲಯದ ಮೆಟ್ಟಿಲೇರಿದ್ದು, ಶಿಕ್ಷಕಿಯ ಪರವಾಗಿ ತೀರ್ಪು ಬಂದಿದೆ.
ನವದೆಹಲಿ (ಸೆ.13): ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ಹೆತ್ತವರ ನಂತರ ಶಿಕ್ಷಕರು ಅತ್ಯಂತ ಪ್ರಭಾವಶಾಲಿ ವ್ಯಕ್ತಿ. ಅದಕ್ಕಾಗಿಯೇ ನಮ್ಮ ದೇಶದಲ್ಲಿ ಶಿಕ್ಷಕರ ದಿನದಂದು ಶಿಕ್ಷಕರನ್ನು ಗೌರವಿಸಲು ಮತ್ತು ಶಿಕ್ಷಕರಿಗೆ ಉಡುಗೊರೆಗಳನ್ನು ನೀಡಲು ಮಕ್ಕಳು ಖುಷಿ ಪಡುತ್ತಾರೆ. ಆದರೆ, ನಮ್ಮ ನೆರೆಯ ದೇಶ ಚೀನಾದಲ್ಲಿ ಹೀಗಿಲ್ಲ. ಶಿಕ್ಷಕರ ದಿನದಂದು ನಡೆದಿರುವ ಘಟನೆ ಬಹಳ ವಿಚಿತ್ರವಾಗಿದೆ, ಹಾಗೇನಾದರೂ ಭಾರತದಲ್ಲಿ ಇಂಥ ಕಾನೂನು ಇದ್ದಿದ್ದರೆ,ಇಂದು ಬಹುತೇಕ ಶಿಕ್ಷಕರು ಜೈಲಿನಲ್ಲಿಯೇ ಇರ್ತಿದ್ದರು. ವಿಷಯ ಏನಪ್ಪಾ ಅಂದ್ರೆ, ಶಿಕ್ಷಕರ ದಿನಾಚರಣೆಯಂದು ಮಗುವಿನಿಂದ ಚಾಕಲೇಟ್ ಗಿಫ್ಟ್ ಪಡೆದುಕೊಂಡು ಆರೋಪಕ್ಕೆ ನರ್ಸರಿ ಶಾಲೆಯ ಪ್ರಾಂಶುಪಾಲೆಯೊಬ್ಬರು ತಮ್ಮ ಸ್ವಂತ ಕೆಲಸ ಕಳೆದುಕೊಂಡಿದ್ದಾರೆ. ವಿದ್ಯಾರ್ಥಿನಿಯಿಂದ 60 ರೂಪಾಯಿ ಮೌಲ್ಯದ ಚಾಕೊಲೇಟ್ ಪಡೆದುಕೊಂಡಿದ್ದಕ್ಕೆ ಶಿಕ್ಷಕಿಯೊಬ್ಬರು ಕೆಲಸ ಕಳೆದುಕೊಂಡಿದ್ದಾರೆ.
ಚಾಂಗ್‌ಕಿಂಗ್‌ನ ಸಾಂಕ್ಸಿಯಾ ಕಿಂಡರ್‌ಗಾರ್ಟನ್‌ನ ಮುಖ್ಯ ಶಿಕ್ಷಕಿ ವಾಂಗ್‌ಗೆ ಇಂತಹ ದುರದೃಷ್ಟಕರ ಅನುಭವವಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ವಿದ್ಯಾರ್ಥಿಯೊಬ್ಬನಿಂದ ಉಡುಗೊರೆ ಸ್ವೀಕರಿಸಿದ್ದಕ್ಕಾಗಿ ವಾಂಗ್ ಅವರನ್ನು ವಜಾಗೊಳಿಸಲಾಗಿತ್ತು. ನಂತರ, ವಾಂಗ್ ತನ್ನನ್ನು ಅನ್ಯಾಯವಾಗಿ ವಜಾ ಮಾಡಿದ ಶಾಲೆಯ ಆಡಳಿತದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ಶಾಲಾ ಅಧಿಕಾರಿಗಳ ಪ್ರಕಾರ, ವಿದ್ಯಾರ್ಥಿಯಿಂದ ಉಡುಗೊರೆಯನ್ನು ಸ್ವೀಕರಿಸಿದ್ದಕ್ಕಾಗಿ ವಾಂಗ್ ಅನ್ನು ವಜಾ ಮಾಡಲಾಗಿದೆ. ನರ್ಸರಿ ಶಾಲೆಯ ಅಧಿಕಾರಿಗಳು ವಾಂಗ್ ಶಿಕ್ಷಣ ಸಚಿವಾಲಯದ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದಾರೆ. ನಿಯಮದ ಪ್ರಕಾರ ನರ್ಸರಿಯ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಅಥವಾ ಅವರ ಸಂಬಂಧಿಗಳಿಂದ ಯಾವುದೇ ರೀತಿಉ ಉಡುಗೊರೆಯನ್ನು ಸ್ವೀಕರಿಸುವಂತಿಲ್ಲ. ಹಣವನ್ನು ಕೇಳುವಂತಿಲ್ಲ. ಅವರನ್ನು ತಕ್ಷಣವೇ ವಜಾ ಮಾಡಬಹುದು ಎನ್ನಲಾಗಿದೆ. ಆದರೆ ಶಾಲೆಯ ಸಿಸಿಟಿವಿ ದೃಶ್ಯಗಳಲ್ಲಿ, ವಾಂಗ್ ಮಗುವಿನಿಂದ ಚಾಕೊಲೇಟ್ ಬಾಕ್ಸ್ ತೆಗೆದುಕೊಂಡು ಅದನ್ನು ತರಗತಿಯ ಇತರ ಮಕ್ಕಳಿಗೆ ಹಂಚಿಕೊಳ್ಳುತ್ತಿರುವುದು ಕಂಡುಬಂದಿದೆ.
ರಾಧಾಕಿಶನ್ ಧಮಾನಿಯ ಅಗಾಧ ಸಂಪತ್ತನ್ನ ರಕ್ಷಣೆ ಮಾಡ್ತಿರೋದು ಅವರ ಇದೇ ಮೂವರು ಹೆಣ್ಣುಮಕ್ಕಳು!
ನ್ಯಾಯಾಲಯವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ ನ್ಯಾಯಾಲಯ ಇದರಲ್ಲಿ ವಾಂಗ್ ಪರವಾಗಿ ತೀರ್ಪು ನೀಡಿದೆ. ವಾಂಗ್ ಅವರನ್ನು ಶಿಶುವಿಹಾರದಿಂದ ವಜಾಗೊಳಿಸಿರುವುದು ಕಾನೂನುಬಾಹಿರ ಎಂದು ನ್ಯಾಯಾಲಯವು ತಿಳಿಸಿದೆ. ವಿದ್ಯಾರ್ಥಿಯ ಪ್ರೀತಿ ಮತ್ತು ಶಿಕ್ಷಕರ ಮೇಲಿನ ಗೌರವದಿಂದ ಚಾಕೊಲೇಟ್ ನೀಡಲಾಗಿದೆ ಮತ್ತು ವಾಂಗ್ ಅದನ್ನು ಒಪ್ಪಿಕೊಂಡಿರುವುದು ಕಾನೂನುಬಾಹಿರವಲ್ಲ ಎಂದು ನ್ಯಾಯಾಲಯವು ಗಮನಿಸಿದೆ. ನ್ಯಾಯಾಲಯವು ವಾಂಗ್‌ಗೆ ಪರಿಹಾರವನ್ನು ನೀಡುವಂತೆ ಶಿಶುವಿಹಾರದ ಅಧಿಕಾರಿಗಳನ್ನು ಕೇಳಿದೆ.