* ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೇರಿರುವ ತಾಲಿಬಾನ್‌ ಉಗ್ರರು* ಶಿಯಾ ಸೇನಾ ಮುಖಂಡನ ಪುತ್ಥಳಿ ಧ್ವಂಸಗೊಳಿಸಿ ಸೇಡು ತೀರಿಸಿಕೊಂಡ ತಾಲಿಬಾನ್‌* ಶಿಯಾ ಪಂಗಡದ ಸೇನಾ ಮುಖಂಡನಾಗಿದ್ದ ಅಬ್ದುಲ್‌ ಅಲಿ ಮಝಾರಿ

ಕಾಬೂಲ್‌(ಆ.19): ಅಷ್ಘಾನಿಸ್ತಾನದಲ್ಲಿ ಅಧಿಕಾರಕ್ಕೇರಿರುವ ತಾಲಿಬಾನ್‌ ಉಗ್ರರು, 1990ರ ಅಷ್ಘಾನಿಸ್ತಾನ ನಾಗರಿಕ ಯುದ್ಧದ ವೇಳೆ ತಮ್ಮ ವಿರುದ್ಧ ಹೋರಾಟ ನಡೆಸಿದ್ದ ಶಿಯಾ ಪಂಥದ ಸೇನಾ ಮುಖಂಡನೊಬ್ಬನ ಪುತ್ಥಳಿಯನ್ನು ಸ್ಫೋಟಿಸಿ ಧ್ವಂಸಗೊಳಿಸಿದ್ದಾರೆ.

ಶಿಯಾ ಪಂಗಡದ ಸೇನಾ ಮುಖಂಡನಾಗಿದ್ದ ಅಬ್ದುಲ್‌ ಅಲಿ ಮಝಾರಿಯನ್ನು 1995ರಲ್ಲಿ ತಾಲಿಬಾನ್‌ ಉಗ್ರರು ಶಾಂತಿ ಮಾತುಕತೆಗೆ ಕರೆಸಿಕೊಂಡು ಹೆಲಿಕಾಪ್ಟರ್‌ನಿಂದ ಎಸೆದು ಹತ್ಯೆ ಮಾಡಿತ್ತು. ಅಮೆರಿಕದ ಸೇನೆ ತಾಲಿಬಾನಿಗಳ ಆಳ್ವಿಕೆಯನ್ನು ಅಂತ್ಯಗೊಳಿಸಿದ ಬಳಿಕ 2001ರಲ್ಲಿ ಮಝಾರಿ ಪುತ್ಥಳಿಯನ್ನು ಬಮ್ಯಾಮ್‌ ಪ್ರಾಂತ್ಯದಲ್ಲಿ ನಿರ್ಮಾಣ ಮಾಡಲಾಗಿತ್ತು. ಅಲ್ಲದೇ ಮಝಾರಿ ಹುತಾತ್ಮನ ಪಟ್ಟವನ್ನು ನೀಡಲಾಗಿತ್ತು.

ಇದೀಗ ಮತ್ತೊಮ್ಮೆ ಅಧಿಕಾರಕ್ಕೆ ಮರಳಿರುವ ತಾಲಿಬಾನಿಗಳು ಪುತ್ಥಳಿಯನ್ನು ಧ್ವಂಸಗೊಳಿಸಿ ಸೇಡು ತೀರಿಸಿಕೊಂಡಿದ್ದಾರೆ. ಈ ಘಟನೆಯನ್ನು ಬಮ್ಯಾಮ್‌ ಪ್ರಾಂತ್ಯದಲ್ಲಿರುವ ಬುದ್ಧನ ಪ್ರತಿಮೆಯನ್ನು ತಾಲಿಬಾನಿಗಳು ನಾಶಪಡಿಸಿದ್ದಕ್ಕೆ ಹೋಲಿಕೆ ಮಾಡಲಾಗುತ್ತಿದೆ.