ಕ್ಯೂಬಾದ ಗ್ಯಾಂಟನಮೋ ಜೈಲಿನಲ್ಲಿದ್ದ ಕುಖ್ಯಾತ ಉಗ್ರ ಮುಲ್ಲಾ ಅಬ್ದುಲ್‌ ಖಯ್ಯೂಮ್‌ ಝಾಕಿರ್‌  ಅಷ್ಘಾನಿಸ್ತಾನದ ನೂತನ ರಕ್ಷಣಾ ಸಚಿವರನ್ನಾಗಿ ತಾಲಿಬಾನ್‌ ಗ್ರ ಸಂಘಟನೆ ನೇಮಕ ಮಾಡಿದೆ

ಕಾಬೂಲ್‌ (ಆ.27): ಕ್ಯೂಬಾದ ಗ್ಯಾಂಟನಮೋ ಜೈಲಿನಲ್ಲಿದ್ದ ಕುಖ್ಯಾತ ಉಗ್ರ ಮುಲ್ಲಾ ಅಬ್ದುಲ್‌ ಖಯ್ಯೂಮ್‌ ಝಾಕಿರ್‌ನನ್ನು ಅಷ್ಘಾನಿಸ್ತಾನದ ನೂತನ ರಕ್ಷಣಾ ಸಚಿವರನ್ನಾಗಿ ತಾಲಿಬಾನ್‌ ಗ್ರ ಸಂಘಟನೆ ನೇಮಕ ಮಾಡಿದೆ. ಇದು ಅಮೆರಿಕ ಸೇರಿದಂತೆ ವಿಶ್ವದ ಎಲ್ಲಾ ದೇಶಗಳ ತಾವು ಉತ್ತಮ ಸಂಬಂಧ ಹೊಂದಲು ಬಯಸುವುದಾಗಿ ಹೇಳಿದ್ದ ತಾಲಿಬಾನಿಗಳ ಹೇಳಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ.

ತಾಲಿಬಾನ್‌ ಅನುಭವಿ ಕಮಾಂಡರ್‌ ಹಾಗೂ ತಾಲಿಬಾನ್‌ ಸಂಸ್ಥಾಪಕ ಮುಲ್ಲಾ ಓಮರ್‌ನ ಆಪ್ತನಾಗಿದ್ದ ಖಯ್ಯೂಮ್‌ ಝಾಕಿರ್‌ನನ್ನು ಹಂಗಾಮಿ ರಕ್ಷಣಾ ಸಚಿವರನ್ನಾಗಿ ನೇಮಕ ಮಾಡಲಾಗಿದೆ ಎಂದು ತಾಲಿಬಾನ್‌ ಮೂಲಗಳನ್ನು ಉಲ್ಲೇಖಿಸಿ ಅಲ್‌ ಜಝೀರಾ ಸುದ್ದಿ ವಾಹಿನಿ ವರದಿ ಮಾಡಿದೆ.

ಮಹಿಳೆ ಹೊರಬಂದರೆ ಸುರಕ್ಷಿತಳಲ್ಲ, ಸತ್ಯ ಒಪ್ಪಿಕೊಂಡ ತಾಲಿಬಾನ್‌ಗಳಿಂದ ವರ್ಕ್ ಫ್ರಮ್ ಹೋಮ್‌ಗೆ ಸೂಚನೆ!

ಝಾಕಿರ್‌ನನ್ನು ಅಮೆರಿಕ 2001ರಲ್ಲಿ ಬಂಧಿಸಿ, ವಿಶ್ವದ ಕುಖ್ಯಾತ ಉಗ್ರರನ್ನು ಬಂಧಿಸಿಡುವ ಮತ್ತು ಉಗ್ರವಾದ ಶಿಕ್ಷೆಗೆ ಕುಖ್ಯಾತಿ ಹೊಂದಿರುವ ಗ್ವಾಂಟನಮೋ ಜೈಲಿನಲ್ಲಿಟ್ಟಿತ್ತು. ಬಳಿಕ 2007ರಲ್ಲಿ ಸ್ವತಃ ಅಮೆರಿಕ ಸರ್ಕಾರವೇ ಆತನನ್ನು ಅಷ್ಘಾನಿಸ್ತಾನ ಸರ್ಕಾರದ ವಶಕ್ಕೆ ಒಪ್ಪಿಸಲಾಯಿತು. ತಾಲಿಬಾನ್‌ ಆಕ್ರಮಣದ ನಂತರ ಸ್ವತಂತ್ರ್ಯನಾದ ಝಾಕಿರ್‌ನನ್ನು ತಾಲಿಬಾನ್‌ ಉಗ್ರಗಾಮಿ ಪಡೆ ಆಫ್ಘನ್‌ನ ರಕ್ಷಣಾ ಸಚಿವನನ್ನಾಗಿ ನೇಮಕ ಮಾಡಿದೆ.

ಕಾಬೂಲ್‌ ವಶಪಡಿಸಿಕೊಂಡ ನಂತರ ತಾಲಿಬಾನ್‌ ನೂತನ ಸರ್ಕಾರ ರಚನೆ ಮಾಡಲು ಹಲವು ನಾಯಕರನ್ನು ನೇಮಕ ಮಾಡಿದೆ. ಹಾಜಿ ಮೊಹಮದ್‌ನನ್ನು ಇದ್ರಿಸ್‌ರನ್ನು ಅಷ್ಘಾನಿಸ್ತಾನ ಬ್ಯಾಂಕ್‌ನ ಮುಖ್ಯಸ್ಥನನ್ನಾಗಿ, ಗುಲ್‌ ಅಘಾನನ್ನು ಹಣಕಾಸು ಸಚಿವರಾಗಿ ನೇಮಕ ಮಾಡಲಾಗಿದೆ.