* ಡ್ರಗ್ಸ್ ಬೆಳೆಯುವುದಕ್ಕೆ ಅಫ್ಘನ್ ನಲ್ಲಿ ನಿಷೇಧ* ದೇಶ ತಾಲೀಬಾನಿಗಳ ವಶದಲ್ಲಿದೆ* ನಿಯಮ ಉಲ್ಲಂಘಿಸಿದರೆ ಷರಿಯಾ ಕಾನೂನಿನ ಪ್ರಕಾರ ಶಿಕ್ಷೆ
ಪೇಶಾವರ(ಏ. 03) ವಿಶ್ವದ ಅತಿದೊಡ್ಡ ಅಫೀಮು ಉತ್ಪಾದಕ ಅಫ್ಘಾನಿಸ್ತಾನದಲ್ಲಿ(Afghanistan) ತಾಲಿಬಾನ್ (Taliban) ಮಾದಕ ದ್ರವ್ಯಗಳ (Drugs)ಕೃಷಿಯನ್ನು ನಿಷೇಧಿಸುವುದಾಗಿ ಭಾನುವಾರ ಘೋಷಿಸಿದೆ.
"ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ಸರ್ವೋಚ್ಚ ನಾಯಕನ ತೀರ್ಪಿನ ಪ್ರಕಾರ, ತಾಲಿಬಾನ್‌ನ ಸರ್ವೋಚ್ಚ ನಾಯಕ ಹೈಬತುಲ್ಲಾ ಅಖುಂಡ್‌ಜಾದಾ ಇಂದಿನಿಂದ ಮಾದಕ ದೃವ್ಯ ಬೆಳೆಯುವುದನ್ನು ದೇಶಾದ್ಯಂತ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಎಲ್ಲಾ ಆಫ್ಘನ್ನರಿಗೆ ತಿಳಿಸಲಾಗಿದೆ.
"ಯಾರಾದರೂ ಸುಗ್ರೀವಾಜ್ಞೆಯನ್ನು ಉಲ್ಲಂಘಿಸಿದರೆ, ಬೆಳೆಯನ್ನು ತಕ್ಷಣವೇ ನಾಶಪಡಿಸಲಾಗುವುದು ಮತ್ತು ಉಲ್ಲಂಘಿಸುವವರನ್ನು ಷರಿಯಾ ಕಾನೂನಿನ (Law) ಪ್ರಕಾರ ಶಿಕ್ಷೆ ನೀಡಲಾಗುವುದು" ಎಂದು ಆದೇಶವನ್ನು ಕಾಬೂಲ್‌ನಲ್ಲಿ (Kabul)ಆಂತರಿಕ ಸಚಿವಾಲಯವು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದೆ.
ಪೊಲೀಸರು ಮೊಬೈಲ್ ಕಸಿದು ವಾಟ್ಸಪ್ ನೋಡಿದ್ರೆ ಏನ್ ಮಾಡಬೇಕು? ಆಯುಕ್ತರಿಗೆ ತಿಳಿಸಿ
ಇತರ ಮಾದಕ ವಸ್ತುಗಳ (Drugs) ಉತ್ಪಾದನೆ, ಬಳಕೆ ಅಥವಾ ಸಾಗಣೆಯನ್ನೂ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಡ್ರಗ್ ನಿಯಂತ್ರಣವು ಇಸ್ಲಾಮಿಸ್ಟ್ ಗುಂಪಿನ ಅಂತರರಾಷ್ಟ್ರೀಯ ಸಮುದಾಯದ ಪ್ರಮುಖ ಬೇಡಿಕೆಯಾಗಿತ್ತು. ಕಳೆದ ವರ್ಷದ ಆಗಸ್ಟ್‌ನಲ್ಲಿ ದೇಶವನ್ನು ತಾಲೀಬಾನಿಗಳು ವಶಕ್ಕೆ ಪಡೆದುಕೊಂಡಿದ್ದರು. ಅಂತಾರಾಷ್ಟ್ರೀಯ ಹಣಕಾಸು ನೆರವು ನಿಂತುಹೋಗುತ್ತದೆ ಎಂಬ ಕಾಣಕ್ಕೆ ತಾಲೀಬಾನಿಗಳು ತಮ್ಮ ವರ್ತನೆಯಲ್ಲಿ ಕೊಂಚ ಬದಲಾವಣೆ ತಂದುಕೊಂಡಿದ್ದಾರೆ. ಯಾವ ಕಾರಣ ಎಂದು ಸ್ಷಷ್ಟಪಡಿಸದೇ ಇದ್ದರೂ ಹೊಲಗಳಲ್ಲಿ Poppy ಬೆಳೆಯುವದನ್ನು ನಿಷೇಧಿಸಲಾಗಿದೆ.
ಅಫ್ಘಾನಿಸ್ತಾನದ ಅಫೀಮು ಉತ್ಪಾದನೆ 1.4 ಶತಕೋಟಿ ಡಾಲರ್ ಮೌಲ್ಯದ್ದಾಗಿದೆ ಎಂದು ಅಂದಾಜಿಸಿದೆ. ದೇಶದ ಭೀಕರ ಆರ್ಥಿಕ ಪರಿಸ್ಥಿತಿಯು ಆಗ್ನೇಯ ಪ್ರಾಂತ್ಯಗಳ ನಿವಾಸಿಗಳು ಅಕ್ರಮವಾಗಿ ಬೆಳಖೆ ಬೆಳೆಯುವುದರಲ್ಲಿ ತೊಡಗುವಂತೆ ಮಾಡಿತು. ಗೋಧಿಯಂತಹ ಕಾನೂನು ಬೆಳೆಗಳಿಗಿಂತ ವೇಗವಾಗಿ ಮತ್ತು ಹೆಚ್ಚಿನ ಆದಾಯ ಗಳಿಸಲು ಜನರು ಇಂಥ ಕೆಲಸಕ್ಕೆ ಇಳಿದರು.
ತಾಲೀಬಾನ್ ರಾಷ್ಟ್ರದಲ್ಲಿ ಜನ ಆಹಾರಕ್ಕಾಗಿ ಹೋರಾಟಕ್ಕೆ ಇಳಿಯುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆಹಾರಕ್ಕಾಗಿ, ಪುಡಿಗಾಸಿಗಾಗಿ ಹೆಣ್ಣು ಮಕ್ಕಳಮನ್ನೇ ಮಾರಾಟ ಮಾಡಿದ್ದರು.
ಅಮೆರಿಕ ವಶದಲ್ಲಿದ್ದ ದೇಶವನ್ನು ತಾಲೀಬಾನಿಗಳು ವಶಪಡಿಸಿಕೊಂಡಿದ್ದರು. ತಾವು ಮೊದಲಿನಂತೆ ಇಲ್ಲ ಬದಲಾಗಿದ್ದೇವೆ ಎಂದು ಹೇಳಿದ್ದರು. ಒಟ್ಟಿನಲ್ಲಿ ಇಡೀ ಜಗತ್ತು ಆ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಕಡೆ ನೋಡಿತ್ತು.
ಗಡ್ಡ ಬಿಡುವುದು ಕಡ್ಡಾಯ: ಅಫ್ಘಾನಿಸ್ತಾನ ತಾಲಿಬಾನ್ ಸರ್ಕಾರ, ತನ್ನ ನೌಕರರಿಗೆ ಹೊಸ ವಸ್ತ್ರ ಸಂಹಿತೆ ಜಾರಿಗೊಳಿಸಿದ್ದು , ಆ ಪ್ರಕಾರ ಪುರುಷ ನೌಕರರು ಗಡ್ಡವಿಲ್ಲದೆ ನೌಕರಿಗೆ ಬರುವಂತಿಲ್ಲ ಎಂದು ಆದೇಶ ಹೊರಡಿಸಿತ್ತು.
ಜೊತೆಗೆ ಅವರಿಗೆ ಪಾಶ್ಚಾತ್ಯ ಉಡುಗೆಗಳಿಗೂ ಕಡಿವಾಣಹಾಕಲಾಗಿದ್ದು, ತಲೆಗೆ ಟೋಪಿ, ಉದ್ದನೆಯ ಪೈಜಾಮ ಮತ್ತು ಪ್ಯಾಂಟ್ ಬಳಸುವಂತೆ ಸೂಚನೆ ನೀಡಿದೆ. ಇಸ್ಲಾಮಿಕ್ ಧರ್ಮದ ಪ್ರಕಾರ ಪ್ರತಿದಿನ 6 ಬಾರಿ ಪ್ರಾರ್ಥನೆ ಮಾಡುವಂತೆ ಆದೇಶಿಸಲಾಗಿದೆ. ಕಾನೂನನ್ನು ಪಾಲಿಸದಿದ್ದರೆ ಅಂತಹ ನೌಕರರಿಗೆ ಕಚೇರಿ ಒಳಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ಹೇಖಿದೆ.
ಪ್ರಜಾಪ್ರಭುತ್ವ ಸರ್ಕಾರ ಪತನಗೊಳಿಸಿ ಅಧಿಕಾರಕ್ಕೆ ಬಂದ ವೇಳೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವುದಾಗಿ ಬಡಾಯಿ ಕೊಚ್ಚಿಕೊಂಡಿದ್ದ ತಾಲಿಬಾನ್ ನಂತರ ವರಸೆ ಬದಲಾಯಿಸಿತ್ತು. ಆದರೆ ಅಲ್ಲಿನ ಹೆಣ್ಣು ಮಕ್ಕಳೆ ತಿರುಗಿ ಬಿದ್ದ ಮೇಲೆ ಬುದ್ಧಿ ಕಲಿತಿತ್ತು.
ರಷ್ಯಾ-ಉಕ್ರೇನ್ ಯುದ್ಧ: ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧ ಆರಂಭವಾಗಿ ಸರಿ ಸುಮಾರು ಒಂದು ತಿಂಗಳು ಕಳೆದಿದೆ. ಭಾರತ ಸೇರಿ ಇಡೀ ಪ್ರಪಂಚದ ಮೇಲ;ೆ ಪರಿಣಾಮ ಬೀರಿದೆ. ಅಡುಗೆ ಎಣ್ಣೆ ಆಮದಿನ ಮೇಲೆ ಪರಿಣಾಮ ಉಂಟು ಮಾಡಿದೆ,. ಎರಡು ರಾಷ್ಟ್ರಗಳು ಹಿಂದೆ ಸರಿಯುವ ಮಾತೇ ಇಲ್ಲ ಎನ್ನುತ್ತಿವೆ. ವಿರ್ಶವದ ಅನೇಕ ರಾಷ್ಟ್ರಗಳು ಬಲಾಡ್ಯ ರಷ್ಯಾದ ವಿರುದ್ದ ದಿಗ್ಭಂಧನ ಸಮರ ಸಾರಿವೆ.
