ಸಿಡ್ನಿಯ ತಾಪಮಾನ ವಿಶ್ವದಲ್ಲೇ ಅಧಿಕ!

 ಸಿಡ್ನಿ ಹೊರವಲಯದ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಕಾಡು ನಾಶವಾಗಿದ್ದು, ಭಾನುವಾರ 48.9 ಡಿ.ಸೆಲ್ಷಿಯಸ್‌ ಉಷ್ಣಾಂಶ ದಾಖಲಾಗಿದೆ.

Sydney hits its highest temperature recorded

ಕ್ಯಾನ್‌ಬೆರಾ [ಜ.06]: ಆಸ್ಪ್ರೇಲಿಯಾದ ವಿವಿಧ ರಾಜ್ಯಗಳಲ್ಲಿ ಕಾಣಿಸಿಕೊಂಡಿರುವ ಭಾರೀ ಕಾಡ್ಚಿಚ್ಚಿನ ರೌದ್ರಾವತಾರ ಮುಂದುವರೆದಿದೆ. ಸಿಡ್ನಿ ಹೊರವಲಯದ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಕಾಡು ನಾಶವಾಗಿದ್ದು, ಭಾನುವಾರ 48.9 ಡಿ.ಸೆಲ್ಷಿಯಸ್‌ ಉಷ್ಣಾಂಶ ದಾಖಲಾಗಿದೆ. ಇದು ಭಾನುವಾರ ವಿಶ್ವದ ಯಾವುದೇ ಪ್ರದೇಶದಲ್ಲಿ ದಾಖಲಾದ ಗರಿಷ್ಣ ಉಷ್ಣಾಂಶವಾಗಿದೆ.

ಸೆಪ್ಟೆಂಬರ್‌ನಲ್ಲಿ ಆರಂಭವಾಗಿದ್ದ ಕಾಡ್ಗಿಚ್ಚಿನ ಬೆಂಕಿಯ ಕೆನ್ನಾಲಿಗೆಗಳು ಇದುವರೆಗೆ 45 ಲಕ್ಷ ಹೆಕ್ಟೇರ್‌ ಅರಣ್ಯವನ್ನು ಸುಟ್ಟು ಕರಕಲಾಗಿಸಿದೆ. ಬೆಂಕಿಗೆ 25 ಜನ ಬಲಿಯಾಗಿದ್ದು, ಸಾವಿರಾರು ಪ್ರಾಣಿ, ಪಕ್ಷಗಳು ಪ್ರಾಣ ಕಳೆದುಕೊಂಡಿವೆ.

ಬೆಂಕಿಯ ಕೆನ್ನಾಲಿಗೆಗಳು 2000ಕ್ಕೂ ಹೆಚ್ಚು ಮನೆಗಳನ್ನು ಬಲಿ ಪಡೆದಿದೆ. 2000ಕ್ಕೂ ಹೆಚ್ಚು ಮನೆಗಳು ಬೆಂಕಿಗೆ ಭಸ್ಮವಾಗಿದೆ.

ಕಾಡಿಗೆ ತಗುಲಿದ್ದ ಬೆಂಕಿ ನಂದಿಸಲು ತೆರಳಿದ ಮಾಜಿ ಪ್ರಧಾನಿ, ಮನಗೆದ್ದ ಚಿತ್ರಗಳು!..

ಆಸ್ಪ್ರೇಲಿಯಾದ 6 ರಾಜ್ಯಗಳಲ್ಲಿ 290ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಕಾಡ್ಚಿಚ್ಚು ಹಬ್ಬಿದ್ದು, ಸಾವಿರಾರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ವಿವಿಧ ಭದ್ರತಾ ಪಡೆಗಳು ಹಗಲಿರುಳು ಶ್ರಮಿಸುತ್ತಿದ್ದರೂ, ಬೆಂಕಿ ತಹಬದಿಗೆ ಬಂದಿಲ್ಲ.

Latest Videos
Follow Us:
Download App:
  • android
  • ios