ಕ್ಯಾನ್‌ಬೆರಾ[ಡಿ.22]: ಆಸ್ಟೇಲಿಯಾದ ಮಾಜಿ ಪ್ರಧಾನಿ ಟಾನಿ ಎಬಾಟ್ ರವರ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಅವರು ಫೈರ್ ಫೈಟರ್ ಅಂದರೆ ಅಗ್ನಿಶಾಮಕ ದಳದ ಸಮವಸ್ತ್ರದಲ್ಲಿ ಕಂಡು ಬಂದಿದ್ದಾರೆ. 

ವರದಿಯನ್ವಯ ಟೋನಿ ಎಬಾಟ್ ಶುಕ್ರವಾರದಂದು ದಕ್ಷಿಣ ಸಿಡ್ನಿಯ ಕಾಡಿಗೆ ತಗುಲಿದ ಬೆಂಕಿ ನಂದಿಸುವ ಕಾರ್ಯಾಚರಣೆಗೆ ತೆರಳಿದ್ದರು. ಬೆಂಕಿ ನಂದಿಸಲು ಸಗ್ನಿಶಾಮಕ ದಳದ ಸಿಬ್ಬಂದಿ ಸಹಾಯ ಮಾಡುವ ಸಂದರ್ಭದಲ್ಲಿ ಈ ಫೊಟೋ ಕ್ಲಿಕ್ಕಿಸಲಾಗಿದೆ ಎನ್ನಲಾಗಿದೆ. ಟೋನಿ ಎಬಾಟ್ ಕಳೆದ 1 ದಶಕದಿಂದ 'ರೂಲರ್ ಫೈಯರ್ ಸರ್ವಿಸ್ ' ಜೊತೆ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

2 ವರ್ಷ ಆಸ್ಟ್ರೇಲಿಯಾದ ಪಿಎಂ ಆಗಿ ಸೇವೆ

62 ವರ್ಷದ ಎಬಾಟ್ ಬೆಂಕಿ ನಂದಿಸುತ್ತಿದ್ದ ವೇಳೆ, ಅವರ ಅಭಿಮಾನಿಗಳು ಸೆಲ್ಫೀಗಾಗಿ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋಗಳೇ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿವೆ. ಟೋನಿ ಎಬಾಟ್ 2013ರಿಂದ 2015ರವರೆಗೆ ಆಸ್ಟ್ರೇಲಿಯಾದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.