ಈಜಿಪ್ಟ್‌ (ಏ.04): ಜಗತ್ಪ್ರಸಿದ್ಧ ಸೂಯೆಜ್‌ ಕಾಲುವೆಯ ಹೂಳಿನಲ್ಲಿ ಸಿಲುಕಿ ಬಾರೀ ಟ್ರಾಫಿಕ್‌ ಜಾಮ್‌ ಸೃಷ್ಟಿಸಿ, ಅಂತಾರಾಷ್ಟ್ರೀಯ ಸರಕು ಸಾಗಣೆಗೆ ವ್ಯತ್ಯಯ ತಂದೊಡ್ಡಿದ್ದ ಜಪಾನ್‌ ಮೂಲದ ದೈತ್ಯ ಎವರ್‌ ಗಿವನ್‌ ಹಡನಿಂದ ಉಂಟಾದ ನಷ್ಟಕ್ಕೆ ಈಜಿಪ್ಟ್‌ ಸರ್ಕಾರ 7337 ಕೋಟಿ ರು.(1 ಬಿಲಿಯನ್‌ ಡಾಲರ್‌ ) ಪರಿಹಾರ ಕೇಳುವ ಸಾಧ್ಯತೆ. 

ಸಂಚಾರ ಮಾರ್ಗ ಶುಲ್ಕ, ಹಡಗನ್ನು ಹೂಳಿನಿಂದ ಮೇಲೆತ್ತುವಾಗ ಸಮುದ್ರಮಾರ್ಗಕ್ಕಾದ ಹಾನಿ ಮತ್ತು ಅದಕ್ಕೆ ಬಳಸಿದ ಸಾಧನಗಳು ಹಾಗೂ ಕಾರ್ಮಿಕರ ಶುಲ್ಕ ಇತ್ಯಾದಿಗಳನ್ನು ಪರಿಗಣಿಸಿ 7337 ಕೋಟಿ ರು. ಪರಿಹಾರ ಕೇಳುವ ಸಾಧ್ಯತೆ ಇದೆ ಎಂದು ಕಾಲುವೆಯ ಅಧಿಕಾರಿಗಳು ತಿಳಿಸಿದ್ದಾರೆ. 

ಸೂಯೆಜ್ ಕಾಲುವೆ ಬಂದ್ :ಭಾರೀ ಹೊಡೆತ-ಕಾದು ನಿಂತ ಹಡಗುಗಳು

ಸುಮಾರು 400 ಮೀಟರ್‌ ಉದ್ದದ ಎವರ್‌ ಗಿವನ್‌ ಹಡಗು ಒಂದು ವಾರದಿಂದ ಸೂಯೆಜ್‌ ಕಾಲುವೆಗೆ ಅಡ್ಡಲಾಗಿ ನಿಂತಿದ್ದರಿಂದ ಸುಮಾರು 420ಕ್ಕೂ ಹೆಚ್ಚು ಹಡಗುಗಳು ಕಾಲುವೆ ದಾಟಲು ಆಗದೆ ಕಾಯುವಂತಾಗಿತ್ತು.