ಸೂಯೆಜ್‌ (ಮಾ.28): ಸೂಯೆಜ್‌ ಕಾಲುವೆಯಲ್ಲಿ ಬೃಹತ್‌ ಸರಕು ಸಾಗಣೆ ಹಡುಗು ಸಿಕ್ಕಿಹಾಕಿಕೊಂಡು 5 ದಿನಗಳು ಕಳೆದರೂ ಆ ಹಡಗನ್ನು ತೆರವುಗೊಳಿಸಲು ಸಾಧ್ಯವಾಗಿಲ್ಲ. ಮಂಗಳವಾರದಂದು ಚಂಡಮಾರುತಕ್ಕೆ ಸಿಲುಕಿ ‘ಎವರ್‌ ಗೀವನ್‌’ ಹಡಗು ಸೂಯೆಜ್‌ ಕಾಲುವೆ ಹೂಳಿನಲ್ಲಿ ಸಿಕ್ಕಿಕೊಂಡು ಅಡ್ಡಲಾಗಿ ನಿಂತುಕೊಂಡಿದೆ. ಇದೇ ವೇಳೆ ಹಡಗಿನ ತೆರವು ಕಾರ್ಯಾಚರಣೆಗೆ ಬೋಸ್ಕಲಿಸ್‌ ಕಂಪನಿಯ ನೆರವನ್ನು ಪಡೆದುಕೊಳ್ಳಲಾಗಿದೆ.

ಭಾರವಾದ ಟಗ್‌ಬೋಟ್‌ಗಳು, ಹೂಳೆತ್ತುವಿಕೆ ಮತ್ತು ಸಮುದ್ರದ ಉಬ್ಬರವನ್ನು ಬಳಸಿಕೊಂಡು ಹಡಗನ್ನು ನೀರಿಗೆ ತಳ್ಳುವ ಯತ್ನ ಮಾಡಲಾಗುತ್ತಿದ್ದು, ಇನ್ನು ಎರಡು ಮೂರು ದಿನಗಳಲ್ಲೇ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವ ವಿಶ್ವಾಸವಿದೆ. ಒಂದು ವೇಳೆ ಇದರಿಂದಲೂ ಹಡಗನ್ನು ತೆರವುಗೊಳಿಸಲು ಸಾಧ್ಯವಾಗದೇ ಇದ್ದರೆ, ಹಡಗಿನಲ್ಲಿ ತುಂಬಲಾಗಿರುವ ಸಾವಿರಾರು ಕಂಟೇನರ್‌ಗಳನ್ನು ಕೆಳಗೆ ಇಳಿಸಿ ಹಡಗನ್ನು ನೀರಿಗೆ ತಳ್ಳಲು ಯೋಜಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಸಿಕ್ಕಿಬಿದ್ದ ಹಡಗು, ಸೂಯೆಜ್ ಕಾಲುವೆಯಲ್ಲಿ ಟ್ರಾಫಿಕ್ ಜಾಮ್! .

ಇದರಿಂದ 73000 ಕೋಟಿ ನಷ್ಟವಾಗಿದೆ. 300 ಹಡಗುಗಳ ಸಂಜಾರ ನಿಂತಿದೆ. 

ಕಳೆದ ಐದು ದಿನಗಳಿಂದ ಕಾಲುವೆ ಸ್ಥಗಿತಗೊಂಡಿದ್ದರಿಂದ ಮೆಡಿಟರೇನಿಯನ್‌ ಸಮುದ್ರ ಮತ್ತು ಕೆಂಪು ಸಮುದ್ರದಲ್ಲಿ ನೂರಾರು ಸರಕು ಸಾಗಣೆ ಹಡಗುಗಳು ಸಾಲುಗಟ್ಟಿನಿಲ್ಲುವ ಪರಿಸ್ಥಿತಿ ತಲೆದೋರಿದೆ.