ಲಂಡನ್[ಫೆ.14]: ನೀವು ಯಾವತ್ತಾದರೂ ಇಲಿಗಳು ಜಗಳವಾಡುವುದನ್ನು ಕಂಡಿದಿದ್ದೀರಾ? ಚೂಂ.. ಚೂಂ.. ಚೂಂ... ಎಂದು ಕೂಗುತ್ತಾ ಜಗಳವಾಡುವ ಇಲಿಗಳ ಫೋಟೋ ಒಂದು ಸದ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಫೋಟೋ ಸೆರೆ ಹಿಡಿದ ವ್ಯಕ್ತಿಗೆ Wildlife Photographer Of The Year ಸನ್ಮಾನ ಲಭಿಸಿದೆ.

ಇಲಿಗಳ ಈ ಜಗಳವಾಡುವ ಫೋಟೋ ಹಿಡಿದ ಫೋಟೋಗ್ರಾಫರ್ ಹೆಸರು Sam Rowley. ಸದ್ಯ ಈ ಫೋಟೋ Lumix People's Choice Awardಗೂ ಆಯ್ಕೆಯಾಗಿದೆ. ಈ ಸ್ಪರ್ಧೆಗೆ ಬರೋಬ್ಬರಿ 42 ಸಾವಿರ ಜನರು ಫೋಟೋಗಳನ್ನು ಕಳುಹಿಸಿದ್ದು, ಕೊನೆಯ 25 ಅತ್ಯುತ್ತಮ ಫೋಟೋಗಳಲ್ಲಿ ಇದು ಸ್ಥಾನ ಪಡೆದುಕೊಂಡಿತ್ತು.

ತಿಂಡಿಗಾಗಿ ನಡೆಯುತ್ತಿತ್ತು ಜಗಳ

ಇದು ಲಂಡನ್ ನ ಅಂಡರ್ ಗ್ರೌಂಡ್ ಸ್ಟೇಷನ್ ನಲ್ಲಿ ಸೆರೆ ಹಿಡಿದ ಫೋಟೋ ಆಗಿದೆ. ವಾಸ್ತವವಾಗಿ ಈ ಎರಡೂ ಇಲಿಗಳು ತಿಂಡಿಗಾಗಿ ಜಗಳವಾಡುತ್ತಿದ್ದವು. ಹೀಗಾಘೇ ಈ ಅಪರೂಪದ ಫೋಟೋಗೆ ಅವರು Wildlife Photographer Of The Year ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಫೋಟೋಗಳಿಗೂ ಮನ್ನಣೆ

ಈ ಸ್ಪರ್ಧೆಯಲ್ಲಿ, ಈ ಫೋಟೋಗಳನ್ನು Highly Recommended ಫೋಟೋ ಲಿಸ್ಟ್ ನಲ್ಲಿ ಇರಿಸಲಾಗಿದೆ.