* ಮಹಿಳಾ ಪೌರ ನೌಕ​ರರು ಮನೆಯಲ್ಲೇ ಇರಿ: ಆದೇ​ಶ* ಈಗ ಮಹಿಳಾ ಪೌರ​ಕಾ​ರ್ಮಿ​ಕ​ರಿಗೆ ತಾಲಿ​ಬಾನ್‌ ನಿರ್ಬಂಧ!

ಕಾಬೂಲ್‌(ಸೆ.20): ಇತ್ತೀಚೆಗಷ್ಟೇ ಅಷ್ಘಾನಿಸ್ತಾನದಲ್ಲಿ ಮಹಿಳಾ ಕಲ್ಯಾಣ ಸಚಿವಾಲಯವನ್ನೇ ಸ್ಥಗಿತಗೊಳಿಸಿದ ತಾಲಿಬಾನ್‌ ಆಡಳಿತ ಇದೀಗ, ಆಫ್ಘನ್‌ ರಾಜಧಾನಿ ಕಾಬೂಲ್‌ ನಗರದ ಪೌರ ಕಾರ್ಮಿಕರು ಕೆಲಸಕ್ಕೆ ಬಾರದೆ ಮನೆಯಲ್ಲೇ ಇರುವಂತೆ ಸೂಚಿಸಿದೆ. ತನ್ಮೂಲಕ ಈ ಹಿಂದೆ ಮಹಿಳೆಯರಿಗೂ ತಮ್ಮ ಆಡಳಿತದಲ್ಲಿ ಸಮಾನ ಅವಕಾಶ ನೀಡಲಾಗುತ್ತದೆ ಎಂಬ ವಾಗ್ದಾನವನ್ನು ತಾಲಿಬಾನ್‌ ಮರೆತಂತಾಗಿದೆ.

ಆದಾಗ್ಯೂ, ಪುರುಷರನ್ನು ನೇಮಕ ಮಾಡಲಾ​ಗ​ದ ಸ್ಥಳಗಳಲ್ಲಿ ಮಾತ್ರವೇ ಮಹಿಳಾ ಪೌರ ಸಿಬ್ಬಂದಿ ಕೆಲಸಕ್ಕೆ ಹಾಜರಾಗಬಹುದು ಎಂದು ಕಾಬೂಲ್‌ ನಗರದ ಹಂಗಾಮಿ ಮೇಯರ್‌ ಸ್ಪಷ್ಟ​ಪ​ಡಿ​ಸಿ​ದ್ದಾ​ರೆ.

ಅಲ್ಲದೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಕೆಲ ದಿನಗಳ ಕಾಲ ಶಾಲೆಗೆ ಮರಳದಂತೆ ಸೂಚಿಸಲಾಗಿದೆ. ದೇಶದಲ್ಲಿ ಇನ್ನು ಮುಂದೆ ಲಿಂಗ ಆಧಾರಿತವಾದ ಶಿಕ್ಷಣ ಅಳವಡಿಸಿಕೊಳ್ಳಲಾಗುತ್ತದೆ. ಇಸ್ಲಾಮಿಕ್‌ ವಸ್ತ್ರಸಂಹಿತೆಯನ್ನು ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಮಹಿಳಾ ವಿವಿಗಳಿಗೆ ಸೂಚಿಸಲಾಗಿದೆ.

1990ರಲ್ಲೂ ಆಡಳಿತ ನಡೆಸಿದ್ದ ತಾಲಿಬಾನಿಗಳು ಯುವತಿಯರು ಮತ್ತು ಮಹಿಳೆಯರು ಶಾಲಾ-ಕಾಲೇಜುಗಳು ಮತ್ತು ಕೆಲಸಕ್ಕೆ ಹಾಗೂ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಳ್ಳದಂತೆ ಕಠಿಣ ನಿರ್ಬಂಧ ಹೇರಿತ್ತು.