ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರ, ಪುಟಿದೇಳಲಿಲ್ಲ ಸರ್ಕಾರ ಶ್ರೀಲಂಕಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ರಾಜಪಕ್ಸೆ ಸರ್ಕಾರದ ವಿರುದ್ಧ ತೀವ್ರಗೊಂಡ ಪ್ರತಿಭಟನೆ  

ಕೊಲೊಂಬೊ(ಮೇ.09): ಆರ್ಥಿಕ ಸಂಕಷ್ಟ, ರಾಜಕೀಯ ಬಿಕ್ಕಟ್ಟು, ಪ್ರತಿಭಟನೆಗಳಿಂದ ಹೈರಾಣಾಗಿರುವ ಶ್ರೀಲಂಕಾ ಹೆಜ್ಜೆ ಹೆಜ್ಜೆಗೂ ಹಿನ್ನಡೆ ಅನುಭವಿಸುತ್ತಿದೆ. ಸರ್ಕಾರದ ವಿರುದ್ದ ಜನರ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಶ್ರೀಲಂಕಾ ಪ್ರಧಾನಿ ಮಹೀಂದ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ

ಶ್ರೀಲಂಕಾದಲ್ಲಿನ ಪರಿಸ್ಥಿತಿಗೆ ಸರ್ಕಾರವೇ ನೇರ ಹೊಣೆ ಎಂದು ಪ್ರತಿಭಟನೆ ನಡೆಯುತ್ತಲೇ ಇದೆ. ವಿಪಕ್ಷಗಳು ಸೇರಿ ನಾಗರೀಕರು ಪ್ರಧಾನಿ ಹಾಗೂ ಅಧ್ಯಕ್ಷರ ರಾಜೀನಾಮೆಗೆ ಒತ್ತಡ ಹೆಚ್ಚಾಗಿತ್ತು. ಕಳೆದ ತಿಂಗಳಿನಿಂದ ರಾಜೀನಾಮೆ ಮಾತನ್ನು ತಳ್ಳಿ ಹಾಕಿದ್ದ ಮಹೀಂದ ರಾಜಪಕ್ಸೆ ಇದೀಗ ದಿಢೀರ್ ರಾಜೀನಾಮೆ ನೀಡಿದ್ದಾರೆ. 

ಲಂಕಾದಲ್ಲಿ ಎಮರ್ಜೆನ್ಸಿ, ರಾತ್ರೋರಾತ್ರಿ ಸಚಿವರ ಸಾಮೂಹಿಕ ಪದತ್ಯಾಗ!

ಇಂದು ಬೆಳಗ್ಗೆ ಅಧ್ಯಕ್ಷ ಗೊಟಬಯ ರಾಜಪಕ್ಸೆ ನಿವಾಸ ಎದರು ಪ್ರತಿಭಟನೆ ತೀವ್ರಗೊಂಡಿತ್ತು. ಇದರ ಬೆನ್ನಲ್ಲೇ ಮಹೀಂದ ರಾಜಪಕ್ಸೆ ರಾಜೀನಾಮೆ ನೀಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಪರಿಣಾಮ ಹಲವೆಡೆ ಕರ್ಫ್ಯೂ ಹೇರಲಾಗಿದೆ. ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿದೆ. ಮಹೀಂದ ರಾಜಪಕ್ಸೆ ಜೊತೆಗೆ ಶ್ರೀಲಂಕಾ ಆರೋಗ್ಯ ಸಚಿವ ಫ್ರೋ.ಚನ್ನ ಜಯಸುಮನಾ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ

ಕೊಲೊಂಬೊ(ಮೇ.09): ಆರ್ಥಿಕ ಸಂಕಷ್ಟ, ರಾಜಕೀಯ ಬಿಕ್ಕಟ್ಟು, ಪ್ರತಿಭಟನೆಗಳಿಂದ ಹೈರಾಣಾಗಿರುವ ಶ್ರೀಲಂಕಾ ಹೆಜ್ಜೆ ಹೆಜ್ಜೆಗೂ ಹಿನ್ನಡೆ ಅನುಭವಿಸುತ್ತಿದೆ. ಸರ್ಕಾರದ ವಿರುದ್ದ ಜನರ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಶ್ರೀಲಂಕಾ ಪ್ರಧಾನಿ ಮಹೀಂದ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಹೀಂದ ರಾಜಪಕ್ಸೆ ಜೊತೆಗೆ ಶ್ರೀಲಂಕಾ ಆರೋಗ್ಯ ಸಚಿವ ಫ್ರೋ.ಚನ್ನ ಜಯಸುಮನಾ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.

ಶ್ರೀಲಂಕಾದಲ್ಲಿನ ಪರಿಸ್ಥಿತಿಗೆ ಸರ್ಕಾರವೇ ನೇರ ಹೊಣೆ ಎಂದು ಪ್ರತಿಭಟನೆ ನಡೆಯುತ್ತಲೇ ಇದೆ. ವಿಪಕ್ಷಗಳು ಸೇರಿ ನಾಗರೀಕರು ಪ್ರಧಾನಿ ಹಾಗೂ ಅಧ್ಯಕ್ಷರ ರಾಜೀನಾಮೆಗೆ ಒತ್ತಡ ಹೆಚ್ಚಾಗಿತ್ತು. ಕಳೆದ ತಿಂಗಳಿನಿಂದ ರಾಜೀನಾಮೆ ಮಾತನ್ನು ತಳ್ಳಿ ಹಾಕಿದ್ದ ಮಹೀಂದ ರಾಜಪಕ್ಸೆ ಇದೀಗ ದಿಢೀರ್ ರಾಜೀನಾಮೆ ನೀಡಿದ್ದಾರೆ. 

ಇಂದು ಬೆಳಗ್ಗೆ ಅಧ್ಯಕ್ಷ ಗೊಟಬಯ ರಾಜಪಕ್ಸೆ ನಿವಾಸ ಎದರು ಪ್ರತಿಭಟನೆ ತೀವ್ರಗೊಂಡಿತ್ತು. ಇದರ ಬೆನ್ನಲ್ಲೇ ಮಹೀಂದ ರಾಜಪಕ್ಸೆ ರಾಜೀನಾಮೆ ನೀಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಪರಿಣಾಮ ಹಲವೆಡೆ ಕರ್ಫ್ಯೂ ಹೇರಲಾಗಿದೆ. ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿದೆ.

ತವರಿಗೆ ಹಣ ಕಳಿಸಿಕೊಡಿ, ವಿದೇಶದಲ್ಲಿರುವ ಲಂಕಾ ಪ್ರಜೆಗಳಿಗೆ ಶ್ರೀಲಂಕಾ ಸರ್ಕಾರದ ಮನವಿ!

ವಿಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ ಬೆನ್ನಲ್ಲೇ ಶ್ರೀಲಂಕಾ ಅಧ್ಯಕ್ಷ ಗೋಟಬಾಯ ರಾಜಪಕ್ಷೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಈ ತುರ್ತು ಪರಿಸ್ಥತಿ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಈ ತುರ್ತು ಪರಿಸ್ಥಿತಿ ಘೋಷಣೆಯು ಪೊಲೀಸರಿಗೆ ಮತ್ತು ಭದ್ರತಾ ಪಡೆಗಳಿಗೆ ಜನರನ್ನು ನಿರಂಕುಶವಾಗಿ ಬಂಧಿಸಲು ಮತ್ತು ವಶಕ್ಕೆ ಪಡೆದುಕೊಳ್ಳು ಅನುಮತಿಯನ್ನು ನೀಡುತ್ತದೆ. ದೇಶದ ಸುಗಮ ನಿರ್ವಹಣೆಗಾಗಿ ಮತ್ತು ಸಾರ್ವಜನಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಈ ತುರ್ತು ಪರಿಸ್ಥತಿ ಘೋಷಿಸಲಾಗಿದೆ ಎಂದು ಅಧ್ಯಕ್ಷೀಯ ಮಾಧ್ಯಮ ವಿಭಾಗ ತಿಳಿಸಿದೆ. ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ಜನರು ಪ್ರತಿಭಟನೆ ನಡೆಸಿದ ವಾರದಲ್ಲೇ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಶ್ರೀಲಂಕ ಇತಿಹಾಸದಲ್ಲೇ ಕಾಣದ ಭೀಕರ ಆರ್ಥಿಕ ಕುಸಿತವನ್ನು ಅನುಭವಿಸುತ್ತಿದೆ. ಏ.1ರಂದು ಸಹ ತುರ್ತುಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ಅದನ್ನು ಏ.5ರಂದು ಹಿಂಪಡೆಯಲಾಗಿತ್ತು. ಈ ನಡುವೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ಮಹಿಂದ ರಾಜಪಕ್ಸೆ ರಾಜೀನಾಮೆಗೆ ಬೇಡಿಕೆ ವ್ಯಕ್ತವಾಯಿತು ಎನ್ನಲಾಗಿದೆ.

ಒಂದೇ ತಿಂಗಳಲ್ಲಿ 2ನೇ ಬಾರಿ ತುರ್ತುಪರಿಸ್ಥತಿ ಘೋಷಿಸಿರುವ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಇದು ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಲು ಭದ್ರತಾ ಪಡೆಗಳಿಗೆ ಶಕ್ತಿ ನೀಡುತ್ತದೆ ಎಂದು ವಿಪಕ್ಷಗಳು, ವಿದೇಶಿ ರಾಯಭಾರಿಗಳು ವಾಗ್ದಾಳಿ ನಡೆಸಿದ್ದಾರೆ.

ಆರ್ಥಿತ ಕುಸಿತದ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಹೀಗಾಗಿ ಪ್ರತಿಭಟನಾಕಾರರನ್ನು ಬಂಧಿಸುವ ಮತ್ತು ವಶಕ್ಕೆ ಪಡೆಯುವ ಅಧಿಕಾರವನ್ನು ತುರ್ತು ಪರಿಸ್ಥಿತಿ ಪೊಲೀಸರಿಗೆ ನೀಡಿದೆ. ಇದಕ್ಕೆ ದೇಶದ ಮಾನವಹಕ್ಕು ಸಂಘಟನೆ, ವಕೀಲರ ಸಂಘ, ವಿಪಕ್ಷಗಳು ಮತ್ತು ವಿದೇಶಿ ರಾಯಭಾರಿಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.