ಶ್ರೀಲಂಕಾ ಅಧ್ಯಕ್ಷ ಗೊಟಬಯ ಸಹೋದರ ಬಸಿಲ್ ರಾಜಪಕ್ಸ ಮಾಜಿ ವಿತ್ತ ಸಚಿವನಾಗಿದ್ದ ಬಸಿಲ್ ರಾಜಪಕ್ಸ ಪಲಾಯನ ಯತ್ನ ವಿಮಾನ ನಿಲ್ದಾಣದಲ್ಲಿ ಲಂಕಾ ನಾಗರೀಕರಿಂದ ತಡೆ
ಕೊಲೊಂಬೊ(ಜು.12): ಶ್ರೀಲಂಕಾದಲ್ಲಿ ಸೃಷ್ಟಿಯಾಗಿರುವ ಅರಾಜಕತೆ, ಆರ್ಥಿಕ ಸಂಕಷ್ಟ, ರಾಜಕೀಯ ಬಿಕ್ಕಟ್ಟಿನಿಂದ ಪಾರಾಗಲು ಅಧ್ಯಕ್ಷ ಗೊಟಬಯ ರಾಜಪಕ್ಸ ಹಾಗೂ ಕುಟುಂಬ ಪಲಾಯನ ಯತ್ನ ಮಾಡುತ್ತಿದೆ. ಈಗಾಗಲೇ ಗೊಟಬಯ ರಾಜಪಕ್ಸ್ ರಾತ್ರೋರಾತ್ರಿ ಪಲಾಯನ ಮಾಡಿದ್ದಾರೆ. ಇದೀಗ ಗೊಟಬಯ ಸಹೋದರ, ಮಾಜಿ ಹಣಕಾಸು ಸಚಿವ ಬಸಿಲ್ ರಾಜಪಕ್ಸ ಪಲಾಯನಕ್ಕೆ ಯತ್ನಿಸಿ ವಿಫಲರಾಗಿದ್ದಾರೆ. ಕಾರಣ ಮಧ್ಯರಾತ್ರಿ ಕೊಲೊಂಬೊ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಸಿಲ್ ರಾಜಪಕ್ಸ, ದುಬೈಗೆ ಪಲಾಯನ ಮಾಡಲು ಯತ್ನಿಸಿದ್ದಾರೆ. ಆದರೆ ಮಾಜಿ ವಿತ್ತ ಸಚಿವನ ಗುರುತಿಸಿದ ವಿಮಾನ ನಿಲ್ದಾಣದಲ್ಲಿದ್ದ ಶ್ರೀಲಂಕಾ ನಾಗರೀಕರು ಭಾರಿ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಪಲಾಯನ ಮಾಡಲು ಮಾಡಲು ಯತ್ನಿಸಿದ ಬಸಿಲ್ ರಾಜಪಕ್ಸರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ನಾಗರೀಕರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಇಮಿಗ್ರೇಶನ್ ಅಧಿಕಾರಿ ಬಸಿಲ್ ರಾಜಪಕ್ಸ ಅವರ ಪ್ರಯಾಣಕ್ಕೆ ಅನುವು ಮಾಡಿಕೊಡಲಿಲ್ಲ. ಹೀಗಾಗಿ ಬಸಿಲ್ ಮತ್ತೆ ಶ್ರೀಲಂಕಾದಲ್ಲೇ ಉಳಿದುಕೊಂಡಿದ್ದಾರೆ.
ಇಂದು ಮುಂಜಾನೆ 12.15 ಗಂಟೆ ಸುಮಾರಿಗೆ ವಿಐಪಿ ಟರ್ಮಿನಲ್‌ಗೆ ಆಗಮಿಸಿದ ಬಸಿಲ್ ರಾಜಪಕ್ಸ ಗುರುತಿಸಿದ ನಾಗರೀಕರು, ದುಬೈಗೆ ಪಲಾಯನ ಮಾಡಲು ವಿರೋಧಿಸಿದ್ದಾರೆ. 3 .15ರ ತನಕ ನಾಗರೀಕರು ಬಸಿಲ್ ರಾಜಪಕ್ಸ ಅವರನ್ನು ಬಿಟ್ಟಿಲ್ಲ. ಹೀಗಾಗಿ ಇಮಿಗ್ರೇಷನ್ ಅಧಿಕಾರಿ ಆಗಮಿಸಿ ಬಸಿಲ್ ರಾಜಪಕ್ಸ ಪ್ರಯಾಣ ರದ್ದುಗೊಳಿಸಿದ್ದಾರೆ.
ಶ್ರೀಲಂಕಾ ನಾಗರಿಕರು ಉದ್ರಿಕ್ತ ಪ್ರಧಾನಿ ರನಿಲ್ ಬಿಕ್ರಮಸಿಂಘೆ ನಿವಾಸ ಧಗಧಗ!
ಗೊಟಬಯ ರಾಜಪಕ್ಸ ನಾಳೆ(ಜು.13) ರಾಜೀನಾಮೆ ನೀಡಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಖಚಿತಪಡಿಸಿದೆ. ಸದ್ಯ ರಹಸ್ಯ ಸ್ಥಳದಲ್ಲಿರುವ ರಾಜಪಕ್ಸ ರಾಜೀನಾಮೆಗೆ ಆಗ್ರಹಿಸಿ ಶ್ರೀಲಂಕಾದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಈಗಾಗಲೇ ಶ್ರೀಲಂಕಾದ ಹಲವು ಅಗ್ರ ನಾಯಕರು, ಗೊಟಬಯ ರಾಜಪಕ್ಸ ಕುಟುಂಬ ಸದಸ್ಯರು ದುಬೈ ಸೇರಿದಂತೆ ಇತರ ರಾಷ್ಟ್ರಗಳಿಗೆ ಪಲಾಯನ ಮಾಡಿದ್ದಾರೆ. ಇದೀಗ ಇತರ ಕೆಲ ನಾಯಕರು ವಿದೇಶಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದಾರೆ.
ಗೊಟಬಯ ರಾಜಪಕ್ಸ ಕೂಡ ವಿದೇಶಕ್ಕೆ ಪಲಾಯನ ಮಾಡಲು ಯತ್ನಿಸಿದ್ದಾರೆ. ಆದರೆ ಇಮಿಗ್ರೇಶನ್ ಅಧಿಕಾರಿ ಪಲಾಯನಕ್ಕೆ ಅವಕಾಶ ನೀಡಿಲ್ಲ ಅನ್ನೋ ಮಾಹಿತಿಗಳು ಲಭ್ಯವಾಗಿದೆ. ಗೊಟಬಯ ರಾಜಪಕ್ಸ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ವಿದೇಶಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದಾರೆ. ರಾಜೀನಾಮೆ ನೀಡಿದ ಬೆನ್ನಲ್ಲೇ ಗೊಟಬಯ ರಾಜಪಕ್ಸ ಬಂಧನವಾಗುವ ಸಾಧ್ಯತೆ ಇದೆ. ಇತ್ತ ನಾಗರೀಕರು ದಾಳಿ ನಡೆಸುವ ಸಾಧ್ಯತೆಯೂ ಹೆಚ್ಚಾಗಿದೆ. ಹೀಗಾಗಿ ವಿದೇಶಕ್ಕೆ ಹಾರಲು ಭಾರಿ ಯತ್ನ ನಡೆಸುತ್ತಿದ್ದಾರೆ ಅನ್ನೋ ಮಾಹಿತಿಗಳು ಲಭ್ಯವಾಗಿದೆ. ಇದೇ ಕಾರಣಕ್ಕೆ ಜುಲೈ 13ರ ವರೆಗೆ ರಾಜೀನಾಮೆಗೆ ಅವಕಾಶ ಪಡೆದುಕೊಂಡಿದ್ದಾರೆ. ಆದರೆ ರಾಜಪಕ್ಸ ವಿದೇಶಿ ಪಲಾಯನಕ್ಕೆ ಇದುವರೆಗೂ ಸಾಧ್ಯವಾಗಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ.
ದ್ವೀಪ ರಾಷ್ಟ್ರದಲ್ಲಿ ಅರಾಜಕತೆಯ ತುತ್ತ ತುದಿಗೆ: ಅಧ್ಯಕ್ಷ ಗೊಟಬಾಯ ರಾಜಪಕ್ಸೆ ಪರಾರಿ!
ದುಬೈಗೆ ಪಲಾಯನ ಮಾಡಲು ಗೊಟಬಯ ರಾಜಪಕ್ಸ ಹಾಗೂ ಪತ್ನಿ ಶ್ರೀಲಂಕಾ ವಿಮಾನ ನಿಲ್ದಾಣದ ಬಳಿ ಇರುವ ಮಿಲಿಟರಿ ಬೇಸ್ ಕ್ಯಾಂಪ್‌ನಲ್ಲಿ ಇಡೀ ರಾತ್ರಿ ಕಾಯುತ್ತಾ ಕುಳಿತರೂ ಇಮಿಗ್ರೇಶನ್ ಅಧಿಕಾರಿ ಗೊಟಬಯ ಹಾಗೂ ಅವರ ಪತ್ನಿ ಹಾರಾಟಕ್ಕೆ ಅವಕಾಶ ನೀಡಿಲ್ಲ. 4 ದುಬೈ ವಿಮಾನ ಹಾರಿಹೋದರು ಗೊಟಬಯ ಮಾತ್ರ ಮಿಲಿಟರಿ ಬೇಸ್‌ಕ್ಯಾಂಪ್‌ನಲ್ಲಿ ಉಳಿಯಬೇಕಾಯಿತು ಅನ್ನೋ ರಹಸ್ಯ ಮಾಹಿತಿ ಬಹಿರಂಗವಾಗಿದೆ.
ಇದರ ನಡುವೆ ಗೊಟಬಯ ರಾಜಪಕ್ಸ ಸೇರಿದಂತೆ ಹಲವು ಟಾಪ್ ನಾಯಕರಿಗೆ ಭಾರತ ಆಶ್ರಯ ನೀಡಿದೆ ಅನ್ನೋ ಆರೋಪ ಕೇಳಿಬಂದಿದೆ. ಈ ಆರೋಪಕ್ಕೆ ಭಾರತ ಉತ್ತರಿಸಿದೆ. ಭಾರತಕ್ಕೆ ಯಾವುದೇ ಶ್ರೀಲಂಕಾ ನಾಯಕರ ಆಗಮಿಸಿಲ್ಲ. ಅವರಿಗೆ ಭಾರತ ಆಶ್ರಯ ನೀಡಿಲ್ಲ. ಈ ವರದಿಗಳು ಆಧಾರರಹಿತ ಎಂದು ಭಾರತ ಪ್ರತಿಕ್ರಿಯೆಸಿದೆ.
