Asianet Suvarna News Asianet Suvarna News

ಸಮುದ್ರದಾಳದ ಕಸ ಸ್ವಚ್ಛಗೊಳಿಸುತ್ತಿದ್ದವರ ಕೈ ಸೇರಿತು ಚಿನ್ನದ ನಾಣ್ಯಗಳ ಖಜಾನೆ!

* ನೀಲಸಮುದ್ರದಾಳದಲ್ಲಿ ಸಿಕ್ತು ಖಜಾನೆ

* ಇಬ್ಬರು ಡೈವರ್‌ಗಳ ಕೈ ಸೇರಿತು ಚಿನ್ನದ ನಾಣ್ಯಗಳ ಖಜಾನೆ

* 4 ನೇ ಶತಮಾನಕ್ಕಿಂತ ಹಿಂದಿನ ಚಿನ್ನಗಳಿಂದ ಬದಲಾಯ್ತು ಅದೃಷ್ಟ

Spain Roman gold coins found by amateur divers clearing trash pod
Author
Bangalore, First Published Sep 27, 2021, 2:30 PM IST
  • Facebook
  • Twitter
  • Whatsapp

ಸ್ಪೇನ್(ಸೆ.27): ನೀಲಸಮುದ್ರದಾಳದಲ್ಲಿ(Sea) ಅದೆಷ್ಟೋ ರಹಸ್ಯಗಳು ಅಡಗಿರುತ್ತವೆ. ವಿಜ್ಞಾನಿಗಳು ಕೆಲ ವಿಚಾರಗಳ ಬಗ್ಗೆ ಸಂಶೋಧನೆ ನಡೆಸುತ್ತಲೇ ಇರುತ್ತಾರೆ, ಇನ್ನು ಕೆಲವೊಮ್ಮೆ ಈ ವಿಚಾರಗಳು ತನ್ನಿಂತಾನಾಗೇ ಬೆಳಕಿಗೆ ಬರುತ್ತವೆ. ಸದ್ಯ ಸ್ಪೇನ್‌ನ(Spain) ಇಬ್ಬರು ಡೈವರ್‌ಗಳಿಗೆ ಇದೇ ರೀತಿಯ ಅನುಭವವಾಗಿದೆ. ಅಲಿಕಾಂಟೆಯಲ್ಲಿ, ಇಬ್ಬರು ಡೈವರ್‌ಗಳು(Diver) ಸಮುದ್ರದ ಆಳದಲ್ಲಿದ್ದ ಕಸವನ್ನು ತೆಗೆಯುತ್ತಿದ್ದರು ಹೀಗಿರುವಾಗ ಇದ್ದಕ್ಕಿದ್ದಂತೆ ಚಿನ್ನದ ನಾಣ್ಯಗಳು(Gold Coins) ಅವರ ಕೈ ಸೇರಿದೆ. ಅವರ ಅದೃಷ್ಟ ಇದಕ್ಕೂ ಮಿಗಿಲಾಗಿತ್ತು. ಯಾಕೆಂದರೆ ಅವರ ಕೈ ಸೇರಿದ್ದ ಆ ನಾಣ್ಯಗಳು 4 ನೇ ಶತಮಾನಕ್ಕಿಂತ ಹಿಂದಿನದ್ದಾಗಿದ್ದು, ಅಂದಿನಿಂದ ಮುಟ್ಟದೇ ಅಲ್ಲೇ ಬಿದ್ದಿದ್ದವು. ಪ್ರಾಚೀನ ಇತಿಹಾಸದ ಈ ಆವಿಷ್ಕಾರ ಎಲ್ಲರನ್ನೂ ಅಚ್ಚರಿಗಿಡು ಮಾಡಿದೆ.

ಎರಡು ಗಂಟೆಗಳ ಅಗೆಯುವಿಕೆ

ಡೈಲಿಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ಸುಮಾರು 1500 ವರ್ಷಗಳ ಹಿಂದೆ ಈ 53 ನಾಣ್ಯಗಳನ್ನು ಶತ್ರುಗಳಿಂದ ರಕ್ಷಿಸುವ ಉದ್ದೇಶದಿಂದ ಇಲ್ಲಿ ಇರಿಸಲಾಗಿತ್ತು ಎನ್ನಲಾಗಿದೆ. ಹೌದು ಲೂಯಿ ಲೆನ್ಸ್ ಮತ್ತು ಸೆಜರ್ ಹೆಸರಿನ ಇಬ್ಬರು ಡೈವರ್‌ಗಳು ಸಮುದ್ರದಿಂದ ಸುಮಾರು 7 ಮೀಟರ್ ಆಳದಲ್ಲಿ ಜಮಾವಣೆಗೊಂಡಿದ್ದ ಜಾಮೂ ಶಬಿಯಾ ಎಂಬ ಸ್ಥಳದಲ್ಲಿ ಕಸವನ್ನು ತೆರವುಗೊಳಿಸುತ್ತಿದ್ದರು. ಆಗ ಅವರಿಗೆ 10 ಸೆಂಟ್ ನಾಣ್ಯ ಇಲ್ಲಿ ಬಿದ್ದಿದೆ ಎಂದು ಅನುಭವಕ್ಕೆ ಬಂದಿದೆ. ಆದರೆ ಅದೊಂದು ಗುಂಡಿಯಲ್ಲಿತ್ತು. ಅದನ್ನು ಹೆಕ್ಕಿ ದೋಣಿಗೆ ಮತರಳಿ ಪರಿಶೀಲಿಸಿದಾಗ ಅದರ ಮೇಲೆ ಗ್ರೀಕ್ ಅಥವಾ ರೋಮನ್ ಮುಖ ಕಾಣಿಸಿದೆ. ಬಳಿಕ ಇಬ್ಬರೂ ಈ ನಾಣ್ಯವನ್ನು ಸಿಕ್ಕ ಸ್ಥಳಕ್ಕೆ ಮರಳಿ ಸುಮಾರು ಎರಡು ಗಂಟೆಗಳ ಕಾಲ ಅಗೆದಿದ್ದಾರೆ.

ಅತೀ ಹೆಚ್ಚು ನಾಣ್ಯಗಳ ಖಜಾನೆ

ಅಲಿಕಾಂಟೆ ವಿಶ್ವವಿದ್ಯಾನಿಲಯದ ಜೇಮೀ ಮೊಲಿನಾ ಈ ಬಗ್ಗೆ ವಿವರಿಸುತ್ತಾ ಸ್ಪೇನ್ ಅಥವಾ ಯುರೋಪ್ ಈವರೆಗೆ ಸಿಕ್ಕ ಅತೀ ಹೆಚ್ಚು ನಾಣ್ಯಗಳ ನಿಧಿ ಇದಾಗಿದೆ ಎಂದಿದ್ದಾರೆ. ಪಾಶ್ಚಿಮಾತ್ಯ ರೋಮನ್ ಸಾಮ್ರಾಜ್ಯದ ನಿರ್ಣಾಯಕ ಅವಧಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಆವಿಷ್ಕಾರ ಅಮೂಲ್ಯವಾದ ಪಾತತ್ರ ವಹಿಸುತ್ತದೆ. ಇನ್ನು ವಿಶ್ವವಿದ್ಯಾನಿಲಯದ ತಜ್ಞರು ಇದನ್ನು ಪರಿಶೀಲಿಸಿ ಸಿಕ್ಕ ನಾಣ್ಯಗಳಲ್ಲಿ ಮೂರರಲ್ಲಿ, ರೋಮನ್ ರಾಜ ವ್ಯಾಲೆಂಟೀನಿಯನ್ I ಮುಖವಿದೆ, 7 ನಾಣ್ಯಗಳ ಮೇಲರ ವ್ಯಾಲೆಂಟಿನಿಯನ್ II, 15 ನಾಣ್ಯಗಳ ಮೇಲೆ ಥಿಯೋಡೋಸಿಯಸ್, 17 ನಾಣ್ಯಗಳ ಮೇಲೆ ಅರ್ಕಾಡಿಯೋ ಮತ್ತು 10 ನಾನ್ಯಗಳ ಮೇಲೆ ಹೊನೊರಿಯಸ್ ಅವರ ಚಿತ್ರವಿದೆ ಎಂದು ಗುರುತಿಸಿದ್ದಾರೆ.

ರೋಮನ್ ಸಾಮ್ರಾಜ್ಯಕ್ಕಿತ್ತು ಭಯ?

ಈ ಬಗ್ಗೆ ವಿವರಿಸಿರುವ ಮೊಲಿನಾ ಇಲ್ಲಿ ಈವರೆಗೆ ಯಾವುದೇ ಮುಳುಗಿದ ಹಡಗಿನ ಅವಶೇಷಗಳುಕಂಡುಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಅಲನ್ ನಂತಹ ಶತ್ರುವಿಂದ ತಪ್ಪಿಸಲು ಈ ನಿಧಿಯನ್ನು ಉದ್ದೇಶಪೂರ್ವಕವಾಗಿ ಇಲ್ಲಿ ಬಚ್ಚಿಡಲಾಗಿದೆ. ರೋಮನ್ ಸಾಮ್ರಾಜ್ಯದಲ್ಲಿ ಯಾವ ರೀತಿಯ ಭಯವಿತ್ತು ಎಂಬುದನ್ನು ಇದು ವಿವರಿಸುತ್ತದೆ. ಅವನು ತನ್ನ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದ್ದನು ಮತ್ತು ಸ್ಪೇನ್‌ನಲ್ಲಿ ಹಿಂಸೆಯ ಭಯವಿತ್ತು. ಈ ನಾಣ್ಯಗಳನ್ನು ಈಗ ಸ್ಥಳೀಯ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುವುದು. ಶಾಬಿಯಾ ಕೊಲ್ಲಿಯನ್ನು ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳಿಗೆ ಮುಖ್ಯವೆಂದು ಪರಿಗಣಿಸಲಾಗಿದೆ. ಇಲ್ಲಿ ಮೊದಲು ಅನೇಕ ವಿಷಯಗಳನ್ನು ಪತ್ತೆ ಮಾಡಲಾಗಿದೆ ಎಂದಿದ್ದಾರೆ.

Follow Us:
Download App:
  • android
  • ios