Asianet Suvarna News Asianet Suvarna News

ಶತಮಾನದ ಪದ್ಧತಿಗೆ ಬೀಳುತ್ತಾ ಬ್ರೇಕ್?: ಮುಗ್ಧ ಪ್ರಾಣಿಗಳ ರೋಧನಕ್ಕೆ ಕೊನೆ!

* ದಕ್ಷಿಣ ಕೊರಿಯಾದ ಶತಮಾನಗಳ ಪದ್ಧತಿಗೆ ಬ್ರೇಕ್

* ಮುಗ್ಧ ಪ್ರಾಣಿಗಳ ರೋಧನ ಕೊನೆ?

* ಪ್ರತಿಭಟನೆಗಳ ಬೆನ್ನಲ್ಲೇ ನಾಯಿ ಮಾಂಸ ಭಕ್ಷಣೆಗೆ ನಿಷೇಧ?

South Korean president suggests ban on eating dog meat pod
Author
Bangalore, First Published Sep 28, 2021, 12:07 PM IST
  • Facebook
  • Twitter
  • Whatsapp

ದಕ್ಷಿಣ ಕೊರಿಯಾ(ಸೆ.28): ದಕ್ಷಿಣ ಕೊರಿಯಾದಲ್ಲಿ(South Korea), ನಾಯಿ ಮಾಂಸ(Dog Meat) ತಿನ್ನುವ ಶತಮಾನಗಳ ಸಂಪ್ರದಾಯ ನಿಷೇಧಿಸುವುದು ಬಹುತೇಕ ಖಚಿತವಾಗಿದೆ. ಕಳೆದ ವರ್ಷ ಹ್ಯೂಮನ್ ಸೊಸೈಟಿ ಸಮೀಕ್ಷೆಯೊಂದನ್ನು ನಡೆಸಿತ್ತು. ಇದರಲ್ಲಿ ಶೇ 84ರಷ್ಟು ಜನರು ನಾಯಿ ಮಾಂಸ ತಿನ್ನುವುದಿಲ್ಲ ಎಂದು ಭರವಸೆ ನೀಡಿದ್ದರು. ಈಗ ಅಧ್ಯಕ್ಷ ಮೂನ್ ಜೇ-ಇನ್(Moon Jae-in) ಈ ವಿವಾದಾತ್ಮಕ ಸಂಪ್ರದಾಯ ನಿಷೇಧಿಸುವ ಸೂಚನೆ ನೀಡಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಪ್ರತಿ ವರ್ಷ ಒಂದು ಮಿಲಿಯನ್ ನಾಯಿಗಳನ್ನು ಆಹಾರಕ್ಕಾಗಿ ಕೊಲ್ಲಲಾಗುತ್ತದೆ.

ದೀರ್ಘ ಕಾಲದಿಂದ ಪ್ರತಿಭಟನೆ

ಈ ಬಗ್ಗೆ ಮಾಹಿತಿ ನೀಡಿದ ಅಧ್ಯಕ್ಷ ಮೂನ್ ಜೇ-ಇನ್(Moon Jae-in) ಅವರ ವಕ್ತಾರ 'ಮೂನ್ ಜೇ-ಇನ್ ಈ ಸಂಪ್ರದಾಯವನ್ನು ನಿಷೇಧಿಸುವ ಸಮಯ ಬಂದಿದೆ ಎಂದು ಬಯಸುತ್ತಾರೆ ಎಂದಿದ್ದಾರೆ. ನಾಯಿಗಳ ಮಾಂಸಕ್ಕೆ ಸಂಬಂಧಿಸಿದಂತೆ ಇಲ್ಲಿ ದೀರ್ಘಕಾಲದಿಂದ ಪ್ರತಿಭಟನೆಗಳು ನಡೆಯುತ್ತಿವೆ. ಈ ದೇಶದಲ್ಲಿ ನಾಯಿ ಮಾಂಸವನ್ನು ತಿನ್ನುವ ಪುರಾತನ ಪದ್ಧತಿ ಇದೆ. ಈ ಮೊದಲು ಜನರು ನಾಯಿ ಮಾಂಸ ಬಹಳ ಇಷ್ಟಪಡುತ್ತಿದ್ದರು, ಆದರೀಗ ಜನರು ಇದರಿಂದ ದೂರ ಹೋಗುತ್ತಿದ್ದಾರೆ. ಅಲ್ಲದೇ ಈಗಿನ ಯುವ ಪೀಳಿಗೆ ಇದನ್ನು ವಿರೋಧಿಸಲು ಆರಂಭಿಸಿದೆ. ಹ್ಯೂಮನ್ ಸೊಸೈಟಿ ಸಮೀಕ್ಷೆಯನ್ವಯ ಶೇ. 60ರಷ್ಟು ಜನರು ಈ ಪದ್ಧತಿಯನ್ನು ಶಾಶ್ವತವಾಗಿ ನಿಷೇಧಿಸಬೇಕೆಂದು ಬಯಸಿದೆ.

ಅಧ್ಯಕ್ಷರಿಗೆ ನಾಯಿಗಳ ಮೇಲೆ ಬಹಳ ಪ್ರೀತಿ

ಪ್ರಧಾನಿ ಕಿಮ್ ಬೂ-ಕ್ಯುಮ್(Kim Boo-kyum)  ಜೊತೆ ವಾರದ ನಡುವೆ ನಡೆದ ಮಾತುಕತೆ ವೇಳೆ ಅಧ್ಯಕ್ಷ ಮೂನ್ ಜೇ-ಇನ್ ಈ ವಿಚಾರದ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ಈ ಸಂಪ್ರದಾಯವನ್ನು ನಿಲ್ಲಿಸಬೇಕು ಎಂಬ ಅಭಿಪ್ರಾಯ ಇಬ್ಬರೂ ನಾಯಕರು ನಿಡಿದ್ದಾರೆ. ಆದರೆ ಅಂತಿಮವಾಗಿ ಏನು ನಿರ್ಧರಿಸಿದ್ದಾರೆಂದು ಇನ್ನೂ ತಿಳಿದು ಬಂದಿಲ್ಲ. ಇನ್ನು ಅಧ್ಯಕ್ಷ ಮೂನ್‌ಗೆ ನಾಯಿಗಳೆಂದರೆ ತುಂಬಾ ಇಷ್ಟ. ಅವರು ರಾಷ್ಟ್ರಪತಿ ಭವನದಲ್ಲಿ ಅನೇಕ ನಾಯಿಗಳನ್ನು ಸಾಕಿದ್ದಾರೆ. ಇವುಗಳಲ್ಲಿ ನಾಯಿ 'ಟೋರಿ' ಕೂಡಾ ಸೇರಿದೆ, ಅದನ್ನು ಅಧ್ಯಕ್ಷರೇ ರಕ್ಷಿಸಿದ್ದರು.

ಪ್ರಾಣಿ ರಕ್ಷಣೆ ಕಾನೂನು ಜಾರಿಯಲ್ಲಿದ್ದರೂ ನಾಯಿಗಳ ಹತ್ಯೆ

ನಾಯಿಗಳು ಮತ್ತು ಬೆಕ್ಕುಗಳ ಕ್ರೂರ ಹತ್ಯೆ ತಡೆಯಲು ದಕ್ಷಿಣ ಕೊರಿಯಾ ಪ್ರಾಣಿ ಸಂರಕ್ಷಣಾ ಕಾನೂನನ್ನು ಜಾರಿಗೊಳಿಸಿದೆ. ಆದರೆ ಈ ಕಾನೂನು ಜಾರಿಯಲ್ಲಿದ್ದರೂ ರೆಸ್ಟೋರೆಂಟ್‌ಗಳು ಮತ್ತು ಸಂಸ್ಥೆಗಳಲ್ಲಿ ಮಾಂಸ ಸೇವನೆಯನ್ನು ನಿಷೇಧಿಸಿಲ್ಲ. ಕೊರಿಯನ್ ಸಂಸ್ಕೃತಿಯಲ್ಲಿ, ನಾಯಿ ಮಾಂಸವು ಪೌರಾಣಿಕ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಈ ಕಾರಣದಿಂದ ಸರ್ಕಾರಕ್ಕೆ ಇದನ್ನು ನಿಷೇಧಿಸಲು ಸಾಧ್ಯವಾಗಿಲ್ಲ. 

Follow Us:
Download App:
  • android
  • ios